Site icon Vistara News

Self Harminig: ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಐವರು ಆತ್ಮಹತ್ಯೆ

Self Harminig

ತುಮಕೂರು: ಸಾಲ ಬಾಧೆ ತಾಳಲಾರದೆ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವುದು ನಗರದ ಸದಾಶಿವ ನಗದರಲ್ಲಿ ಭಾನುವಾರ ನಡೆದಿದೆ. ಡೆತ್ ನೋಟ್ ಬರೆದಿಟ್ಟು, ಮೂವರು ಮಕ್ಕಳಿಗೆ ವಿಷ ಕುಡಿಸಿ ದಂಪತಿ ನೇಣಿಗೆ (Self Harminig) ಶರಣಾಗಿದ್ದಾರೆ. ಸ್ಥಳಕ್ಕೆ ಎಸ್‌ಪಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದಾಶಿವನಗರ ನಿವಾಸಿ ಗರೀಬ್ ಸಾಬ್ (32) , ಪತ್ನಿ ಸುಮಯ್ಯ (30) , ಪುತ್ರಿ ಹಾಜಿರಾ(14) , ಪುತ್ರರಾದ ಮೊಹ್ಮದ್ ಸುಭಾನ್(10), ಮೊಹಮದ್ ಮುನೀರ್ (8) ಮೃತರು.

ಇದನ್ನೂ ಓದಿ | Murder Case : ಕುಡಿತದ ಚಟ ನೋಡಿ ಬಿಟ್ಟುಹೋಗಿದ್ದ ಹೆಂಡತಿ; ಕುಡಿತಕ್ಕೆ ಹಣ ನೀಡಿಲ್ಲವೆಂದು ಹೆತ್ತಮ್ಮನಿಗೇ ಇರಿದ!

ಕಬಾಬ್ ವ್ಯಾಪಾರದಲ್ಲಿ ಆದಾಯವಿಲ್ಲ. ಇದರಿಂದ ಜೀವನ ನಡೆಸಲು ಕಷ್ಟವಾಗಿದೆ. ಹೀಗಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಡೆತ್‌ನೋಟ್‌ನಲ್ಲಿ ಬರೆದಿರುವುದು ಕಂಡುಬಂದಿದೆ. ಸದಾಶಿವ ನಗರದ 3ನೇ ಬಿ ಮಖ್ಯರಸ್ತೆಯಲ್ಲಿರುವ ನಮ್ಮ ಮನೆಯ ಕೆಳಗಡೆಯಯ ಮನೆಯವರು ನಮಗೆ ಬಹಳ ಕಷ್ಟ ಕೊಟಿದ್ದು, ಅವರ ವಿರುದ್ಧ ಗೃಹಮಂತ್ರಿಗಳು ಕ್ರಮ ಕೈಗೊಳ್ಳಬೇಕು ಎಂದು ಗರೀಬ್ ಸಾಬ್ ಮನವಿ ಮಾಡಿದ್ದಾರೆ.

ಬಡತನದಲ್ಲಿ ಹೇಗೋ ಜೀವನ ಮಾಡಿಕೊಂಡಿದ್ದೆವು. ನಾವು ಬಾಡಿಗೆ ಮನೆಯಲ್ಲಿದ್ದೆವು, ಖಲಂದರ್ ಬಾಡಿಗೆಯಲ್ಲಿದ್ದ. ನಾವು ಸಂಘದಲ್ಲಿ ಎರಡು ಸಾವಿರ ಕಮಿಷನ್ ಕೊಟ್ಟು ಸಾಲ ತೆಗೆದುಕೊಳ್ಳುತ್ತಿದ್ದೆವು. ಇವನ ಮಾತು ಕೇಳದೆ ಇದ್ದರೆ ಪೂರ್ತಿ ಸಾಲ ಕಟ್ಟು ಅಂತ ಹಿಂಸೆ ಕೊಡುತ್ತಿದ್ದ. ಸಾಲ ಕೊಟ್ಟವರಿಗೆ ಇಲ್ಲಸಲ್ಲದ್ದು ಹೇಳಿ ಗಲಾಟೆ ಮಾಡೋ ಹಾಗೆ ಮಾಡಿದ್ದ. ಇದೇ ರೀತಿ ಅವನ ದೊಡ್ಡ ಮಗ, ಮಗಳು, ಮಹಡಿ ಮನೆಯ ಶಬಾನಾ, ಅವಳ ಮಗಳು ಎಲ್ಲರೂ ತೊಂದರೆ ಕೊಟ್ಟಿದ್ದಾರೆ. ಶಬಾನಾಗೂ ಖಲಂದರ್‌ಗೂ ಸಂಬಂಧವಿತ್ತು. ನಾವು ಸಾಯೋಕೆ ಈ ಐದು ಜನರೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಮೃತ ಗರೀಬ್‌ ಸಾಬ್‌ ಹೇಳಿದ್ದಾರೆ.

ಕೆಳಗಡೆ ಮನೆಯ ಖಲಂದರ್, ಅವರ ಪುತ್ರಿ ಸಾನಿಯಾ, ಹಿರಿಯ ಮಗ, ಮಹಡಿ ಮನೆಯ ಶಬಾನ, ಪುತ್ರಿ ಸಾನಿಯಾ ನಮ್ಮ ಸಾವಿಗೆ ಕಾರಣ. ಪೊಲೀಸರು ಐವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ.

ಯುವತಿ ಮೈ ಮುಟ್ಟಿ ಕುಚೇಷ್ಟೆ ಮಾಡಿದ ಬಿಎಂಟಿಸಿ ಕಂಡಕ್ಟರ್‌!

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಅದ್ಯಾಕೋ ಏನೋ ಹೆಣ್ಮಕ್ಕಳಿಗೆ ಸುರಕ್ಷಿತವಲ್ಲ ಎಂಬ ಭಾವನೆ ಶುರುವಾಗಿದೆ. ಯಾಕೆಂದರೆ ಸಾಲು ಸಾಲು ಘಟನೆಗಳೇ ಪುಷ್ಟಿ ನೀಡುತ್ತಿವೆ. ಮಾಲ್‌, ನಮ್ಮ ಮೆಟ್ರೋ ಆಯಿತು, ಇದೀಗ ಬಿಎಂಟಿಸಿ ಬಸ್‌ನಲ್ಲೂ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಕಿರುಕುಳ ಕೊಟ್ಟಿದ್ದು ಸಹ ಪ್ರಯಾಣಿಕರಲ್ಲ, ಬದಲಿಗೆ ಬಿಎಂಟಿಸಿ ಕಂಡಕ್ಟರೇ ಯುವತಿಯೊಂದಿಗೆ ಅಸಭ್ಯವಾಗಿ (Physical Abuse) ವರ್ತಿಸಿದ್ದಾನೆ.

ಕಳೆದ ಅ.19ರ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಂಪಣ್ಣ ಎಂಬಾತ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ರಮ್ಯ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ ಶಿವಾಜಿನಗರದಿಂದ ಕೆ.ಆರ್‌.ಪುರ ಕಡೆಗೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್‌ನಲ್ಲಿ ರಶ್‌ ಇಲ್ಲದಿದ್ದರೂ ರಮ್ಯ ಕುಳಿತಿದ್ದ ಸೀಟಿಗೆ ಒರಗಿಕೊಂಡು ಮೈಯನ್ನು ಉಜ್ಜಿ ಅಸಭ್ಯವಾಗಿ ವರ್ತಿಸಿದ್ದಾನೆ. ಹೀಗಾಗಿ ರಮ್ಯ ನಿಗಮಕ್ಕೆ ಇ-ಮೇಲ್‌ ಮೂಲಕ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್‌ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ | Electric Shock: ಅಥಣಿಯಲ್ಲಿ ವಿದ್ಯುತ್ ಪ್ರವಹಿಸಿ ತಂದೆ-ಮಗ ಸಾವು

ಕಂಡೆಕ್ಟರ್‌ ಕೆಂಪಣ್ಣ ಲೈಂಗಿಕ ಕಿರುಕುಳ ನೀಡಿರುವುದು ಮಾತ್ರವಲ್ಲದೆ, ಬಸ್‌ನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಫೋಟೊ, ವಿಡಿಯೋವನ್ನು ಗೌಪ್ಯವಾಗಿ ಮೊಬೈಲ್‌ನಲ್ಲಿ ಸೆರೆ ಹಿಡಿದು ವಿಕೃತವಾಗಿ ನಡೆದುಕೊಂಡಿದ್ದಾನೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದಾಗ ಆರೋಪವು ಸಾಬೀತಾಗಿದೆ. ಹೀಗಾಗಿ ಬಸ್ ಕಂಡೆಕ್ಟರ್‌ ಕೆಂಪಣ್ಣನನ್ನು ಅಮಾನತ್ತು ಮಾಡಿ ಆದೇಶಿಸಲಾಗಿದೆ.

Exit mobile version