Site icon Vistara News

Mandya MIMS: ಮಂಡ್ಯ ಮಿಮ್ಸ್ ಆಸ್ಪತ್ರೆ ಶೌಚಾಲಯದಲ್ಲಿ ಭ್ರೂಣ ಪತ್ತೆ; ತನಿಖೆ ಆರಂಭ

Foetal found in mandya MIMS hospital toilet Investigation begins

ಮಂಡ್ಯ: ಮಂಡ್ಯ ಮಿಮ್ಸ್ (Mandya MIMS) ಆಸ್ಪತ್ರೆ ಶೌಚಾಲಯದಲ್ಲಿ ಭ್ರೂಣವೊಂದು ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆಯನ್ನು ಆರಂಭಿಸಿದ್ದಾರೆ.

ಮಿಮ್ಸ್ ಎಮರ್ಜೆನ್ಸಿ ವಾರ್ಡ್‌ನ ಶೌಚಾಲಯಯಲ್ಲಿ ಭ್ರೂಣ ಪತ್ತೆಯಾಗಿದೆ. ಸುಮಾರು 10ರಿಂದ 12 ವಾರದ ಭ್ರೂಣ ಇದು ಎಂದು ಗುರುತಿಸಲಾಗಿದೆ. ಶೌಚಾಲಯದಲ್ಲಿ ನೀರು ಹಾಕಲು ಹೋದ ಸಂದರ್ಭದಲ್ಲಿ ಮಿಮ್ಸ್ ಸಿಬ್ಬಂದಿಗೆ ವಿಷಯ ಗೊತ್ತಾಗಿದೆ.

ಶೌಚಾಲಯದಲ್ಲಿ ಯಾರು ಭ್ರೂಣವನ್ನು ಬಿಟ್ಟು ಹೋಗಿದ್ದಾರೆ? ಯಾಕಾಗಿ ಹೀಗೆ ಮಾಡಲಾಗಿದೆ? ಎಂಬ ಬಗ್ಗೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Union Budget 2023: ಇನ್ನು ಗಡಿ ಪ್ರದೇಶಗಳಿಗೆ ಪ್ರವಾಸ ಹೋಗಿ!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಮ್ಸ್‌ ಸ್ಥಾನಿಕ ವೈದ್ಯಾಧಿಕಾರಿ ಡಾ. ವೆಂಕಟೇಶ್‌, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಅವರು ಈಗಾಗಲೇ ತನಿಖೆಯನ್ನು ಕೈಗೊಂಡಿದ್ದಾರೆ. ಭ್ರೂಣವನ್ನು ಬಿಟ್ಟು ಹೋದವರು ಯಾರು? ಆಸ್ಪತ್ರೆಗೆ ದಾಖಲಾಗಿದ್ದವರು ಹೀಗೆ ಮಾಡಿದ್ದಾರೆಯೇ? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಫಾರೆನ್ಸಿಕ್‌ ತಜ್ಞರನ್ನೂ ಕರೆಸಿದ್ದೇವೆ ಎಂದು ತಿಳಿಸಿದರು.

Exit mobile version