Jaipur Foot Camp: ಬೆಂಗಳೂರಲ್ಲಿ ಜ.3ರಿಂದ 9ರವರೆಗೆ ಉಚಿತ ಕೃತಕ ಕಾಲು ಹಾಗೂ ಮುಂಗೈ ಜೋಡಣಾ ಶಿಬಿರ - Vistara News

ಆರೋಗ್ಯ

Jaipur Foot Camp: ಬೆಂಗಳೂರಲ್ಲಿ ಜ.3ರಿಂದ 9ರವರೆಗೆ ಉಚಿತ ಕೃತಕ ಕಾಲು ಹಾಗೂ ಮುಂಗೈ ಜೋಡಣಾ ಶಿಬಿರ

Foot Camp : 26ನೇ ಉಚಿತ ಮೆಗಾ ಜೈಪುರ ಫುಟ್ ಕ್ಯಾಂಪ್ ಜನವರಿ 3ರಿಂದ ಶುರುವಾಗಲಿದೆ. ಕೃತಕ ಕಾಲು ಹಾಗೂ ಮುಂಗೈ ಜೋಡಣಾ ಶಿಬಿರ ನಡೆಯಲಿದೆ.

VISTARANEWS.COM


on

26th Free Mega Jaipur Foot Camp
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರೋಟರಿ ಬೆಂಗಳೂರು ಪೀಣ್ಯ ಮತ್ತು ಭಗವಾನ್ ಮಹಾವೀರ್ ವಿಕಲಾಂಗ ಸಹಾಯತ ಸಮಿತಿ (BMVSS) ಜೈಪುರ ಇವರ ವತಿಯಿಂದ 26ನೇ ಉಚಿತ ಮೆಗಾ ಜೈಪುರ ಫುಟ್ ಕ್ಯಾಂಪ್ (Foot Camp) ಆಯೋಜಿಸಲಾಗುತ್ತಿದೆ. ಕೃತಕ ಕಾಲು ಮತ್ತು ಪೋಲಿಯೋ ಪೀಡಿತರಿಗಾಗಿ ಕ್ಯಾಲಿಪರ್‌ಗಳು ಹಾಗೂ ಮುಂಗೈ ಜೋಡಣೆಯ ಬೃಹತ್ ಶಿಬಿರ ನಡೆಯಲಿದೆ.

ಜನವರಿ 3 ರಿಂದ 9ರವರೆಗೆ ಬೃಹತ್‌ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಉಚಿತವಾಗಿ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಆಧಾರ್ ಕಾರ್ಡ್‌ನ 2 ಜೆರಾಕ್ಸ್ ಪ್ರತಿ ಕಡ್ಡಾಯವಾಗಿ ತರಬೇಕೆಂದು ಸೂಚಿಸಲಾಗಿದೆ. ಈ ಬಾರಿಯ ಶಿಬಿರದಲ್ಲಿ 650- ಕೈಕಾಲುಗಳು, 600 – ಕ್ಯಾಲಿಪರ್ಗಳು, 800 – ಕ್ರಚ್ಗಳು, 50- ಗಾಲಿಕುರ್ಚಿಗಳು, 80 – LN4 ಫೋರ್ ಹ್ಯಾಂಡ್ ಸೇರಿ ಒಟ್ಟು: 2180 ಉಚಿತ ಫಿಟ್ಮೆಂಟ್ ಅನ್ನು ಒದಗಿಸಲು ಫಲಾನುಭವಿಗಳಿಗೆ ಉಚಿತವಾಗಿ ವ್ಯವಸ್ಥೆ ಮಾಡಲಾಗಿದೆ.

26th Free Mega Jaipur Foot Camp

ಎಲ್ಲಿ ನಡೆಯುತ್ತೆ?

ಗಣೇಶ್ ಬಾಗ್, ಶ್ರೀ ಎಸ್.ಎಸ್.ಬಿ.ಎಸ್. ಜೈನ್ ಸಂಘ ಟ್ರಸ್ಟ್ (ರಿ), ನಂ 9, ಭಗವಾನ್ ಮಹಾವೀರ ರಸ್ತೆ, ಶಿವಾಜಿನಗರ, ಬೆಂಗಳೂರು-1 ಆಯೋಜಿಸಲಾಗಿದೆ. ಅವಶ್ಯವಿರುವವರು ಈ ಶಿಬಿರದ ಸದುಪಯೋಗ ಪಡೆಯಲು ಮನವಿ ಮಾಡಲಾಗಿದೆ.

ಇಲ್ಲಿವರೆಗೆ 12,241 ಕೃತಕ ಕಾಲು, 21,538 ಕ್ಯಾಲಿಪರ್, 11,842 ಊರುಗೋಲುಗಳು, 3,900 LN-4 ಫೋರ್ ಹ್ಯಾಂಡ್, 850 ವೀಲ್ ಚೇರ್, 411 ಟ್ರೈ ಸೈಕಲ್‌ಗಳು, 875 ಪೋಲಿಯೊ ಸರಿಪಡಿಸುವ ಶಸ್ತ್ರಚಿಕಿತ್ಸೆಗಳು ಮತ್ತು 70 ಹಿಪ್ ರಿಪ್ಲೇಸ್ಮೆಂಟ್ಗಳನ್ನು ಉಚಿತವಾಗಿ ಒದಗಿಸಲಾಗಿದೆ. ಸುಮಾರು 51,727 ಜನರು ಪ್ರಯೋಜನ ಪಡೆದಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಫಲಾನುಭವಿಗಳು ಕೆಳಗೆ ನಮೂದಿಸಿದ ಸಂಖ್ಯೆಗಳಿಗೆ ಕರೆ ಮಾಡಬಹುದು. ಗೌತಮ್ ಚಂದ್ ನಹರ್, ಅಧ್ಯಕ್ಷರು 9341214915 ಹಾಗೂ ವಸಂತ್ ಕುಮಾರ್ ಜಿಆರ್, ಸಂಯೋಜಕರು 9845052554.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

World Bicycle Day: ಸೈಕಲ್‌ ಹೊಡೆಯುವುದರ ಲಾಭಗಳು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು!

ಶತಮಾನಗಳ ಹಿಂದೆ ಯಾಂತ್ರೀಕೃತ ಸಾರಿಗೆಯ ಆರಂಭದ ದಿನಗಳಲ್ಲೇ ಆವಿಷ್ಕಾರಗೊಂಡಿದ್ದ ಸರಳ ವಾಹನ ಸೈಕಲ್‌. ಇಂದಿಗೂ ವಿಶ್ವದೆಲ್ಲೆಡೆ ಜನಪ್ರಿಯವಾಗಿದ್ದು, ಕಡಿಮೆ ಖರ್ಚಿನಲ್ಲಿ ಒಳ್ಳೆಯ ವ್ಯಾಯಾಮವನ್ನು ನೀಡಿ, ಪರಸರಕ್ಕೆ ಹಾನಿ ಮಾಡದಿರುವ ಹೆಗ್ಗಳಿಕೆಯನ್ನೂ ಇದು ಪಡೆದಿದೆ. ಅಂದಹಾಗೆ, ಇಂದು ವಿಶ್ವ ಬೈಸಿಕಲ್‌ (World Bicycle Day) ದಿನ.

VISTARANEWS.COM


on

World Bicycle Day
Koo

ಕುವೆಂಪು ಅವರ ʻಮಲೆಗಳಲ್ಲಿ ಮದುಮಗಳುʼ ಕಾದಂಬರಿಯಲ್ಲಿ ಸೈಕಲ್‌ನ ದೃಶ್ಯವೊಂದು ಬರುತ್ತದೆ. ಮಲೆನಾಡಿನ ಆ ಪ್ರಾಂತ್ಯಕ್ಕೇ ಹೊಸದಾಗಿ ಸೈಕಲ್‌ ಅಥವಾ ʻಬೀಸೆಕಲ್ಲುʼ ಪ್ರವೇಶ ಮಾಡಿದಾಗ, ಅದನ್ನು ಏರಿ ಚಲಾಯಿಸುವುದನ್ನು ಹೇಳಿಕೊಡುವ ಸನ್ನಿವೇಶವೊಂದು ಇನ್ನಿಲ್ಲದಂತೆ ನಗೆಯುಕ್ಕಿಸುತ್ತದೆ. ಶತಮಾನಗಳ ಹಿಂದೆ ಯಾಂತ್ರೀಕೃತ ಸಾರಿಗೆಯ ಆರಂಭದ ದಿನಗಳಲ್ಲೇ ಆವಿಷ್ಕಾರಗೊಂಡು ಸರಳ ವಾಹನವಿದು. ಇಂದಿಗೂ ವಿಶ್ವದೆಲ್ಲೆಡೆ ಜನಪ್ರಿಯವಾಗಿದ್ದು, ಕಡಿಮೆ ಖರ್ಚಿನಲ್ಲಿ ಒಳ್ಳೆಯ ವ್ಯಾಯಾಮವನ್ನು ನೀಡಿ, ಪರಸರಕ್ಕೆ ಹಾನಿ ಮಾಡದಿರುವ ಹೆಗ್ಗಳಿಕೆಯನ್ನೂ ಇದು ಪಡೆದಿದೆ. ಅಂದಹಾಗೆ, ಇಂದು ವಿಶ್ವ ಬೈಸಿಕಲ್‌ (World Bicycle Day) ದಿನ. ಮೊದಲ ಬಾರಿಗೆ, 2018ರ ಜೂನ್‌ 3ರಂದು ಈ ದಿನ ಆಚರಣೆಗೊಂಡಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸ್ವೀಕಾರಗೊಂಡ ಈ ದಿನದ ಆಚರಣೆಯ ನಿರ್ಣಯವನ್ನು ಎಲ್ಲ ಸದಸ್ಯರಾಷ್ಟ್ರಗಳೂ ಬೆಂಬಲಿಸಿದ್ದವು. ಜಗತ್ತಿನ ಎಲ್ಲ ರಾಷ್ಟ್ರಗಳು ಬೈಸಿಕಲ್‌ ದಿನದ ಆಚರಣೆಗೆ ಮತ್ತು ವರ್ಷದ ಉಳಿದ ದಿನಗಳಲ್ಲೂ ಸೈಕಲ್‌ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂಬುದು ಈ ದಿನದ ನಿರ್ಣಯಗಳಲ್ಲಿ ಒಂದಾಗಿತ್ತು.

Cycling Benefits

ಏನಿದರ ಮಹತ್ವ?

ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವುದರ ಜೊತೆಗೆ, ಇದನ್ನು ನಿಯಮಿತವಾಗಿ ಬಳಸುವುದರಿಂದ ವಾತಾವರಣದ ಮಾಲಿನ್ಯವನ್ನು ಸಹ ತಗ್ಗಿಸಬಹುದು. ಎಲ್ಲರಿಗೂ ಕೈಗೆಟುಕುವಂಥ ಸರಳ, ಸುಂದರ, ಆಹ್ಲಾದಕರ ಸಾರಿಗೆಯಿದು. ಸೈಕಲ್‌ ಹೊಡೆಯುವುದು ಮಧ್ಯಮ ಪ್ರಮಾಣದ ವ್ಯಾಯಾಮ. ಹೃದಯದ ಆರೋಗ್ಯವನ್ನು ಗಟ್ಟಿಗೊಳಿಸುವಂಥ ಲಘು ಕಾರ್ಡಿಯೊ ಸಹ ಹೌದು. ದೇಹದ ಕೆಳಭಾಗಕ್ಕೆ ಹೆಚ್ಚಿನ ವ್ಯಾಯಾಮ ನೀಡುವ ಈ ಕ್ರಿಯೆಯನ್ನು ಸುಮ್ಮನೆ ಖುಷಿಗಾಗಿಯೂ ಮಾಡಬಹುದು. ಮನೆಯಲ್ಲಿ ಮಕ್ಕಳಿದ್ದರೆ ಅವರೊಂದಿಗೆ ಸೈಕಲ್‌ ಹೊಡೆಯುವುದು, ಸ್ನೇಹಿತರು ಸುಮ್ಮನೇ ಗೊತ್ತುಗುರಿಯಿಲ್ಲದೆ ಸೈಕಲ್‌ನಲ್ಲಿ ಅಡ್ಡಾಡುವುದು, ಕಿವಿಗೊಂದು ಇಯರ್‌ಪ್ಲಗ್‌ ಸಿಕ್ಕಿಸಿ ಬೇಕಾದ್ದನ್ನು ಕೇಳುತ್ತಲೇ ಸೈಕಲ್‌ನಲ್ಲಿ ಸುತ್ತಾಡುವುದು- ಹೀಗೆ ಸೈಕಲ್‌ ಹೊಡೆಯುವುದಕ್ಕೆ ಎಷ್ಟೊಂದು ಆಯಾಮಗಳು ಉಂಟಲ್ಲವೇ?

ಆರೋಗ್ಯಕ್ಕೆ ಇನ್ನೇನು ಲಾಭಗಳಿವೆ?

ಸೈಕಲ್‌ ಹೊಡೆಯುವುದನ್ನು ಲಘು ಕಾರ್ಡಿಯೊ ವ್ಯಾಯಾಮ ಎಂದು ಪರಿಗಣಿಸಲಾಗುತ್ತದೆ. ಅಂದರೆ ಸೈಕಲ್‌ ಹೊಡೆಯುವಷ್ಟೂ ಹೊತ್ತು ನಮ್ಮ ಹೃದಯ ಹೆಚ್ಚಿನ ಪ್ರಮಾಣದ ರಕ್ತವನ್ನು ಪಂಪ್‌ ಮಾಡುತ್ತಿರುತ್ತದೆ. ಇದರಿಂದ ದೇಹದ ಒಟ್ಟಾರೆ ಶಕ್ತಿ ಮತ್ತು ತ್ರಾಣ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹಾಗೆಂದು ಕಠಿಣವಾದ ಕಾರ್ಡಿಯೊ ಇದಲ್ಲ, ಹೃದಯವನ್ನು ಕ್ರಮೇಣ ಬಲಗೊಳಿಸುವ ಲಘು ವ್ಯಾಯಾಮ.

Increases muscle strength and body flexibility Cycling Benefit

ಬಲವರ್ಧನೆ

ಕಾಲಿನ ಮಾಂಸಪೇಶಿಗಳು, ಅಂದರೆ ಕ್ವಾಡ್‌, ಕಾಫ್‌, ಶಿನ್‌ ಮತ್ತು ಹ್ಯಾಮ್‌ಸ್ಟ್ರಿಂಗ್‌ ಭಾಗಗಳಲ್ಲಿರುವ ಮಾಂಸಖಂಡಗಳು ಸುದೃಢಗೊಳ್ಳುತ್ತವೆ. ಕಟಿಯಿಂದ ಕೆಳಗಿನ ದೇಹಭಾಗ ಸದಾ ಕಾಲ ಸಕ್ರಿಯವಾಗಿ ಇರುವುದರಿಂದ ದೇಹದ ಕೆಳಭಾಗದ ಮಾಂಸಖಂಡಗಳ ಬಲವರ್ಧನೆಗೆ ಒಳ್ಳೆಯ ವ್ಯಾಯಾಮವಿದು. ಇದಕ್ಕಾಗಿಯೇ ಸೈಕ್ಲಥಾನ್‌ಗಳು ನಿಮ್ಮ ಸಮೀಪದಲ್ಲಿ ನಡೆಯುತ್ತಿದ್ದರೆ ತಪ್ಪದೆ ಭಾಗವಹಿಸಿ. ಆಗ ಒಂದಿಷ್ಟು ಸಮಾನ ಮನಸ್ಕರ ಸ್ನೇಹ ದೊರೆತು, ನಿಯಮಿತವಾಗಿ ಸೈಕಲ್‌ ಹೊಡೆಯುವ ಅವಕಾಶವಾಗುತ್ತದೆ.

Image Of Cycling Benefit

ಲವಲವಿಕೆ

ಎಂಥ ಟ್ರಾಫಿಕ್‌ ಜಾಮ್‌ನಲ್ಲೂ ಸಿಳ್ಳೆ ಹೊಡೆಯುತ್ತಾ ಮುಂದೆ ಸಾಗುವ ಸೈಕಲ್‌ ಸವಾರರನ್ನು ಕಾಣುವ ಉಳಿದವರಿಗೆ ಒಂದೆಳೆ ಹೊಟ್ಟೆಕಿಚ್ಚಾದರೆ ಅಚ್ಚರಿಯೇನಿಲ್ಲ. ಲೋಕದ ಚಿಂತೆಯನ್ನೇ ಬಿಟ್ಟು ನಮ್ಮಷ್ಟಕ್ಕೆ ನಾವು ಸೈಕಲ್‌ ಹೊಡೆಯುವ ಈ ಕ್ರಿಯೆ ಮನಸ್ಸಿನ ಲವಲವಿಕೆಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಟ್ರಾಫಿಕ್‌ ಕಿರಿಕಿರಿಯಿಲ್ಲದ ಸುಂದರ ದಾರಿಗಳಲ್ಲಿ ಸೈಕಲ್‌ ಹೊಡೆಯುವ ಅಭ್ಯಾಸವಿದ್ದರೆ ಖಿನ್ನತೆ, ಆತಂಕ, ಒತ್ತಡಗಳನ್ನು ದೂರ ಮಾಡಲು ಸಾಧ್ಯವಿದೆ.

Weight Loss Slim Body Healthy Lifestyle Concept Benefits Of Saffron

ತೂಕ ಇಳಿಕೆ

ಒಂದು ತಾಸು ಮಧ್ಯಮ ವೇಗದಲ್ಲಿ ಸೈಕಲ್‌ ಹೊಡೆಯುವುದರಿಂದ ಅಂದಾಜು 300 ಕ್ಯಾಲರಿ ಕರಗಿಸಬಹುದಂತೆ. ಹಾಗಾಗಿ ತೂಕ ಇಳಿಸುವವರಿಗೆ ಇದೊಂದು ಖುಷಿ ಕೊಡುವ ವ್ಯಾಯಾಮ. ಮಾತ್ರವಲ್ಲ, ಇದರಿಂದ ದೇಹದ ಹಲವಾರು ಕೀಲುಗಳು ಗಟ್ಟಿಯಾಗಿ ಆರ್ಥರೈಟಿಸ್‌ನಂಥ ಸಮಸ್ಯೆಗಳನ್ನು ದೂರ ಇರಿಸಬಹುದು. ಮಧುಮೇಹಿಗಳಿಗೂ ಇದು ಒಳ್ಳೆಯ ವ್ಯಾಯಾಮ. ಇನ್ನೇಕೆ ತಡ, ಹೊರಡಿ ಸೈಕಲ್‌ ಹಿಡಿದು!

Continue Reading

ಆರೋಗ್ಯ

Vijayanagara News: ಹೊಸಪೇಟೆಯಲ್ಲಿ ರಕ್ತದಾನ ಶಿಬಿರಕ್ಕೆ ಎಸ್ಪಿ ಶ್ರೀಹರಿಬಾಬು ಚಾಲನೆ

Vijayanagara News: ಹೊಸಪೇಟೆ ನಗರದ 27 ವಾರ್ಡ್‌ನ ಚಪ್ಪರದಳ್ಳಿ ಪ್ರದೇಶದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ್ ಮೇಟಿ) ಬಣದ ವಿಜಯನಗರ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಅವರ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ ಜರುಗಿತು.

VISTARANEWS.COM


on

Vijayanagara SP Shriharibabu drives to blood donation camp in Hosapete
Koo

ಹೊಸಪೇಟೆ: ನಗರದ 27ನೇ ವಾರ್ಡ್‌ನ ಚಪ್ಪರದಳ್ಳಿ ಪ್ರದೇಶದಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ್ ಮೇಟಿ) ಬಣದ ವಿಜಯನಗರ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಅವರ ಜನ್ಮದಿನದ ನಿಮಿತ್ತ ರಕ್ತದಾನ ಶಿಬಿರ (Vijayanagara News) ಹಮ್ಮಿಕೊಳ್ಳಲಾಗಿತ್ತು.

ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್. ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ರಕ್ತದಾನವು ಶ್ರೇಷ್ಠ ದಾನ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಮೂಲಕ ಅಪಾಯದಲ್ಲಿ ಇರುವ ಅಮೂಲ್ಯ ಜೀವವನ್ನು ಉಳಿಸಬಹುದು ಎಂದು ತಿಳಿಸಿದರು.

ಇದನ್ನೂ ಓದಿ: Election Commission of India: “64 ಕೋಟಿ ಜನರಿಂದ ಮತದಾನ; ವಿಶ್ವದಾಖಲೆ ಬರೆದ ಭಾರತ”- ಚು.ಆಯೋಗ ಶ್ಲಾಘನೆ

ಹೊಸಪೇಟೆ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡ ಮಾತನಾಡಿದರು. ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ್ ಮೇಟಿ) ಬಣದ ವಿಜಯನಗರ ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಮಾತನಾಡಿದರು.

ರಕ್ತದಾನ ಶಿಬಿರದಲ್ಲಿ 25ಕ್ಕೂ ಅಧಿಕ ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು‌. ಶಿಬಿರದಲ್ಲಿ ವಿಜಯನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿಎಲ್, ತಹಸೀಲ್ದಾರ್‌ ಶೃತಿ ಮಳ್ಳಪ್ಪಗೌಡ ಅವರು, ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರವನ್ನು ವಿತರಿಸಿದರು.

ಇದನ್ನೂ ಓದಿ: Heat Wave: ಒಡಿಶಾದಲ್ಲಿ ಬಿಸಿಗಾಳಿ ಶಾಖಕ್ಕೆ ಒಂದೇ ದಿನ 45 ಜನ ಬಲಿ

ಈ ಸಂದರ್ಭದಲ್ಲಿ ಹೊಸಪೇಟೆ ನಗರಸಭೆ ಸದಸ್ಯ ಹುಲಗಪ್ಪ, ಮುಖಂಡರಾದ ಪ್ರಕಾಶ್, ವೆಂಕಟೇಶ, ಪರಂಗಟ್ಟಿ ಶೇಖರ್, ನಾಗರಾಜ್, ಸೋಮಣ್ಣ, ಮರುಳಸಿದ್ದಪ್ಪ, ಬಸಪ್ಪ, ಚೇತನ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Continue Reading

ಆರೋಗ್ಯ

ICMR Guidelines: ಕಬ್ಬಿನ ಹಾಲು ಕುಡಿದರೆ ಆರೋಗ್ಯಕ್ಕೆ ಹಾನಿಯೆ? ICMR ಅಭಿಪ್ರಾಯ ಹೀಗಿದೆ

ಭಾರತದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚಿನವರು ಆರೋಗ್ಯಕರವೆಂದು ಕಬ್ಬಿನ ರಸವನ್ನು ಸೇವಿಸುತ್ತಾರೆ. ಆದರೆ ಇದರಲ್ಲಿ ಹೆಚ್ಚಿನ ಸಕ್ಕರೆಯಂಶ ಇರುತ್ತದೆ. ಐಸಿಎಂಆರ್ ಮಾರ್ಗಸೂಚಿ (ICMR Guidelines) ಪ್ರಕಾರ ಬೇಸಗೆಯಲ್ಲಿ ಕಬ್ಬಿಣ ರಸದ ಸೇವನೆಯನ್ನುಆದಷ್ಟು ಕಡಿಮೆ ಮಾಡಿದರೆ ಒಳ್ಳೆಯದು.

VISTARANEWS.COM


on

By

ICMR Guidelines
Koo

ಕೆಲವೆಡೆ ಮಳೆ (rain) ಸುರಿದರೂ ಇನ್ನು ಕೆಲವೆಡೆ ಬಿಸಿಲಿನ (summer) ತೀವ್ರತೆ ಇನ್ನೂ ಕಡಿಮೆಯಾಗಿಲ್ಲ. ಬೇಸಿಗೆಯ ಶಾಖದಿಂದ ದೇಹಾರೋಗ್ಯವನ್ನು ಕಾಪಾಡಿಕೊಳ್ಳಲು ಅನೇಕರು ಕಬ್ಬಿನ ರಸ (sugercane juice), ಹಣ್ಣಿನ ರಸ (fruit juice) ಮತ್ತು ಕೋಲ್ಡ್ ಕಾಫಿಗಳಂತಹ (cold coffee) ಪಾನೀಯಗಳನ್ನು ಸೇವಿಸುತ್ತಾರೆ. ಆದರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR Guidelines) ಜನಪ್ರಿಯ ಬಾಯಾರಿಕೆ ತಣಿಸುವ ಈ ಪಾನೀಯಗಳ ಅತಿಯಾದ ಸೇವನೆಯ ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಭಾರತದಲ್ಲಿ ವಿಶೇಷವಾಗಿ ಬೇಸಿಗೆಯಲ್ಲಿ ಹೆಚ್ಚಿನವರು ಆರೋಗ್ಯಕರವೆಂದು ಕಬ್ಬಿನ ರಸವನ್ನು ಸೇವಿಸುತ್ತಾರೆ. ಆದರೆ ಇದರಲ್ಲಿ ಹೆಚ್ಚಿನ ಸಕ್ಕರೆಯಂಶ ಇರುತ್ತದೆ. ಆದ್ದರಿಂದ ಇದರ ಸೇವನೆಯನ್ನು ಕಡಿಮೆ ಮಾಡಬೇಕು ಎನ್ನುತ್ತದೆ ಐಸಿಎಂಆರ್. ತಂಪು ಪಾನೀಯಗಳು ನೀರು ಅಥವಾ ತಾಜಾ ಹಣ್ಣುಗಳಿಗೆ ಪರ್ಯಾಯವಲ್ಲ. ಹೀಗಾಗಿ ಆದಷ್ಟು ತಂಪು ಪಾನೀಯಗಳ ಸೇವನೆಯನ್ನು ಕಡಿಮೆ ಮಾಡಬೇಕು. ಬದಲಿಗೆ ಮಜ್ಜಿಗೆ, ಸಕ್ಕರೆ ಸೇರಿಸದೆ ನಿಂಬೆ ನೀರು, ಸಂಪೂರ್ಣ ಹಣ್ಣಿನ ರಸ ಮತ್ತು ತೆಂಗಿನ ನೀರು ಸೇವನೆ ಒಳ್ಳೆಯದು ಎಂದು ಹೇಳಿದೆ.

ಕಬ್ಬಿನ ರಸ ಅಪಾಯಕಾರಿ ಏಕೆ?

ಆಹಾರ ತಜ್ಞರ ಪ್ರಕಾರ ಕಬ್ಬಿನ ರಸದಲ್ಲಿ ನೈಸರ್ಗಿಕ ಸಕ್ಕರೆ ಪ್ರಮಾಣ ಸಮೃದ್ಧವಾಗಿದೆ. ಇದು ವಿಶೇಷವಾಗಿ ಬಿಸಿ ವಾತಾವರಣದಲ್ಲಿ ಹಲವಾರು ಆರೋಗ್ಯ ಅಪಾಯಗಳನ್ನು ಉಂಟುಮಾಡುತ್ತದೆ ಎನ್ನುತ್ತಾರೆ.
ನಿರ್ಜಲೀಕರಣ

ಹೆಚ್ಚಿನ ಸಕ್ಕರೆ ಸೇವನೆಯು ದೇಹದಲ್ಲಿ ಹೆಚ್ಚಿನ ನೀರಿನ ನಷ್ಟಕ್ಕೆ ಕಾರಣವಾಗಬಹುದು. ಸಕ್ಕರೆಯು ಚಯಾಪಚಯಗೊಳಿಸಲು ದೇಹಕ್ಕೆ ಹೆಚ್ಚಿನ ನೀರು ಬೇಕಾಗುತ್ತದೆ. ದೇಹವು ಈಗಾಗಲೇ ಬೆವರಿನ ಮೂಲಕ ಗಮನಾರ್ಹವಾದ ನೀರನ್ನು ಕಳೆದುಕೊಂಡಾಗ ಬೇಸಿಗೆಯಲ್ಲಿ ಇದು ವಿಶೇಷವಾಗಿ ಸಮಸ್ಯಾತ್ಮಕವಾಗಿದೆ.

ಮಧುಮೇಹ

ಕಬ್ಬಿನ ರಸದಿಂದ ದೇಹ ಸಕ್ಕರೆಯನ್ನು ತ್ವರಿತವಾಗಿ ಹೀರಿಕೊಳ್ಳುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಏರುಪೇರಾಗುವುದು. ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹದ ಅಪಾಯವನ್ನು ಇದು ಹೆಚ್ಚಿಸುತ್ತದೆ.

ತೂಕ ಹೆಚ್ಚಳ

ಸಕ್ಕರೆ ಪಾನೀಯಗಳಿಂದ ಹೆಚ್ಚಿನ ಕ್ಯಾಲೋರಿಗಳು ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಇದು ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳಂತಹ ಆರೋಗ್ಯ ಸಮಸ್ಯೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ.

ಹಣ್ಣು ಮತ್ತು ಹಣ್ಣಿನ ರಸ ಯಾವುದು ಒಳ್ಳೆಯದು?

ಹಣ್ಣುಗಳು ಪೌಷ್ಟಿಕಾಂಶದ ಫೈಬರ್ ಅನ್ನು ಹೊಂದಿರುತ್ತವೆ. ಇದು ಜ್ಯೂಸ್ ಮಾಡುವಾಗ ಹೊರಹಾಕಲ್ಪಡುತ್ತದೆ. ಫೈಬರ್ ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ಕೊಡುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಸಂಪೂರ್ಣ ಹಣ್ಣುಗಳನ್ನು ಅಗಿಯುವುದರಿಂದ ಲಾಲಾರಸದ ಉತ್ಪಾದನೆ ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ ಆದರೆ ಸಕ್ಕರೆ ಹೀರಿಕೊಳ್ಳುವಿಕೆಯ ವೇಗವನ್ನು ನಿಯಂತ್ರಿಸುತ್ತದೆ.

ನೀರು ಮತ್ತು ತಂಪು ಪಾನೀಯ

ಹಲವು ಬಾರಿ ನೀರಿಗೆ ಬದಲಾಗಿ ತಂಪು ಪಾನೀಯಗಳನ್ನು ಸೇವಿಸುತ್ತೇವೆ. ಇದು ಆರೋಗ್ಯಕರವಲ್ಲ ಎನ್ನುತ್ತಾರೆ ಆಹಾರ ತಜ್ಞರು. ತಂಪು ಪಾನೀಯಗಳು ಹೆಚ್ಚಿನ ಪ್ರಮಾಣದ ಸಕ್ಕರೆಗಳನ್ನು ಹೊಂದಿರುತ್ತವೆ. ಇದು ಹೆಚ್ಚಿನ ಕ್ಯಾಲೋರಿ ಸೇವನೆ ಮತ್ತು ಸಂಭಾವ್ಯ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅನೇಕ ತಂಪು ಪಾನೀಯಗಳು ಕೃತಕ ಸುವಾಸನೆ, ಬಣ್ಣ ಮತ್ತು ಸಂರಕ್ಷಕಗಳನ್ನು ಒಳಗೊಂಡಿರುತ್ತವೆ. ಇದು ಕಾಲಾನಂತರದಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತದೆ. ತಂಪು ಪಾನೀಯಗಳಲ್ಲಿನ ಕೆಫೀನ್ ಮತ್ತು ಆಮ್ಲೀಯ ಅಂಶವು ಮೂತ್ರವರ್ಧಕ ಪರಿಣಾಮವನ್ನು ಹೊಂದಿರುತ್ತದೆ. ಇದು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಭಾರತದಂತಹ ಬಿಸಿ ವಾತಾವರಣದಲ್ಲಿ ಇದು ವಿಶೇಷವಾಗಿ ಅಪಾಯಕಾರಿ.

ಬೇಸಿಗೆಯಲ್ಲಿ ಚಹಾ, ಕಾಫಿ

ಪ್ರತಿದಿನ ಎಷ್ಟು ಕಾಫಿ ಮತ್ತು ಚಹಾವನ್ನು ಸೇವಿಸುತ್ತೀರಿ ಎಂಬುದರ ಬಗ್ಗೆ ಗಮನವಿರಲಿ. ಬರಿ ಹೊಟ್ಟೆಗೆ ಚಹಾ, ಕಾಫಿ ಸೇವನೆಯನ್ನು ತಪ್ಪಿಸಿ. ಕುಡಿಯಲೇ ಬೇಕು ಅನಿಸಿದರೆ ಉಪಹಾರ ಮತ್ತು ಮಧ್ಯಾಹ್ನ ಊಟದ ಮಧ್ಯದ ಸಮಯಕ್ಕೆ ಮುಂದೂಡಿ. ಇಲ್ಲವಾದರೆ ದಾಲ್ಚಿನ್ನಿ, ಅರಿಶಿನದಂತಹ ಗಿಡಮೂಲಿಕೆಗಳನ್ನು ಮತ್ತು ಕ್ಯಾಮೊಮೈಲ್, ಮಲ್ಲಿಗೆ, ದಾಸವಾಳದ ಚಹಾದಂತಹ ಹೂವುಗಳನ್ನು ಕುಡಿಯಬಹುದು.

ದೇಹದ ಸಮಸ್ಯೆ ಆಲಿಸಿ

ಬೇಸಿಗೆಯಲ್ಲಿ ನಡುಗುವಿಕೆ, ಆತಂಕ ಅಥವಾ ನಿದ್ರೆಯ ಸಮಸ್ಯೆಗಳನ್ನು ಅನುಭವಿಸಿದರೆ ಆದಷ್ಟು ವಿಶ್ರಾಂತಿ ಪಡೆಯಿರಿ. ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಿ.

ನಿರ್ಜಲೀಕರಣವಾಗದಂತೆ ತಡೆಯುವುದು ಹೇಗೆ?

ಬೇಸಿಗೆಯಲ್ಲಿ ಆರೋಗ್ಯವಾಗಿರಲು ದೇಹವನ್ನು ಹೈಡ್ರೀಕರಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಪ್ರತಿದಿನ ಕನಿಷ್ಠ 8- 10 ಗ್ಲಾಸ್ ನೀರನ್ನು ಕುಡಿಯಿರಿ. ದೇಹದಲ್ಲಿ ಬೆವರಿನ ಮೂಲಕ ಕಳೆದುಹೋಗುವ ಲವಣ ಮತ್ತು ಖನಿಜಗಳನ್ನು ಪುನಃ ತುಂಬಿಸಲು ಮನೆಯಲ್ಲಿ ಅಥವಾ ವಾಣಿಜ್ಯಿಕವಾಗಿ ಲಭ್ಯವಿರುವ ಎಲೆಕ್ಟ್ರೋಲೈಟ್ ಪರಿಹಾರಗಳನ್ನು ಬಳಸಿ.

ಇದನ್ನೂ ಓದಿ: Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

ದೇಹದಲ್ಲಿ ಜಲಸಂಚಯನವನ್ನು ಹೆಚ್ಚಿಸಲು ಆಹಾರದಲ್ಲಿ ಕಲ್ಲಂಗಡಿ, ಸೌತೆಕಾಯಿ ಮತ್ತು ಕಿತ್ತಳೆಯಂತಹ ನೀರು-ಭರಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ. ಆಲ್ಕೋಹಾಲ್ ಮತ್ತು ಸಕ್ಕರೆ ಪಾನೀಯಗಳು ನಿರ್ಜಲೀಕರಣದ ಅಪಾಯವನ್ನು ಹೆಚ್ಚಿಸಬಹುದು. ಇದನ್ನು ಮಿತವಾಗಿ ಸೇವಿಸಿ ಅಥವಾ ಸಂಪೂರ್ಣವಾಗಿ ತಪ್ಪಿಸಬೇಕು.

Continue Reading

ಆರೋಗ್ಯ

Sweating And Body Odor: ಅತಿಯಾಗಿ ಬೆವರುತ್ತಿದ್ದೀರಾ? ಈ ಆಹಾರಗಳು ನಿಮ್ಮ ಬೆವರ ದುರ್ಗಂಧಕ್ಕೆ ಮುಖ್ಯ ಕಾರಣ!

ಬೇಸಿಗೆಯಲ್ಲಿ (Sweating and body odor) ಕೆಲವರಿಗೆ ಬೆನ್ನಿನ ಹಿಂಭಾಗ, ಕುತ್ತಿಗೆ, ಪಾದಗಳು, ಕೈಗಳು ಹೀಗೆ ದೇಹದ ಎಲ್ಲೆಡೆ ಬಹುಬೇಗನೆ ಬೆವರುತ್ತದೆ. ಹೊರಗೆ ಹಿತವಾಗಿ ಬೀಸುವ ತಂಗಾಳಿಗೂ ನಿಮ್ಮ ಬೆವರಿಗೂ ಯಾವುದೇ ಸಂಬಂಧವಿಲ್ಲ ಅನಿಸಬಹುದು. ಅಥವಾ, ಹಿತವಾದ ತಂಗಾಳಿಯಲ್ಲಿ ನಿಮ್ಮ ಬೆವರ ಗಂಧ ಹತ್ತಿರ ಕೂತವರಿಗೆ ಕಿರಿಕಿರಿಯುಂಟು ಮಾಡಬಹುದು. ಯಾಕಿಷ್ಟು ಬೆವರು ಎಂಬ ಸಂಗತಿ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಬಹುದು. ಕೆಟ್ಟ ವಾಸನೆಯ ಬೆವರು ಹಲವು ಸಂದರ್ಭಗಳಲ್ಲಿ ಮುಜುಗರವನ್ನೂ ತರಬಹುದು. ಆದರೆ, ನೀವು ಮನಸ್ಸು ಮಾಡಿದರೆ ಹೀಗೆ ಬೆವರುವುದನ್ನು ಕಡಿಮೆ ಮಾಡಬಹುದು.

VISTARANEWS.COM


on

Sweating And Body Odor
Koo

ಬೇಸಿಗೆಯೇ ಇರಲಿ (Sweating and body odor), ಮಳೆಯೇ ಇರಲಿ, ಎಲ್ಲೋ ಹೋಗಲು ನೀವು ಹೊರಟು ಮನೆ ದಾಟಿ ಹೊರಗೆ ಬಂದ ತಕ್ಷಣ ನೀವು ಬೆವರಲು ಆರಂಭಿಸುತ್ತೀರಿ. ಬಹುಬೇಗನೆ ನೀವು ಹಾಕಿಕೊಂಡ ಅಂಗಿಯ ಕಂಕುಳು ಒದ್ದೆಯಾಗುತ್ತದೆ. ಇನ್ನೂ ಕೆಲವರಿಗೆ ಬೆನ್ನಿನ ಹಿಂಭಾಗ, ಕುತ್ತಿಗೆ, ಪಾದಗಳು, ಕೈಗಳು ಹೀಗೆ ದೇಹದ ಎಲ್ಲೆಡೆ ಬಹುಬೇಗನೆ ಬೆವರುತ್ತದೆ. ಹೊರಗೆ ಹಿತವಾಗಿ ಬೀಸುವ ತಂಗಾಳಿಗೂ ನಿಮ್ಮ ಬೆವರಿಗೂ ಯಾವುದೇ ಸಂಬಂಧವಿಲ್ಲ ಅನಿಸಬಹುದು. ಅಥವಾ, ಹಿತವಾದ ತಂಗಾಳಿಯಲ್ಲಿ ನಿಮ್ಮ ಬೆವರ ಗಂಧ ಹತ್ತಿರ ಕೂತವರಿಗೆ ಕಿರಿಕಿರಿಯುಂಟು ಮಾಡಬಹುದು. ಯಾಕಿಷ್ಟು ಬೆವರು ಎಂಬ ಸಂಗತಿ ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಬಹುದು. ಕೆಟ್ಟ ವಾಸನೆಯ ಬೆವರು ಹಲವು ಸಂದರ್ಭಗಳಲ್ಲಿ ಮುಜುಗರವನ್ನೂ ತರಬಹುದು. ಆದರೆ, ನೀವು ಮನಸ್ಸು ಮಾಡಿದರೆ ಹೀಗೆ ಬೆವರುವುದನ್ನು ಕಡಿಮೆ ಮಾಡಬಹುದು. ಯಾಕೆಂದರೆ ನಿಮ್ಮ ಬೆವರು ನಿಮ್ಮ ಕೈಯಲ್ಲೇ ಇದೆ. ಹೇಗೆ ಅಂತೀರಾ? ನೀವು ಅತಿಯಾಗಿ ಬೆವರುವುದಕ್ಕೂ ನೀವು ತಿನ್ನುವ ಆಹಾರಕ್ಕೂ ಗಳಸ್ಯ ಕಂಠಸ್ಯ ಸಂಬಂಧವಿದೆ. ಬನ್ನಿ ಯಾವೆಲ್ಲ ಆಹಾರಗಳನ್ನು ಕಡಿಮೆ ಮಾಡುವ ಮೂಲಕ ಬೆವರನ್ನೂ ಕಡಿಮೆ ಮಾಡಬಹುದು ಎಂಬುದನ್ನು ನೋಡೋಣ.

Dependence and Withdrawal Coffee Side Effects

ಕಾಫಿ

ಬಹಳಷ್ಟು ಮಂದಿಗೆ ಬೆಳಬೆಳಗ್ಗೇ ಕಾಫಿ ಬೇಕು. ದಿನ ಆರಂಭವಾಗುವುದೇ ಕಾಫಿಯ ಜೊತೆಗೆ. ಆಗಾಗ ಅರ್ಧ ಕಪ್‌ ಕಾಫಿ ಹೊಟ್ಟೆ ಸೇರಬೇಕು. ಕಾಫಿ ಅಂತಲ್ಲ, ಕೆಫೀನ್‌ನ ಪೇಯಗಳನ್ನು ಜಾಸ್ತಿ ಕುಡಿಯುವ ಮಂದಿಗೆ ಜಾಸ್ತಿ ಬೆವರುತ್ತದೆ. ಹಾಗಾಗಿ ನೀವು ಕೆಫಿನ್‌ಯುಕ್ತ ಪೇಯಗಳನ್ನು ಹೆಚ್ಚು ಕುಡಿಯುವ ಅಭ್ಯಾಸವಿದ್ದರೆ, ನೀವು ಜಾಸ್ತಿ ಬೆವರುತ್ತೀರಾದರೆ, ನಿಮ್ಮ ಹತ್ತಿರದವರು ನಿಮಗೊಂದು ಹಗ್‌ ಕೊಡಲು ಹಿಂದೆ ಮುಂದೆ ನೋಡುತ್ತಾರೆಂದರೆ ಖಂಡಿತವಾಗಿ ನೀವು ನಿಮ್‌ ಕಾಫಿಪ್ರಿಯತೆಗೆ ಕಡಿವಾಣ ಹಾಕಲೇಬೇಕು.

spicy food

ಮಸಾಲೆಯುಕ್ತ ಆಹಾರ

ನೀವು ಬೇಕಾದರೆ ಗಮನಿಸಿ. ಬಿಸಿಬಿಸಿ ಮಸಾಲೆಯುಕ್ತ ಕರಿಯೊಂದಕ್ಕೆ ಚಪಾತಿಯೊಂದರ ಜೊತೆ ಅದ್ದಿ ಬಾಯಿಗಿಡುವಷ್ಟರಲ್ಲಿ ನಿಮ್ಮ ಹಣೆಯ ಮೇಲೆ ಬೆವರ ಸಾಲುಗಳು ಮುತ್ತಿನಂತೆ ಶೇಖರವಾಗುವುದನ್ನು ನೀವು ಗಮನಿಸಿರಬಹುದು. ಅದರಲ್ಲೊಂದಿಷ್ಟು ಹಸಿ ಮೆಣಸಿದ್ದರೆ ಕತೆ ಮುಗಿದಂತೆಯೇ. ನಿಮ್ಮ ಬೆವರಹನಿ ಸಾಲುಗಳು ಕರಗಿ ನೀರಾಗಿ ಹಣೆಯಿಂದ ಇಳಿದೀತು. ಹಾಗಾಗಿ, ಅತಿಯಾಗಿ ಬೆವರುವುದರಿಂದ ದೂರವಿರಬೇಕಾದರೆ, ಮಸಾಲೆಯುಕ್ತ ಪದಾರ್ಥಗಳಿಂದಲೂ ದೂರವಿರಿ.

Selection of Colorful Sweets

ಸಿಹಿತಿಂಡಿಗಳು

ಯಾವುದಾದರೂ ಸಮಾರಂಭಕ್ಕೆ ಹೋಗಿ ಅಲ್ಲಿ ಭರ್ಜರಿ ಭೋಜನ ಮಾಡಿದ ಕೂಡಲೇ ಬೆವರಿಳಿಯಲು ಶುರುವಾಗುತ್ತದೆ. ಅಲ್ಲಿ ನೀವು ಭರ್ಜರಿಯಾಗಿ ಹೊಟ್ಟೆಗಿಳಿಸಿದ ಸಿಹಿತಿಂಡಿಗಳು, ಪರಮಾನ್ನ ಭಕ್ಷ್ಯಗಳು ಇತ್ಯಾದಿಗಳ ಪರಿಣಾಮ ಅದು. ಸಿಹಿತಿಂಡಿ ಅತಿಯಾಗಿ ತಿನ್ನುತ್ತಿದ್ದರೆ ನೀವು ಬೆವರುವುದೂ ಹೆಚ್ಚು.

Avoid cigarettes alcohol for Bone Health

ಆಲ್ಕೋಹಾಲ್

ಅತಿಯಾದ ಆಲ್ಕೋಹಾಲ್‌ ಸೇವನೆ ನಿಮ್ಮ ದೇಹದ ಉಷ್ಣತೆಯನ್ನು ಏರಿಸುವ ಮೂಲಕ ಬೆವರಿಳಿಸುತ್ತದೆ. ಎಲ್ಲೋ ಅಪರೂಪಕ್ಕೊಮ್ಮೆ ಗೆಳೆಯರ ಜೊತೆ, ಅಥವಾ ಒಂದು ಖುಷಿಯ ಸನ್ನಿವೇಶಕ್ಕೆ ಇವೆಲ್ಲ ಇದ್ದರೂ, ನಿತ್ಯವೂ ಅಥವಾ ಆಗಾಗ ಇದು ಚಟವಾಗಿಬಿಟ್ಟರೆ ಇದು ಕೇವಲ ಬೆವರಷ್ಟೇ ಅಲ್ಲ, ಆನೇಕ ಆರೋಗ್ಯದ ಸಮಸ್ಯೆಗಳನ್ನೂ ತಂದೊಡ್ಡುತ್ತದೆ ಎಂಬ ಸತ್ಯ ಯಾರಿಗೂ ತಿಳಿಯದ್ದೇನಲ್ಲ. ಹಾಗಾಗಿ ಆಲ್ಕೋಹಾಲ್‌ ಹಿತಮಿತವಾಗಿರಲಿ.

Soda

ಸೋಡಾ

ಬೇಸಿಗೆಯ ಬಿಸಿಲಲ್ಲಿ ಬೆವರಿಳಿಸಿ ನಡೆವಾಗ, ನಿಂಬೆಹಣ್ಣಿನ ಸೋಡಾ ಯಾರಿಗೆ ತಾನೇ ಇಷ್ಟವಾಗದು ಹೇಳಿ. ಆದರೆ, ಬಿಸಿಲಲ್ಲಿ ತಂಪು ತಂಪು ನಿಂಬೆಹಣ್ಣಿನ ಸೋಡಾ, ದೇಹವನ್ನು ತಂಪು ಮಾಡೀತು ಅಂದುಕೊಂಡರೆ ಅದು ತಪ್ಪಾದೀತು. ಸೋಡಾ ಹಾಗೂ ಅದರಲ್ಲಿ ಸೇರಿರುವ ರಾಶಿ ಸಕ್ಕರೆ ದೇಹವನ್ನು ಪ್ರವೇಶಿಸಿದ ಕೂಡಲೇ ಬೆವರಿಳಿಯುವುದು ಇನ್ನೂ ಹೆಚ್ಚುತ್ತದೆ!

ಇದನ್ನೂ ಓದಿ: Cardamom Benefits: ಏಲಕ್ಕಿ ಕೇವಲ ಘಮದಲ್ಲಷ್ಟೇ ಅಲ್ಲ, ಇದರ ಪ್ರಯೋಜನಗಳು ಎಷ್ಟೊಂದು!

Continue Reading
Advertisement
World Bicycle Day
ಆರೋಗ್ಯ11 mins ago

World Bicycle Day: ಸೈಕಲ್‌ ಹೊಡೆಯುವುದರ ಲಾಭಗಳು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು!

Battery Life Tips
ಗ್ಯಾಜೆಟ್ಸ್12 mins ago

Battery Life Tips: ಈ 5 ಸಲಹೆ ಪಾಲಿಸಿ; ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಸಾಮರ್ಥ್ಯ ಹೆಚ್ಚಿಸಿ!

MP Renukacharya
ಕ್ರೈಂ20 mins ago

MP Renukacharya : ಎಂ.ಪಿ ರೇಣುಕಾಚಾರ್ಯ, ಪುತ್ರನಿಗೆ ಫೋನ್‌ನಲ್ಲಿ ಕೊಲೆ ಬೆದರಿಕೆ

Nataša Stanković
ಕ್ರೀಡೆ29 mins ago

Nataša Stanković: ಹಾರ್ದಿಕ್ ಪಾಂಡ್ಯ ಜತೆ ವಿಚ್ಛೇದನ?; ಅನುಮಾನಕ್ಕೆ ತೆರೆ ಎಳೆದ ಪತ್ನಿ ನತಾಶಾ

Drowns in Lake
ಕರ್ನಾಟಕ38 mins ago

Drowns in Lake: ಕೆರೆಯಲ್ಲಿ ಮುಳುಗಿ ಯುವಕ ಸಾವು; ಸಾಲ ಬಾಧೆ ತಾಳಲಾರದೆ ರೈತ ಆತ್ಮಹತ್ಯೆ

Vijayanagara SP Shriharibabu drives to blood donation camp in Hosapete
ಆರೋಗ್ಯ38 mins ago

Vijayanagara News: ಹೊಸಪೇಟೆಯಲ್ಲಿ ರಕ್ತದಾನ ಶಿಬಿರಕ್ಕೆ ಎಸ್ಪಿ ಶ್ರೀಹರಿಬಾಬು ಚಾಲನೆ

Mantralaya Sri Subudhendra Theertha Swamiji ashirvachan
ಮೈಸೂರು40 mins ago

Mysore News: ಶಾಸ್ತ್ರ ಜ್ಞಾನಕ್ಕೆ ಪ್ರಪಂಚದ ಎಲ್ಲೆಡೆ ಮಾನ್ಯತೆ: ಮಂತ್ರಾಲಯ ಶ್ರೀ

Tumkur Lok Sabha Constituency
ಪ್ರಮುಖ ಸುದ್ದಿ54 mins ago

Tumkur Lok Sabha Constituency: ತುಮಕೂರಿನ ಅದೃಷ್ಟ ಪರೀಕ್ಷೆಯಲ್ಲಿ ಗೆಲ್ಲುವರೇ ವಿ. ಸೋಮಣ್ಣ?

Prajwal Revanna Case
ಕರ್ನಾಟಕ1 hour ago

Prajwal Revanna Case: ಹೈಕೋರ್ಟ್‌ಗೆ ಮತ್ತೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ಭವಾನಿ ರೇವಣ್ಣ

Road Accident
ಶಿವಮೊಗ್ಗ1 hour ago

Road Accident : ಎದುರಿಗೆ ಬಂದ ಬೈಕ್‌ ತಪ್ಪಿಸಲು ಹೋಗಿ ಮಹಿಳೆಗೆ ಗುದ್ದಿದ ಕಾರು; ಎಗರಿ ಬಿದ್ದವಳು ಸ್ಥಳದಲ್ಲೇ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ7 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌