ಬೆಂಗಳೂರು: ರೋಟರಿ ಬೆಂಗಳೂರು ಪೀಣ್ಯ ಮತ್ತು ಭಗವಾನ್ ಮಹಾವೀರ್ ವಿಕಲಾಂಗ ಸಹಾಯತ ಸಮಿತಿ (BMVSS) ಜೈಪುರ ಇವರ ವತಿಯಿಂದ 26ನೇ ಉಚಿತ ಮೆಗಾ ಜೈಪುರ ಫುಟ್ ಕ್ಯಾಂಪ್ (Foot Camp) ಆಯೋಜಿಸಲಾಗುತ್ತಿದೆ. ಕೃತಕ ಕಾಲು ಮತ್ತು ಪೋಲಿಯೋ ಪೀಡಿತರಿಗಾಗಿ ಕ್ಯಾಲಿಪರ್‌ಗಳು ಹಾಗೂ ಮುಂಗೈ ಜೋಡಣೆಯ ಬೃಹತ್ ಶಿಬಿರ ನಡೆಯಲಿದೆ.
ಜನವರಿ 3 ರಿಂದ 9ರವರೆಗೆ ಬೃಹತ್ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಉಚಿತವಾಗಿ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಆಧಾರ್ ಕಾರ್ಡ್‌ನ 2 ಜೆರಾಕ್ಸ್ ಪ್ರತಿ ಕಡ್ಡಾಯವಾಗಿ ತರಬೇಕೆಂದು ಸೂಚಿಸಲಾಗಿದೆ. ಈ ಬಾರಿಯ ಶಿಬಿರದಲ್ಲಿ 650- ಕೈಕಾಲುಗಳು, 600 – ಕ್ಯಾಲಿಪರ್ಗಳು, 800 – ಕ್ರಚ್ಗಳು, 50- ಗಾಲಿಕುರ್ಚಿಗಳು, 80 – LN4 ಫೋರ್ ಹ್ಯಾಂಡ್ ಸೇರಿ ಒಟ್ಟು: 2180 ಉಚಿತ ಫಿಟ್ಮೆಂಟ್ ಅನ್ನು ಒದಗಿಸಲು ಫಲಾನುಭವಿಗಳಿಗೆ ಉಚಿತವಾಗಿ ವ್ಯವಸ್ಥೆ ಮಾಡಲಾಗಿದೆ.
ಎಲ್ಲಿ ನಡೆಯುತ್ತೆ?
ಗಣೇಶ್ ಬಾಗ್, ಶ್ರೀ ಎಸ್.ಎಸ್.ಬಿ.ಎಸ್. ಜೈನ್ ಸಂಘ ಟ್ರಸ್ಟ್ (ರಿ), ನಂ 9, ಭಗವಾನ್ ಮಹಾವೀರ ರಸ್ತೆ, ಶಿವಾಜಿನಗರ, ಬೆಂಗಳೂರು-1 ಆಯೋಜಿಸಲಾಗಿದೆ. ಅವಶ್ಯವಿರುವವರು ಈ ಶಿಬಿರದ ಸದುಪಯೋಗ ಪಡೆಯಲು ಮನವಿ ಮಾಡಲಾಗಿದೆ.
ಇಲ್ಲಿವರೆಗೆ 12,241 ಕೃತಕ ಕಾಲು, 21,538 ಕ್ಯಾಲಿಪರ್, 11,842 ಊರುಗೋಲುಗಳು, 3,900 LN-4 ಫೋರ್ ಹ್ಯಾಂಡ್, 850 ವೀಲ್ ಚೇರ್, 411 ಟ್ರೈ ಸೈಕಲ್‌ಗಳು, 875 ಪೋಲಿಯೊ ಸರಿಪಡಿಸುವ ಶಸ್ತ್ರಚಿಕಿತ್ಸೆಗಳು ಮತ್ತು 70 ಹಿಪ್ ರಿಪ್ಲೇಸ್ಮೆಂಟ್ಗಳನ್ನು ಉಚಿತವಾಗಿ ಒದಗಿಸಲಾಗಿದೆ. ಸುಮಾರು 51,727 ಜನರು ಪ್ರಯೋಜನ ಪಡೆದಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಫಲಾನುಭವಿಗಳು ಕೆಳಗೆ ನಮೂದಿಸಿದ ಸಂಖ್ಯೆಗಳಿಗೆ ಕರೆ ಮಾಡಬಹುದು. ಗೌತಮ್ ಚಂದ್ ನಹರ್, ಅಧ್ಯಕ್ಷರು 9341214915 ಹಾಗೂ ವಸಂತ್ ಕುಮಾರ್ ಜಿಆರ್, ಸಂಯೋಜಕರು 9845052554.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ