ತುಮಕೂರು: ಶಿವಮೊಗ್ಗದಲ್ಲಿ ಹುಟ್ಟಿಕೊಂಡ ವೀರ ಸಾವರ್ಕರ್ ಫ್ಲೆಕ್ಸ್ ವಿವಾದ ಇನ್ನು ಜೀವಂತವಾಗಿರುವಂತೆಯೇ ಸೋಮವಾರ ರಾತ್ರಿ ತುಮಕೂರಿನಲ್ಲಿ ಸಾವರ್ಕರ್ ಚಿತ್ರವಿದ್ದ ಫ್ಲೆಕ್ಸ್‌ನ್ನು ಹರಿದು ಹಾಕಿದ್ದಾರೆ. ವೀರ ಸಾವರ್ಕರ್ ಅವರ ಚಿತ್ರವಿರುವ ಭಾಗವನ್ನೇ ಹರಿದು ಹಾಕಿರುವುದರಿಂದ ಇದು ಸಾವರ್ಕರ್ ಮೇಲಿನ ಸಿಟ್ಟಿನಿಂದ ಮಾಡಿರುವ ಕೃತ್ಯ ಎಂದು ಹೇಳಲಾಗುತ್ತಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ತುಮಕೂರು ನಗರದ ರಸ್ತೆಯ ಉದ್ದಕ್ಕೂ 80 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವಿರುವ ಫ್ಲೆಕ್ಸ್ ಹಾಕಲಾಗಿತ್ತು. ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್ ಅವರು ಇದನ್ನು ಹಾಕಿಸಿದ್ದರು.
ಎಂಪ್ರೆಸ್ ಕಾಲೇಜಿನ ಮುಂಭಾಗದಲ್ಲಿ ಹಾಕಲಾಗಿದ್ದ ಫ್ಲೆಕ್ಸ್‌ನಲ್ಲಿ ಸಾವರ್ಕರ್ ಚಿತ್ರವಿತ್ತು. ಕಿಡಿಗೇಡಿಗಳು ಈ ಬ್ಯಾನರನ್ನೇ ಹುಡುಕಿ ಚಿತ್ರಕ್ಕೆ ಹನಿ ಮಾಡಿದ್ದಾರೆ. ಮೂರು ದಿನಗಳ ಹಿಂದೆ ಹಾಕಿದ್ದ ಫ್ಲೆಕ್ಸ್ ಇದಾಗಿದ್ದು, ಮೂರು ದಿನ ಏನೂ ಆಗಿರಲಿಲ್ಲ. ಸ್ವಾತಂತ್ರ್ಯ ಸಂಭ್ರಮದ ಅಂತ್ಯದಲ್ಲಿ ರಾತ್ರಿಯಲ್ಲಿ ಅದನ್ನು ಹರಿದು ಹಾಕಲಾಗಿದೆ.
ವೀರ ಸಾರ್ವಕರ್ ಭಾವಚಿತ್ರ ಇರುವ ಫ್ಲೆಕ್ಸ್ ಮಾತ್ರ ಹರಿದಿರುವುದರಿಂದ ಕಿಡಿಗೇಡಿಗಳ ಈ ಕೃತ್ಯದ ಮೇಲೆ ಸಂಶಯ ಮೂಡಿದೆ.
ಫ್ಲೆಕ್ಸ್‌ಗಳ ತೆರವು ಕಾರ್ಯ
ಈ ನಡುವೆ, ವೀರ ಸಾವರ್ಕರ್ ಚಿತ್ರವಿರುವ ಫ್ಲೆಕ್ಸ್‌ಗೆ ದುಷ್ಕರ್ಮಿಗಳು ಹಾನಿ ಮಾಡಿದ ಘಟನೆಯ ಬೆನ್ನಿಗೇ ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಫ್ಲೆಕ್ಸ್‌ಗಳ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ಇನ್ನು ಉಳಿದ ಫ್ಲೆಕ್ಸ್‌ಗಳಿಗೆ ಹಾನಿ ಮಾಡಿ ಪರಿಸ್ಥಿತಿ ನಿಯಂತ್ರಣ ತಪ್ಪುವ ಮೊದಲೇ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ | Shimogga tense | ಶಿವಮೊಗ್ಗ ಪ್ರಕರಣದ ಎಫೆಕ್ಟ್ ಬೆಂಗಳೂರಿಗೆ ತಟ್ಟದಂತೆ ಕಟ್ಟೆಚ್ಚರ