ಕೊಪ್ಪಳ: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅಂದರೆ ಅವರ ಅಭಿಮಾನಿಗಳಿಗೆ ಎಲ್ಲಿಲ್ಲದ ಅಭಿಮಾನಿ. ಈ ಅಭಿಮಾನದಿಂದಲೇ ಶನಿವಾರ ವೇದಿಕೆಯಲ್ಲಿ ದಂಪತಿ ತಮ್ಮ ಮಗುವಿಗೆ ಸಿದ್ದರಾಮಯ್ಯ ಅವರಿಂದಲೇ ನಾಮಕರಣ ಮಾಡಿಸಿದ್ದಾರೆ. ಅದೂ ಅವರ ಹೆಸರನ್ನೇ ನಾಮಕರಣ ಮಾಡಿರುವುದು ವಿಶೇಷ!
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಶ್ರೀ ಬೀರಲಿಂಗೇಶ್ವರ ಜಾತ್ರೆಯ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಾಲ್ಗೊಂಡಿದ್ದರು. ಈ ವೇದಿಕೆ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆ ಮೇಲೆ ಬಂದ ಕುಕನೂರಿನ ದಂಪತಿಗಳು ತಮ್ಮ ಮಗುವಿಗೆ ನಾಮಕರಣ ಮಾಡುವಂತೆ ಸಿದ್ದರಾಮಯ್ಯ ಅವರ ಬಳಿ ಕೇಳಿದರು. ಇದಕ್ಕೆ ಸಿದ್ದರಾಮಯ್ಯ ಅವರೂ ಒಪ್ಪಿದರು.
ಹೀಗಾಗಿ ವೇದಿಕೆಯಲ್ಲಿ ನಾಮಕರಣ ಶಾಸ್ತ್ರಕ್ಕೆ ಸಿದ್ಧತೆ ಮಾಡಿಕೊಳ್ಳಲಾಯಿತು. ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದ ದಂಪತಿಯು ಆಶೀರ್ವಾದವನ್ನು ಪಡೆದುಕೊಂಡರು. ಬಳಿಕ ಅಲ್ಲಿಯೇ ಮಗುವಿಗೆ ಸಿದ್ದರಾಮಯ್ಯ ಎಂದೇ ನಾಮಕರಣ ಮಾಡುವಂತೆ ಕೇಳಿಕೊಂಡರು.
ಇದನ್ನೂ ಓದಿ: Ram Mandir: ರಾಮನಗರದ ರಾಮಮಂದಿರಕ್ಕೆ ಮಾರ್ಚ್‌ನಲ್ಲೇ ಭೂಮಿಪೂಜೆ; ಯೋಗಿಯಿಂದಲೇ ಶಂಕು?
ಇದಕ್ಕೊಪ್ಪಿದ ಸಿದ್ದರಾಮಯ್ಯ ಎಂದು ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದರು. ಇನ್ನು ಬಂಡಿಹಾಳ ಗ್ರಾಮದ ಕೆರಿಬಸಪ್ಪ ನಿಡಗುಂದಿ ಎಂಬುವವರ ಮೊಮ್ಮಕ್ಕಳು ಸಂಗ್ರಹಿಸಿದ್ದ ಹುಂಡಿಯನ್ನು ಸಿದ್ದರಾಮಯ್ಯ ಅವರಿಗೆ ಅರ್ಪಿಸಿದರು.