ಕೋಲಾರ: ಫುಡ್ ಪಾಯ್ಸನ್ (Food Poisoning) ಆಗಿ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಿಲ್ಲೆಯ ದೊಡ್ಡ ಹಸಾಳ ವಸತಿ ನಿಲಯದಲ್ಲಿ ನಡೆದಿದೆ. ವಿದ್ಯಾರ್ಥಿಗಳು ತಿಂಡಿ ಸೇವಿಸಿದ ಬಳಿಕ ವಾಂತಿ ಆಗಿದ್ದು, ಕೂಡಲೇ ಬಳಿಕ ಆಹಾರ ಪರಿಶೀಲಿಸಿದಾಗ ಹಲ್ಲಿ ಬಿದ್ದಿರಬಹುದೆಂದು ಅನುಮಾನಿಸಲಾಗಿದೆ.
ಬುಧವಾರ ಬೆಳಗ್ಗೆ ಚಿತ್ರಾನ್ನ ಸೇವಿಸಿ ಕಾಲೇಜಿಗೆ ತೆರಳಿದ್ದ ಕೆಲವರಲ್ಲಿ ಮೊದಲಿಗೆ ವಾಂತಿ, ಸುಸ್ತು ಕಾಣಿಸಿಕೊಂಡಿದೆ. ಬಳಿಕ ಅನಾರೋಗ್ಯದ ಸಂಖ್ಯೆ ಏರಿಕೆ ಆಗಿದ್ದು, ಕೂಡಲೇ ವಿದ್ಯಾರ್ಥಿಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಎಲ್ಲರೂ ಕಾನೂನು ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.
ಇದನ್ನೂ ಓದಿ | Pak vs Eng | ಸರಣಿಯ ನಡುವೆ ಎದೆ ನೋವು ಉಂಟಾಗಿ ಅಸ್ವಸ್ಥಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲರ್