Site icon Vistara News

Self Harming: ಸಾಲ ಬಾಧೆಯಿಂದ ಬೇಸತ್ತು ಗ್ರಾಪಂ ಮಾಜಿ ಅಧ್ಯಕ್ಷ ಆತ್ಮಹತ್ಯೆ

Former gram panchayat president Durgappa veerapura

ರಾಯಚೂರು: ಸಾಲ ಬಾಧೆ ಮತ್ತು ಕೌಟುಂಬಿಕ ಕಲಹದಿಂದ ಬೇಸತ್ತು ಗ್ರಾಪಂ ಮಾಜಿ ಅಧ್ಯಕ್ಷ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂಧನೂರು ತಾಲೂಕಿನ ಗಾಂಧಿನಗರ ಗ್ರಾಮದಲ್ಲಿ ನಡೆದಿದೆ. ಸಾವಿಗೂ ಮುನ್ನ ಫೇಸ್‌ಬುಕ್‌ನಲ್ಲಿ ಪೊಸ್ಟ್ ಹಾಕಿ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾಜಿ ಗ್ರಾಪಂ ಅಧ್ಯಕ್ಷ ದುರ್ಗಪ್ಪ ವೀರಾಪುರ (42) ಮೃತರು. ನನ್ನಿಂದ ಯಾರಿಗಾದರೂ ತೊಂದರೆ ಆಗಿದ್ದರೆ ಕ್ಷಮಿಸಿ ಬಿಡಿ, ನನ್ನ ಮಕ್ಕಳಿಗೆ ನಾನು ನೋವು ಕೊಟ್ಟಿದ್ದೇನೆ. I miss You ಎಂದು ಫೇಸ್‌ಬುಕ್‌ನಲ್ಲಿ ಬರೆದು ದುರ್ಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ | Shivamogga News: ಸಾಗರದಲ್ಲಿ ಈಜಲು ತೆರಳಿದ್ದ ಇಬ್ಬರು ನೀರುಪಾಲು

ಟಿಕೆಟ್ ವಿಚಾರಕ್ಕೆ ಕಂಡಕ್ಟರ್‌ಗೆ ಥಳಿತ

Conductor

ಯಾದಗಿರಿ: ಟಿಕೆಟ್ ವಿಚಾರಕ್ಕೆ ಕಂಡಕ್ಟರ್‌ಗೆ ಥಳಿಸಿರುವ ಘಟನೆ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ. ಶಕ್ತಿ ಯೋಜನೆಯಡಿ ಟಿಕೆಟ್ ಪಡೆಯಲು ಆಧಾರ್ ಕಾರ್ಡ್ ಕೇಳಿದ ವಿಷಯಕ್ಕೆ ಕಂಡಕ್ಟರ್‌ಗೆ ಥಳಿಸಲಾಗಿದೆ.

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಯಾದಗಿರಿ ವಿಭಾಗದ ನಿರ್ವಾಹಕನಿಗೆ ಥಳಿಸಲಾಗಿದೆ. ಮಹಿಳೆಗೆ, ನಿರ್ವಾಹಕ ಆಧಾರ ಕಾರ್ಡ್ ದಾಖಲೆ ಕೇಳಿದಕ್ಕೆ ಸಂಬಂಧಿಕರು ಕಂಡಕ್ಟರ್‌ಗೆ ಥಳಿಸಿದ್ದಾರೆ. ಹಲ್ಲೆಗೊಳಗಾದ ಕಂಡಕ್ಟರ್‌ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಆಂಟಿ ಎಂದವನಿಗೆ ಚಪ್ಪಲಿಯಿಂದ ಹೊಡೆದಳು!

ಬೆಂಗಳೂರು: ಆಂಟಿ ಎಂದಿದ್ದಕ್ಕೆ ಮಹಿಳೆಯೊಬ್ಬರು ಸಿಟ್ಟಾಗಿ ಸೆಕ್ಯೂರಿಟಿ ಗಾರ್ಡ್‌ಗೆ ಚಪ್ಪಲಿಯಿಂದ (Assault Case) ಹೊಡೆದಿದ್ದಾರೆ. ಬೆಂಗಳೂರಿನ (Bengaluru News) ಮಲ್ಲೇಶ್ವರಂನಲ್ಲಿ ಈ ಘಟನೆ ನಡೆದಿದೆ. ಅಶ್ವಿನಿ ಎಂಬಾಕೆ ಸೆಕ್ಯುರಿಟಿ ಗಾರ್ಡ್ ಕೃಷ್ಣಯ್ಯ (64) ಎಂಬುವವರಿಗೆ ಹಲ್ಲೆ ನಡೆಸಿದ್ದಾರೆ.

ಕೃಷ್ಣಯ್ಯ ಅವರು ರಾಜಾಜಿನಗರದಲ್ಲಿರುವ ಪೊಲೈಟ್‌ ಎಂಬ ಸೆಕ್ಯೂರಿಟಿ ಏಜೆನ್ಸಿಯಲ್ಲಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಸೆಪ್ಟೆಂಬರ್ 19ರಂದು ಎಲ್ಲ ಬ್ಯಾಂಕ್‌ನ ಎಟಿಎಂಗೆ ಹಣ ಹಾಕುವಾಗ ಕೃಷಯ್ಯ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರು. ಅಂದು ಮಲ್ಲೇಶ್ವರಂನ ಐಸಿಐಸಿಐ ಬ್ಯಾಂಕ್‌ ಎಟಿಎಂನಲ್ಲಿ ಹಣ ಹಾಕುತ್ತಿದ್ದಾಗ ಅಡ್ಡ ನಿಂತಿದ್ದ ಅಶ್ವಿನಿಗೆ ʻಆಂಟಿ ಸ್ವಲ್ಪ ಪಕ್ಕಕ್ಕೆ ಬನ್ನಿʼ ಎಂದಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಮಹಿಳೆ ʻನನ್ನ ಆಂಟಿ ಅಂತೀಯಾʼ ಎಂದು ಅವಾಚ್ಯ ಶಬ್ಧದಿಂದ ಸೆಕ್ಯುರಿಟಿ ಗಾರ್ಡ್‌ ಕೃಷ್ಣಯ್ಯರಿಗೆ ನಿಂಧಿಸಿದ್ದಾರೆ.

ಇದನ್ನೂ ಓದಿ | Road Accident : ಚಾಲಕನ ಕಂಟ್ರೋಲ್‌ ತಪ್ಪಿ ನಾಲ್ಕೈದು ಬಾರಿ ಕಾರು ಪಲ್ಟಿ; ಓರ್ವ ಸಾವು, ಮೂವರು ಗಂಭೀರ

ಮಾತ್ರವಲ್ಲದೆ ಕಪಾಳಕ್ಕೆ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿ, ದಾಂಧಲೆ ಮಾಡಿದ್ದಾಳೆ. ಜತೆಗೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆಯನ್ನು ಹಾಕಿದ್ದಾರೆ. ಈ ಮಧ್ಯೆ ಸಾರ್ವಜನಿಕರು ಮಧ್ಯ ಪ್ರವೇಶಿ ಗಲಾಟೆಯನ್ನು ಬಿಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಹಿಳೆ ವಿರುದ್ಧ ಎಫ್‌ಐಆರ್‌ ದಾಖಲು

ಅಶ್ವಿನಿ ವಿರುದ್ಧ ಸಂತ್ರಸ್ತ ಕೃಷ್ಣಯ್ಯ ಅವರು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ಐಫ್‌ಐಆರ್‌ ದಾಖಲಾಗಿದೆ. ಅಶ್ವಿನಿ ವಿರುದ್ದ IPC 506. 504. 324. 355 ಅಡಿ ಕೇಸ್ ದಾಖಲಾಗಿದೆ. ಪೊಲೀಸರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಮೇಲೆ ಎಫ್‌ಐಆರ್‌ ದಾಖಲಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version