Site icon Vistara News

Car Catches Fire | ಹೊಸ ವರ್ಷಾಚರಣೆಗೆಂದು ಗೋವಾಗೆ ಹೊರಟವರ ಕಾರಿಗೆ ಬೆಂಕಿ; ಅಪಾಯರಿಂದ ನಾಲ್ವರು ಟೆಕ್ಕಿಗಳು ಪಾರು

Car Catches Fire

ತುಮಕೂರು: ಹೊಸ ವರ್ಷದ ಸಂಭ್ರಮಾಚರಣೆಗೆಂದು ಗೋವಾಗೆ ಹೊಗುತ್ತಿದ್ದವರ ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು(Car Catches Fire), ಅದೃಷ್ಟವಶಾತ್‌ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿರಾ ತಾಲೂಕಿನ ದೊಡ್ಡ ಆಲದಮರದ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಶನಿವಾರ ಅವಘಡ ನಡೆದಿದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಆಂಧ್ರಪ್ರದೇಶ ಮೂಲದ ನಾಲ್ವರು ಟೆಕ್ಕಿಗಳು ಗೋವಾಗೆ ಹೊರಟಿದ್ದರು. ಕಾರು ಚಲಿಸುತ್ತಿದ್ದಾಗ ಸ್ಟೇರಿಂಗ್‌ ಲಾಕ್‌ ಅಗಿದೆ ಎಂದು ಚಾಲಕ ರಸ್ತೆ ಬದಿ ನಿಲ್ಲಿಸಿದ್ದಾನೆ. ಈ ವೇಳೆ ದಿಢೀರನೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ನೋಡ ನೋಡುತ್ತಲೇ ವಾಹನ ಸುಟ್ಟು ಕರಕಲಾಗಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬ್ಯಾಟರಿಯಿಂದ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಅವಘಡ ಆಗಿದೆ ಎನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಇದನ್ನೂ ಓದಿ | Sirsi News | ಬೈಕ್ ಸವಾರರ ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಮೂವರ ಬಂಧನ; ನಗದು, ಬೈಕ್‌ ವಶ

Exit mobile version