ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗುತ್ತಿದ್ದ ಪ್ರವಾಸಿ ಬಸ್ ಒಂದರಲ್ಲಿ ಆಕಸ್ಮಿಕವಾಗಿ ಬೆಂಕಿ (Fire accident) ಕಾಣಿಸಿಕೊಂಡು ಅಪಾಯದ ಸನ್ನಿವೇಶ ನಿರ್ಮಾಣವಾಯಿತು. ಆದರೆ, ಚಾಲಕ ಮೆರೆದ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತ ತಪ್ಪಿತು.
ಇದು ಗುಜರಾತ್ ನಿಂದ ಬಂದಿದ್ದ ಪ್ರವಾಸಿಗರನ್ನು ಹೊತ್ತು ಚಾಮುಂಡಿ ಬೆಟ್ಟಕ್ಕೆ ಸಾಗುತ್ತಿದ್ದ ಬಸ್. ಬೆಳಗ್ಗೆ ಸುಮಾರು ೫೦ರಷ್ಟು ಪ್ರಯಾಣಿಕರನ್ನು ಹೊತ್ತು ಅದು ಚಾಮುಂಡಿ ಬೆಟ್ಟದ ಕಡೆಗೆ ಹೊಗುತ್ತಿತ್ತು. ಆಗ ಬಸ್‌ನಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿತು.
ಚಾಮುಂಡಿಬೆಟ್ಟ ಬಸ್ ನಿಲ್ದಾಣದ ಸಮೀಪ ಸಾಗುತ್ತಿದ್ದಾಗ ಬಸ್‌ನ ಸೈಲೆನ್ಸರ್ ಪೈಪ್ ನಿಂದ ಇದ್ದಕ್ಕಿದ್ದಂತೆ ಹೊಗೆ ಬರಲು ಶುರುವಾಯಿತು. ಬಳಿಕ ಪೈಪ್‌ನಿಂದ ಬೆಂಕಿ ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಚಾಲಕ ಕೂಡಲೇ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ. ಕೂಡಲೇ ಬೆಂಕಿಯ ಸಂಪರ್ಕದ ವೈರ್ ಗಳನ್ನು ಕತ್ತರಿಸಿ ಹಾಕಿದ.
ಡೀಸೆಲ್ ಲೀಕೇಜ್‌ನಿಂದಾಗಿ ಈ ರೀತಿ ಬೆಂಕಿ ಹುಟ್ಟಿಕೊಂಡಿತು ಎಂದು ಬಳಿಕ ತಿಳಿದುಬಂತು. ಒಂದೊಮ್ಮೆ ಬಸ್ ನಿಲ್ಲಿಸದೆ ಮುಂದೆ ಸಾಗಿದ್ದರೆ, ಬೆಂಕಿ ಹತ್ತಿಕೊಂಡಿದ್ದೇ ಗೊತ್ತಾಗದೆ ಇರುತ್ತಿದ್ದರೆ, ಬೆಂಕಿಗೆ ಕನೆಕ್ಟ್ ಅದ ಪೈಪ್‌ಗಳನ್ನು ಕತ್ತರಿಸದೆ ಇದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು ಎಂದು ಹೇಳಲಾಗುತ್ತಿದೆ. ಚಾಲಕನ ಸಮಯಪ್ರಜ್ಞೆಯನ್ನು ಎಲ್ಲರೂ ಹೊಗಳಿದರು.
ಇದನ್ನೂ ಓದಿ | Road accident | ಕ್ಯಾಂಟರ್, ಕೆಎಸ್ಆರ್‌ಟಿಸಿ ಬಸ್ ಮುಖಾಮುಖಿ ಡಿಕ್ಕಿ: ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಸಾವು