ಚಿಕ್ಕಮಗಳೂರು: ಹುಲಿ ಉಗುರು ಪ್ರಕರಣದಲ್ಲಿ (Tiger Nail) ಅಮಾನತಾಗಿದ್ದ ಅರಣ್ಯ ಅಧಿಕಾರಿಯನ್ನು ಬಂಧಿಸಲಾಗಿದೆ. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕಳಸ ಉಪ ವಲಯ ಅರಣ್ಯಾಧಿಕಾರಿಯೊಬ್ಬರನ್ನು (ಡಿಆರ್‌ಎಫ್‌ಒ) ಅಮಾನತು ಮಾಡಲಾಗಿತ್ತು. ಅದಾದ ಬೆನ್ನಲ್ಲೇ ಅವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ.
ಕಳಸದ ಡಿಆರ್‌ಎಫ್‌ಒ ದರ್ಶನ್ ಬಂಧಿತರು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಮೂಲದ ಅಧಿಕಾರಿ ದರ್ಶನ್‌ರನ್ನು ಕೊಪ್ಪ ಡಿಎಫ್‌ಒ ದಿನೇಶ್ ಅವರು ಅಮಾನತು ಮಾಡಿದ್ದರು. ಇದರ ಬೆನ್ನಲ್ಲೇ ಎನ್.ಆರ್.ಪುರದಲ್ಲಿ ಅವರನ್ನು ಬಂಧಿಸಲಾಗಿದೆ. ಹುಲಿ ಉಗುರು ಧರಿಸಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುಪ್ರಿತ್, ಅಬ್ದುಲ್ ಎಂಬುವವರು ಡಿಎಫ್‌ಒಗೆ ಲಿಖಿತ ದೂರು ನೀಡಿದ್ದರು. ಹೀಗಾಗಿ ಅರಣ್ಯ ಅಧಿಕಾರಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ | Tiger Nail : ಬಿಗ್ ಬಾಸ್ ಆರ್ಯವರ್ಧನ್ ಗುರೂಜಿಗೂ ಪರಚಿದ ಹುಲಿ ಉಗುರು; ಕಚೇರಿಗೆ ದಾಳಿ
ದತ್ತಪೀಠದ ಶಾ ಖಾದ್ರಿ ಮನೆಯಲ್ಲಿ ಚಿರತೆ ಚರ್ಮದ ಜತೆಗೆ ಜಿಂಕೆ ಚರ್ಮವೂ ಪತ್ತೆ
ಚಿಕ್ಕಮಗಳೂರು: ಹುಲಿಯ ಉಗುರು (Tiger Nail) ಪ್ರಕರಣದಲ್ಲಿ ಚಿಕ್ಕಮಗಳೂರು ದತ್ತ ಪೀಠದ ಶಾ ಖಾದ್ರಿ (Datta peeta) ಅವರ ಮನಯಲ್ಲಿ ಚಿರತೆ ಚರ್ಮದ ಜೊತೆಗೆ ಜಿಂಕೆ ಚರ್ಮವೂ ಪತ್ತೆಯಾಗಿರುವುದ ಕಂಡುಬಂದಿದೆ.
ದತ್ತಪೀಠದಲ್ಲಿ ಅನಧಿಕೃತವಾಗಿ ವಾಸವಿರುವ ಶಾ ಖಾದ್ರಿ ಅವರ ಬಳಿಯೂ ಹುಲಿ ಚರ್ಮವಿದೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮಸೇನೆ ಒತ್ತಾಯಿಸಿತ್ತು. ಹೀಗಾಗಿ ಬಾಬಾ ಬುಡನ್ ಗಿರಿ ದತ್ತಪೀಠದ ಸೈಯದ್ ಗೌಸ್ ಮೊಹಿನುದ್ದಿನ್ ಶಾ ಖಾದ್ರಿ ಮನೆ ಪರಿಶೀಲಿಸಲು ಅಧಿಕಾರಿಗಳು ಭೇಟಿ ನೀಡಿದ್ದರು. ಈ ವೇಳೆ ಚಿರತೆ ಚರ್ಮದ ಜತೆಗೆ ಜಿಂಕೆ ಚರ್ಮವೂ ಪತ್ತೆಯಾಗಿದೆ.
ಇದನ್ನೂ ಓದಿ | Tiger Nail : ಹುಲಿ ಉಗುರು ಧರಿಸಿದ ಅರಣ್ಯಾಧಿಕಾರಿಗಳ ಸಸ್ಪೆಂಡ್; ಸಚಿವ ಈಶ್ವರ್ ಖಂಡ್ರೆ ಸೂಚನೆ
ಚಿರತೆ ಹಾಗೂ ಜತೆ ಚರ್ಮವನ್ನು ಅಧಿಕಾರಿಗಳು ವಶಕ್ಕೆ ಪಡೆದು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಗಿಸಲು ಮುಂದಾಗಿದ್ದಾರೆ. ಶಾ ಖಾದ್ರಿ ಹುಲಿ ಚರ್ಮದ ಮೇಲೆ ಕೂತ ಫೋಟೋ ವೈರಲ್ ಆದ ಹಿನ್ನೆಲೆಯಲ್ಲಿ ಅವರ ಮನೆ ತಪಾಸಣೆ ನಡೆಸಲಾಗಿದೆ.
ದೇವಸ್ಥಾನದ ಅರ್ಚಕರ ಬಂಧನಕ್ಕೆ ಆಕ್ರೋಶ
ಹುಲಿ ಉಗುರಿನ ಡಾಲರ್ ಹಾಕಿಕೊಂಡಿದ್ದ ಕಾರಣಕ್ಕಾಗಿ ಚಿಕ್ಕಮಗಳೂರಿನ ಇಬ್ಬರು ಅರ್ಚಕರನ್ನು ಬುಧವಾರ ಅರಣ್ಯಾಧಿಕಾರಿಗಳು ಬಂಧಿಸಿದ್ದರಿಂದ ಇದೊಂದು ಹಿಂದೂ ದ್ವೇಷದ ಪ್ರಕರಣ ಎಂಬಂತೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದನ್ನೇ ಉಲ್ಲೇಖಿಸಿ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ಕೆಲವು ಮುಸ್ಲಿಂ ಮೌಲ್ವಿಗಳು ನವಿಲುಗರಿಯ ಗುಚ್ಛ ಹಿಡಿದುಕೊಂಡಿರುತ್ತಾರೆ, ಅವರನ್ನೂ ಬಂಧಿಸಿ ಎಂದು ಸವಾಲು ಹಾಕಿದ್ದರು.
ಚಿಕ್ಕಮಗಳೂರಿನ ಬಹು ಪ್ರಸಿದ್ಧ ಖಾಂಡ್ಯ ಮಾರ್ಕಾಂಡೇಶ್ವರ ದೇವಾಲಯದ ಇಬ್ಬರು ಅರ್ಚಕರಾದ ಕೃಷ್ಣಾನಂದ ಹೊಳ್ಳ, ನಾಗೇಂದ್ರ ಜೋಯಿಸ ಅವರನ್ನು ಬಂಧಿಸಿದ್ದು ಮಾತ್ರವಲ್ಲ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.