Site icon Vistara News

Fire tragedy : ಚಪ್ಪರದ ಗುಡಿಸಲಿಗೆ ಬೆಂಕಿ ಬಿದ್ದು ವೃದ್ಧ ಸಜೀವ ದಹನ, ಏಳು ಎಕರೆ ಕಬ್ಬು ಸಂಪೂರ್ಣ ಅಗ್ನಿಗಾಹುತಿ

Fire incident

#image_title

ಹಾವೇರಿ: ಚಪ್ಪರದ ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು (Fire tragedy) ಕುರಿ ಮತ್ತು ಕುರಿಗಾಹಿ ಸಜೀವ ದಹನಗೊಂಡಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ವ ಘಾಳಪೂಜಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಸಣ್ಣತಮ್ಮಪ್ಪ ಜಾಡರ್ (60) ಮೃತಪಟ್ಟಿದ್ದಾರೆ.

ಸಣ್ಣ ತಮ್ಮಪ್ಪ ಅವರು ಮನೆಯಲ್ಲಿ ಊಟ ಮಾಡಿ ಕುರಿ ಕಟ್ಟುವ ಚಪ್ಪರದ ಮನೆಯಲ್ಲಿ ಮಲಗಿದ್ದರು. ರಾತ್ರಿ ಯಾವುದೋ ಹೊತ್ತಿನಲ್ಲಿ ಆಕಸ್ಮಿಕ ಬೆಂಕಿಗೆ ಚಪ್ಪರದ ಮನೆ ಹೊತ್ತಿ ಉರಿದಿದೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿದ್ಯುತ್ ತಂತಿ ತಗುಲಿ 7 ಎಕರೆ ಕಬ್ಬು ಬೆಂಕಿಗಾಹುತಿ

ಮೈಸೂರು: ವಿದ್ಯುತ್ ತಂತಿ ತಗುಲಿ 7 ಎಕರೆ ಕಬ್ಬು ಬೆಂಕಿಗಾಹುತಿಯಾದ ಘಟನೆ ತಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದಲ್ಲಿ ನಡೆದಿದೆ.
ರೈತ ನಾಗೇಶ್ ಎಂಬುವರಿಗೆ ಸೇರಿದ ಕಬ್ಬಿನ ಗದ್ದೆ ಇದಾಗಿದ್ದು, 7 ಎಕರೆ ಪ್ರದೇಶದಲ್ಲಿ ಬೆಳೆದಿದ್ದ 300 ಟನ್ ಕಬ್ಬು ಸುಟ್ಟು ಹೋಗಿದೆ. ಅಂದಾಜು 9 ಲಕ್ಷ ರೂ. ಮೌಲ್ಯದ ಕಬ್ಬು ಬೆಂಕಿಗಾಹುತಿ ಆಗಿದೆ ಎಂದು ಲೆಕ್ಕ ಹಾಕಲಾಗಿದೆ.
ದಿಕ್ಕು ತೋಚದೆ ಕಂಗಲಾದ ರೈತ ನಾಗೇಶ್ ಅವರು, ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ : Fire tragedy : ಹಂಪಿಯ ಅಕ್ಕ-ತಂಗಿಯರ ಗುಡ್ಡದಲ್ಲಿ ಬೆಂಕಿ, ಧಗಧಗನೆ ಹೊತ್ತಿ ಉರಿಯಿತು ಕುರುಚಲು ಕಾಡು

Exit mobile version