Site icon Vistara News

Fire tragedy : ಬೆಂಕಿ ಬಿದ್ದ ಕೊಟ್ಟಿಗೆಯಿಂದ ನಾಲ್ಕು ದನಗಳನ್ನು ರಕ್ಷಿಸಿದ ಸಾಹಸಿ ಕೊನೆಗೆ ತಾನೇ ಸುಟ್ಟು ಹೋದ

fire tragedy

#image_title

ದೇವನಹಳ್ಳಿ: ದೊಡ್ಡಬಳ್ಳಾಪುರ ತಾಲ್ಲೂಕಿನ ಹೊನ್ನಾಘಟ್ಟ ಗ್ರಾಮದಲ್ಲಿ ಇತ್ತೀಚೆಗೆ ದನದ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದಿತ್ತು. ಬೆಂಕಿಯ ಮಧ್ಯದಲ್ಲಿ (Fire tragedy) ಸಿಕ್ಕಿಹಾಕಿಕೊಂಡ ದನಗಳನ್ನು ರಕ್ಷಿಸಿದ ಆ ವ್ಯಕ್ತಿ ಕೊನೆಗೆ ತಾನೇ ಬೆಂಕಿಯ ಬಲೆಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಮೃತಪಟ್ಟ ಮಾನವೀಯ ಹೃದಯದ ಸಾಹಸಿ ವ್ಯಕ್ತಿಯನ್ನು ಮುನಿಹನುಮಯ್ಯ (60) ಎಂದು ಗುರುತಿಸಲಾಗಿದೆ. ಕಳೆದ ಮಂಗಳವಾರ ಈ ಆಕಸ್ಮಿಕ ನಡೆದಿದ್ದು, ಅಂದು ಸಾಹಸ ಮೆರೆದು ಬೆಂಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮುನಿಹನುಮಯ್ಯ ಅವರು ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಕಳೆದ ಮಂಗಳವಾರ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ಹತ್ತಿಕೊಂಡಿತ್ತು. ಬೆಂಕಿ ಕಾಣಿಸುತ್ತಿದ್ದಂತೆಯೇ ಧಾವಿಸಿದ ಮುನಿಹನುಮಯ್ಯ ಅವರು ಕೊಟ್ಟಿಗೆಯಲ್ಲಿದ್ದ ನಾಲ್ಕು ಜಾನುವಾರುಗಳ ರಕ್ಷಣೆ ಮಾಡಿದ್ದರು. ಉಳಿದ ಎರಡು ದನಗಳು ಬೆಂಕಿಯ ಮಧ್ಯೆ ಸಿಲುಕಿ ದಹಿಸಿ ಹೋಗಿದ್ದವು. ಕೊಟ್ಟಿಗೆ ಸಂಪೂರ್ಣ ಸುಟ್ಟುಹೋಗಿತ್ತು.

ನಾಲ್ಕು ಹಸುಗಳನ್ನು ರಕ್ಷಿಸುವ ಹೊತ್ತಿಗೆ ಬೆಂಕಿ ಎಲ್ಲೆಡೆ ವ್ಯಾಪಿಸಿತ್ತು. ಆದರೂ ಮುನಿಹನುಮಯ್ಯ ಹಠ ಬಿಡದೆ ಧಾವಿಸಿದ್ದರು. ಮತ್ತೆರಡು ಜಾನುವಾರು ರಕ್ಷಣೆ ಮಾಡುವ ವೇಳೆ ಬೆಂಕಿಯಲ್ಲಿ ಸಿಲುಕಿ ಪರದಾಡಿದರು. ಕೂಡಲೇ ಮುನಿಹನುಮಯ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು..

ಕಳೆದ ಐದು ದಿನಗಳಿಂದ ಜೀವನ್ಮರಣ ಹೋರಾಟ ನಡೆಸಿದ ಮುನಿಹನುಮಯ್ಯ ಅವರು ಭಾನುವಾರ ಪ್ರಾಣ ಕಳೆದುಕೊಂಡರು.

ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, 10 ಮಂದಿ ಅಸ್ವಸ್ಥ

ಕೊಪ್ಪಳ: ಪರೀಕ್ಷೆ ಬರೆಯಲು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ಹಿಂಡು ದಾಳಿ (Honeybee attack) ನಡೆಸಿ 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಕೊಪ್ಪಳದಲ್ಲಿ ನಡೆಸಿದೆ. ಈ ವಿದ್ಯಾರ್ಥಿಗಳು ಆರ್‌ಎಂಎಸ್‌ ಪರೀಕ್ಷೆ ಬರೆಯಲು ಬಂದಿದ್ದರು.

ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದ ದಿ ಕ್ರೈಸ್ತ ಕಿಂಗ್ ಶಾಲೆಯಲ್ಲಿ ಘಟನೆ ನಡೆದಿದೆ. ತಾಲೂಕಿನ ತಳುವಗೆರಿ, ನಿಡಶೇಸಿ, ಹಿರೇಮನ್ನಾಪುರ ಸೇರಿದಂತೆ ವಿವಿಧ ಗ್ರಾಮಗಳಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಬಂದಿದ್ದರು. ಈ ವೇಳೆ ಕಾಲೇಜಿನ ಆವರಣದಲ್ಲಿದ್ದ ಹೆಜ್ಜೇನುಗಳು ಎದ್ದು ದಾಳಿ ನಡೆಸಿದವು ಎನ್ನಲಾಗಿದೆ.

ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬಂದಿದ್ದರು. ಅವರಲ್ಲಿ ಹೆಚ್ಚಿನವರಿಗೆ ಹೆಜ್ಜೇನು ಕಚ್ಚಿದೆ. ಅವರಲ್ಲಿ 10 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಕುಷ್ಟಗಿ ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಕ್ಕಳೊಂದಿಗೆ ಬಂದಿರುವ ಪಾಲಕರ ಮೇಲೆಯೂ ಜೇನುಹುಳಗಳ ದಾಳಿ ನಡೆದಿದೆ. ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಏಕಾಏಕಿ ನಡೆದ ದಾಳಿಯಿಂದ ಅವರೆಲ್ಲ ಕಂಗಾಲಾಗಿ ಹೋಗಿದ್ದಾರೆ.

ಇದನ್ನೂ ಓದಿ : ರಾಜ್ಯ ರಾಜಕಾರಣದಲ್ಲಿ ಮಹಾಭಾರತ : ಬೊಮ್ಮಾಯಿ ಶಕುನಿ ಎಂದ ಸುರ್ಜೇವಾಲ, ದುರ್ಯೋಧನ ಯಾರೆಂದು ಕೇಳಿದ ಸಿಎಂ, ಬಿಜೆಪಿ ಗರಂ!

Exit mobile version