Site icon Vistara News

ಫಾಜಿಲ್‌ ಹತ್ಯೆಗೆ ಸಂಬಂಧಿಸಿ ಐವರು ಪೊಲೀಸ್‌ ವಶಕ್ಕೆ, ವಿಚಾರಣೆ ತೀವ್ರ

Fazil

ಮಂಗಳೂರು : ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

ಶುಕ್ರವಾರ ಸಂಜೆ ಐವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಫಾಜಿಲ್‌ ಹತ್ಯೆಯಲ್ಲಿ ಕೊಲೆಯಲ್ಲಿ ಈ ಐವರೂ ಭಾಗಿಯಾಗಿದ್ದರು ಎಂಬ ಅನುಮಾನ ಮೂಡಿದೆ. ಸುರತ್ಕಲ್ ಸುತ್ತಮುತ್ತಲಿನವರೇ ಆಗಿರುವ ಇವರು ಫಾಜಿಲ್ ಹತ್ಯೆ ನಡೆಸಿದ್ದು ಪೊಲೀಸರಿಗೆ ಖಚಿತವಾದಲ್ಲಿ, ಇಂದು ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾದ್ಯತೆ ಇದೆ‌. ಸುರತ್ಕಲ್‌ನ ಬಟ್ಟೆ ಅಂಗಡಿ ಬಳಿ ಫಾಜಿಲ್‌ ಅವರ ಹತ್ಯೆ ನಡೆದಿತ್ತು. ಘಟನೆ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ತನಕ ಸುರತ್ಕಲ್‌, ಪಣಂಬೂರ್‌, ಮುಲ್ಕಿ ಮತ್ತು ಬಜ್ಪೆ ವ್ಯಾಪ್ತಿಯಲ್ಲಿ ಸೆಕ್ಷನ್‌ ೧೪೪ ಜಾರಿಗೊಳಿಸಲಾಗಿತ್ತು.

ಇದನ್ನೂ ಓದಿ:ಫಾಜಿಲ್‌ ಹತ್ಯೆಗೆ ಮಿಸ್ಟೇಕನ್‌ ಐಡೆಂಟಿಟಿ ಕಾರಣವೇ?: ಪೊಲೀಸರಲ್ಲಿ ಹೀಗೊಂದು ಅನುಮಾನ

Exit mobile version