Site icon Vistara News

ರಾಜ್ಯದಲ್ಲಿ ಭಾರತ್ ಜೋಡೊ ಯಾತ್ರೆ ಯಶಸ್ಸಿಗೆ ವಿವಿಧ ಸಮಿತಿ ರಚಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌

ಭಾರತ್ ಜೋಡೊ

ಬೆಂಗಳೂರು: ರಾಜ್ಯದಲ್ಲಿ ಭಾರತ್ ಜೋಡೊ ಯಾತ್ರೆ ಯಶಸ್ವಿಯಾಗಿ ನಡೆಸಲು ಹಲವು ಸಮಿತಿಗಳನ್ನು ರಚಿಸಿ ಕೆಪಿಸಿಸಿ ಅಧ್ಯಕ್ಷ ‌ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದು, ಸಮಿತಿ ಸದಸ್ಯರಿಗೆ ವಸತಿ, ಊಟ, ಸಾರಿಗೆ ಹೀಗೆ ಹಲವು ವ್ಯವಸ್ಥೆ ಮಾಡಲು ಜವಾಬ್ದಾರಿ ವಹಿಸಿದ್ದಾರೆ.

ಸೆ.೭ರಂದು ಕನ್ಯಾಕುಮಾರಿಯಿಂದ ಜಮ್ಮು-ಕಾಶ್ಮೀರದವರೆಗಿನ ಭಾರತ್‌ ಜೋಡೊ ಯಾತ್ರೆಗೆ(೧೫೦ ದಿನ) ರಾಹುಲ್‌ ಗಾಂಧಿ ಚಾಲನೆ ನೀಡಿದ್ದಾರೆ. ಈ ಪಾದಯಾತ್ರೆ ರಾಜ್ಯಕ್ಕೆ ಸೆ.೩೦ರಂದು ಆಗಮಿಸಲಿದೆ. ರಾಜ್ಯದಲ್ಲಿ ಚಾಮರಾಜನಗರ, ಮೈಸೂರು ನಗರ, ಗ್ರಾಮಾಂತರ, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ ಹಾಗೂ ರಾಯಚೂರಿನ ಮೂಲಕ ಯಾತ್ರೆ ಸಾಗುತ್ತದೆ. ಹೀಗಾಗಿ ಅಗತ್ಯ ವ್ಯವಸ್ಥೆ ಮಾಡಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ.

ವಸತಿ ವ್ಯವಸ್ಥೆಗೆ ಶಾಸಕ ದಿನೇಶ್ ಗುಂಡೂರಾವ್ ಸಮಿತಿ, ಚಾಮರಾಜನಗರ ಲೋಕಸಭಾ ಕ್ಷೇತ್ರ ಉಸ್ತುವಾರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್‌ ಸಮಿತಿ, ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಸಮಿತಿ, ಮಂಡ್ಯ ಜಿಲ್ಲೆಗೆ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಸಮಿತಿ, ತುಮಕೂರು ಜಿಲ್ಲೆ ಹಾಗೂ ಸಂವಹನ ಸಮಿತಿಗೆ ಮಾಜಿ ಡಿಸಿಎಂ ಜಿ.ಪರಮೇಶ್ವರ ಸಮಿತಿ, ಚಿತ್ರದುರ್ಗ ಮತ್ತು ದಾವಣಗೆರೆಗೆ ಜಿಲ್ಲೆಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಸಮಿತಿ, ರಾಯಚೂರು ಜಿಲ್ಲೆಗೆ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್‌ ಖಂಡ್ರೆ ಸಮಿತಿ, ಬಳ್ಳಾರಿ ಸಾರ್ವಜನಿಕರ ಬೃಹತ್‌ ಸಮಾವೇಶ ಹಾಗೂ ಪ್ರಚಾರಕ್ಕೆ ಮಾಜಿ ಸಚಿವ ಎಂ.ಬಿ.ಪಾಟೀಲ್‌ ಸಮಿತಿ, ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ನಿರ್ವಹಣೆಗೆ ಶಾಸಕ ಪ್ರಿಯಾಂಕ್‌ ಖರ್ಗೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಗಾಂಧಿ ಜಯಂತಿ ಆಚರಣೆಗೆ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌.ಶಂಕರ್‌ ಸಮಿತಿ ರಚಿಸಲಾಗಿದೆ.

ಆಹಾರ ವ್ಯವಸ್ಥೆಗೆ ಶಾಸಕ ರಾಮಲಿಂಗಾರೆಡ್ಡಿ ಸಮಿತಿ, ಸಮನ್ವಯ ಮತ್ತು ನಿರ್ವಹಣೆ ಸಮಿತಿಗೆ ಕೆ.ಜೆ.ಜಾರ್ಜ್‌, ಸಭೆ ಸಮಾರಂಭ ಆಯೋಜನೆಗೆ ಶಾಸಕ ಕೃಷ್ಣ ಭೈರೇಗೌಡ, ವಾರ್‌ ರೂಮ್‌ ಸಮಿತಿ ಹಾಗೂ ನಾಗರಿಕ ಮತ್ತು ಸಂವಹನ ಸಮಿತಿಗೆ ನಿವೃತ್ತ ಐಎಎಸ್‌ ಅಧಿಕಾರಿ ಡಾ.ಕೆ.ಸೆಂತಿಲ್‌ ರಾಜ್‌, ಪಾದಯಾತ್ರೆಯ ನಾಯಕರ ಆಯ್ಕೆ ಸಮಿತಿಗೆ ಸತೀಶ್‌ ಜಾರಕಿಹೊಳಿ, ನಾಗರಿಕ ಮತ್ತು ಸಂವಹನ ಸಮಿತಿಗೆ ಡಾ.ಕೆ.ಸೆಂತಿಲ್‌ ರಾಜ್‌, ನಾಯಕರ ಜತೆ ಸಂವಹನ ನಡೆಸುವ ಸಮಿತಿಗೆ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.

ಇದನ್ನೂ ಓದಿ | ಭಾರತ್‌ ಜೋಡೊ ಹೊಸ್ತಿಲಲ್ಲೆ ಅಪಸ್ವರ: ಡಿಕೆಶಿ ಹೇಳಿಕೆಗೆ ಮೂಲ ಕಾಂಗ್ರೆಸಿಗರಿಂದಲೇ ವಿರೋಧ

Exit mobile version