ಬೆಂಗಳೂರು: ನಗರದ ನಂದಿನಿ ಲೇಔಟ್‌ನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಎರಡು ಕಾರುಗಳು ಶುಕ್ರವಾರ ರಾತ್ರಿ ಬೆಂಕಿಗಾಹುತಿಯಾಗಿವೆ(Car Catches Fire). ರಸ್ತೆ ಬದಿ ಕಸಕ್ಕೆ ಬಿದ್ದ ಬೆಂಕಿ ವ್ಯಾಪಿಸಿ, ಎರಡು ಕಾರುಗಳು ಹೊತ್ತಿ ಉರಿದಿವೆ. ಸ್ಥಳಕ್ಕೆ ಭೇಟಿ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ, ಬೆಂಕಿ ನಂದಿಸುವ ಕಾರ್ಯ ಮಾಡಿದರು. ಬೆಂಕಿಯಿಂದ ಎರಡು ಕಾರುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಇದನ್ನೂ ಓದಿ | Hanuman Chalisa: ಹನುಮಾನ್ ಚಾಲೀಸಾ ಗಲಾಟೆ; ಹಲ್ಲೆಗೊಳಗಾದ ಮುಕೇಶ್ ವಿರುದ್ಧವೇ ಎಫ್‌ಐಆರ್, ಬಿಜೆಪಿ ಆಕ್ರೋಶ
ನಿಂತಿದ್ದ ಬಸ್‌ಗೆ ಚುನಾವಣಾ ವೀಕ್ಷಕರ ವಾಹನ ಡಿಕ್ಕಿ; ಚಾಲಕ, ಪೇದೆ ಗಂಭೀರ
ಕೊಪ್ಪಳ: ನಿಂತಿದ್ದ ಸಾರಿಗೆ ಸಂಸ್ಥೆ ಬಸ್ಸಿಗೆ ಚುನಾವಣಾ ವೀಕ್ಷಕರ ವಾಹನವು ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ರಭಸಕ್ಕೆ ಚುನಾವಣಾ ವೀಕ್ಷಕರ ಜೀಪ್ ಸಂಪೂರ್ಣ ಜಖಂಗೊಂಡಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿದ್ಯಾನಗರದಲ್ಲಿ ಗುರುವಾರ ರಾತ್ರಿ ಅಪಘಾತ ನಡೆದಿದೆ.
ಲೋಕಸಭಾ ಚುನಾವಣೆ ಹಿನ್ನೆಲೆ ಕರ್ತವ್ಯ ಮುಗಿಸಿ ವಾಪಸ್ ಹೋಗುವಾಗ, ನಿಂತಿದ್ದ ಬಸ್ ಕಾಣದೇ ನೇರವಾಗಿ ಜೀಪ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಜೀಪ್‌ನ ಮುಂಭಾಗ ಹಾನಿಯಾಗಿದೆ. ಚುನಾವಣೆ ವೀಕ್ಷಕರ ವಾಹನದ ಡ್ರೈವರ್ ಶಿವಾನಂದ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಓರ್ವ ಪೇದೆಗೆ ಸಣ್ಣ ಪುಟ್ಟ ಗಾಯವಾಗಿದೆ. ಮೀನುಗಾರಿಕೆ ಇಲಾಖೆಗೆ ಸೇರಿದ ವಾಹನ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಗಂಗಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಮಾಹಿತಿ ಪಡೆದು ಆಸ್ಪತ್ರೆಗೆ ಗಂಗಾವತಿ ತಹಶಿಲ್ದಾರ್ ಯು.ನಾಗರಾಜ್ ಧಾವಿಸಿದರು. ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ವೈದ್ಯರಿಗೆ ಸೂಚಿಸಿದರು. ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು, ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Hema Malini: ಹೇಮಾ ಮಾಲಿನಿ ಆಸ್ತಿ ಎಷ್ಟು? ಎಷ್ಟೊಂದು ಫ್ಲ್ಯಾಟ್‌ಗಳ ಒಡತಿ ಈಕೆ!
ಹಿಟ್ ಆ್ಯಂಡ್ ರನ್‌ಗೆ ಯುವಕನ ತಲೆ ಪೀಸ್ ಪೀಸ್; ಗಾಡಿ ಸಮೇತ ಚಾಲಕ ಪರಾರಿ
ಆನೇಕಲ್: ಹಿಟ್ ಆ್ಯಂಡ್ ರನ್‌ಗೆ (Hit And Run Case) ಬೈಕ್ ಸವಾರನೊಬ್ಬ ಬಲಿಯಾಗಿದ್ದಾನೆ. ಬೆಂಗಳೂರು ಹೊರವಲಯದ ಆನೇಕಲ್ (Anekal News) ಪಟ್ಟಣದ ಮಿರ್ಜಾ ರಸ್ತೆಯ ಪೊಲೀಸ್ ಕ್ವಾಟ್ರಸ್ ಮುಂಭಾಗ ಅಪಘಾತ (Road Accident) ಸಂಭವಿಸಿದೆ.
ಶೇಕ್ ಶಹಬಾಶ್ (17) ಮೃತ ದುರ್ದೈವಿ. ಶುಕ್ರವಾರ ಬೆಳಗ್ಗೆ 6.30ರ ಸುಮಾರಿಗೆ ಅಪಘಾತ ನಡೆದಿದೆ. ವೆಂಕಟೇಶ್ವರ ಸರ್ಕಲ್‌ನಿಂದ ರಾಘವೇಂದ್ರ ಭವನ್ ಸರ್ಕಲ್ ಮಾರ್ಗವಾಗಿ ಹೋಗುವಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಶೇಕ್ ಶಹಬಾಶ್ ದೇಹವು ಛಿದ್ರ ಛಿದ್ರವಾಗಿದೆ.
ಬೈಕ್‌ಗೆ ಅಪಘಾತ ನಡೆಸಿ ವಾಹನ ಸಮೇತವಾಗಿ ಚಾಲಕ ಎಸ್ಕೇಪ್ ಆಗಿದ್ದಾನೆ. ಬೈಕ್ ಸವಾರನ ತಲೆಯ ಮೇಲೆ ವಾಹನ ಹತ್ತಿದ್ದರಿಂದ, ತಲೆ ಭಾಗ ಸಂಪೂರ್ಣ ಛಿದ್ರ ಛಿದ್ರವಾಗಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ. ಮಿರ್ಜಾ ರಸ್ತೆಯಲ್ಲಿ ಒಂದೇ ವಾರದಲ್ಲಿ ಎರಡು ಅಪಘಾತ ಸಂಭವಿಸಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿದ್ದರು.
ಇದನ್ನೂ ಓದಿ: Road Rage: ನಿಲ್ಲದ ರೋಡ್ ರೇಜ್; ಬೆಂಗಳೂರಿನ ಬೀದಿಗಳಲ್ಲಿ ಪುಂಡರ ಮತ್ತೊಂದು ಅಟ್ಟಹಾಸ!
ಬೃಹತ್ ಗಾತ್ರದ ವಾಹನ ಚಾಲಕ ಅತಿವೇಗದ ಚಾಲನೆಗೆ ಅಮಾಯಕ ಬೈಕ್ ಸವಾರರು ಬಲಿಯಾಗುತ್ತಿದ್ದಾರೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಅಪಘಾತ ನಡೆಸಿ ವಾಹನ ಸಮೇತವಾಗಿ ಪರಾರಿಯಾಗಿರುವ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.