ರಾಯಚೂರು: ಇಲ್ಲಿನ ಮೌಲಾನಾ ಆಜಾದ್ ಸರ್ಕಾರಿ ಶಾಲೆಯಲ್ಲಿ ಉಲ್ಟಾ ಬಾವುಟ (Flag Hoisting) ಹಾರಿಸಿ ವಿವಾದ ಸೃಷ್ಟಿಸಲಾಗಿದೆ. ಶಾಲೆಯ ಮುಖ್ಯೋಪಾಧ್ಯಯ ಸುಗುರೇಶ್ ಹಿರೇಮಠ ಎಂಬುವವರು ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿ ಎಡವಟ್ಟು ಮಾಡಿರುವ ವಿಡಿಯೊ ವೈರಲ್ ಆಗಿದೆ.
ಶನಿವಾರ ಹರ್ ಘರ್ ತಿರಂಗಾ ಅಭಿಯಾನದ ಸಮಯದಲ್ಲಿ ಸರ್ಕಾರಿ ಶಾಲೆಯಲ್ಲಿ ಧ್ವಜ ಹಾರಿಸಿದ್ದಾರೆ. ಈ ವೇಳೆ ಕೇಸರಿ ಬದಲಾಗಿ ಹಸಿರು ಬಣ್ಣ ಮೇಲೆ ಮಾಡಿ ಧ್ವಜ ಹಾರಿಸಿದ್ದಾರೆ. ಕೇಸರಿ-ಬಿಳಿ-ಹಸಿರು ಧ್ವಜದ ಬದಲಾಗಿ ಹಸಿರು-ಬಿಳಿ-ಕೇಸರಿ ರೀತಿ ಧ್ವಜಾರೋಹಣ ಮಾಡಲಾಗಿದೆ. ರಾಷ್ಟ್ರ ಧ್ವಜ ಬಣ್ಣಗಳ ಪರಿಜ್ಞಾನವಿಲ್ಲದೇ ನಿರ್ಲಕ್ಷ್ಯ ವಹಿಸಿದ್ದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.
ರಾಷ್ಟ್ರ ಧ್ವಜದ ಬಣ್ಣಗಳಲ್ಲಿ ವ್ಯತ್ಯಾಸ ಗೊತ್ತಾದರೂ ತಪ್ಪು ಸರಿಪಡಿಸಿಕೊಳ್ಳದೇ ಧ್ವಜ ಹರಿಸಲಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿ ಕಾರಿದ್ದಾರೆ. ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Har Ghar Tiranga | ಜೀಸಸ್ ಎಂದು ಬರೆದು ಮನೆ ಮೇಲೆ ರಾಷ್ಟ್ರಧ್ವಜ ಹಾರಿಸಿದವನ ಸೆರೆ!