ಮಂಡ್ಯ: ಇಲ್ಲಿನ ಕರಿಘಟ್ಟದ ಅರಣ್ಯಕ್ಕೆ ಬೆಂಕಿ ಹಚ್ಚಿದರೆ ಮಕ್ಕಳಾಗುತ್ತದೆ ಎಂಬ ಮೂಢನಂಬಿಕೆ ಹಲವರಲ್ಲಿದ್ದು, ಇದೇ ಕಾರಣಕ್ಕಾಗಿ ಆಗಾಗ ಬೆಂಕಿ ಹಚ್ಚುತ್ತಲೇ ಬರುತ್ತಿದ್ದಾರೆ. ಈಗ ಮತ್ತೊಮ್ಮೆ ಕಿಡಿಗೇಡಿಗಳಿಂದ ಬೆಂಕಿ (Fire Accident) ಹಚ್ಚಲಾಗಿದ್ದು, ಇದರಿಂದ ಪ್ರಾಣ ಉಳಿಸಿಕೊಳ್ಳಲು ಚಿಕ್ಕಪುಟ್ಟ ಅರಣ್ಯ ಜೀವಿಗಳು ಪರದಾಡಿವೆ.
ಬೆಂಕಿಯಿಂದಾಗಿ ಬೆಟ್ಟದಲ್ಲಿ ಹಲವು ಚಿಕ್ಕ ಚಿಕ್ಕ ವನ್ಯಜೀವಿಗಳು ಸುಟ್ಟು ಭಸ್ಮವಾಗಿವೆ. ಬೆಂಕಿಯಿಂದ ಪಾರಾಗಲು ಹಾವೊಂದು ಮರವನ್ನು ಏರಿತ್ತು. ಈ ದೃಶ್ಯ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. ಸ್ಥಳೀಯ ಪರಿಸರ ಪ್ರೇಮಿಯೊಬ್ಬರ ಮೊಬೈಲ್‌ನಲ್ಲಿ ಹಾವಿನ ಪರದಾಟ ದೃಶ್ಯ ಸೆರೆಯಾಗಿದೆ.
ಇದನ್ನು ಓದಿ: Valentines day 2023 : ಉಡುಪಿಯಲ್ಲಿ ಗೋವುಗಳನ್ನು ಅಪ್ಪಿಕೊಂಡು, ಮುದ್ದಿಸಿ ಪ್ರೇಮಿಗಳ ದಿನ ಆಚರಣೆ
ಮೌಢ್ಯದಿಂದ ಯಾರೂ ಬೆಂಕಿ ಹಚ್ಚಬೇಡಿ
ಕರಿಘಟ್ಟ ಬೆಟ್ಟಕ್ಕೆ ಮೌಢ್ಯದಿಂದ ಜನರು ಬೆಂಕಿ ಹಚ್ಚುತ್ತಿದ್ದಾರೆ. ಇಲ್ಲಿಗೆ ಬೆಂಕಿ ಹಚ್ಚಿದರೆ ಮಕ್ಕಳಾಗುತ್ತವೆ ಎನ್ನುವ ಪ್ರತೀತಿಗೆ ಈ ರೀತಿ ಮಾಡಲಾಗುತ್ತದೆ. ಆದರೆ, ಮೌಢ್ಯತೆಯನ್ನು ನಂಬಿ ಬೆಟ್ಟದ ಅರಣ್ಯಕ್ಕೆ ಬೆಂಕಿ ಹಚ್ಚಬಾರದು. ಇದರಿಂದ ವನ್ಯಜೀವಿಗಳು ನಾಶವಾಗುತ್ತವೆ ಎಂದು ಪರಿಸರ ಪ್ರೇಮಿ ರಮೇಶ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.