Site icon Vistara News

Channapatna News: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಬಾವ ನಾಪತ್ತೆ

CP Yogeshwar

ರಾಮನಗರ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರ ಬಾವ, ಎಸ್ಟೇಟ್ ಉದ್ಯಮಿ ನಾಪತ್ತೆಯಾಗಿರುವುದು ಕಂಡುಬಂದಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಶುಕ್ರವಾರ ರಾತ್ರಿ ತೋಟದ ಮನೆಯಲ್ಲಿ (Channapatna News) ಇದ್ದವರು ನಾಪತ್ತೆಯಾಗಿರುವುದರಿಂದ ಅವರಿಗಾಗಿ ಶೋಧ ನಡೆಯುತ್ತಿದೆ.

ಮಹದೇವಯ್ಯ (62) ನಾಪತ್ತೆಯಾಗಿರುವ ವ್ಯಕ್ತಿ. ಇವರು ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ತೋಟದಲ್ಲಿ ವಾಸವಾಗಿದ್ದರು. ಮಹದೇಶ್ವರ ಬೆಟ್ಟದಲ್ಲಿ ಟವರ್ ಲೊಕೇಶನ್ ಟ್ರೇಸ್ ಆಗಿದ್ದು, ಇತ್ತ ಮನೆಯಲ್ಲಿ ಬೀರು ಓಪನ್ ಆಗಿದ್ದು, ಬೆಡ್ ರೂಮ್‌ನಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ.

ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಮಹದೇವಯ್ಯ ಫೋನ್ ಸ್ವಿಚ್ ಆಫ್ ಆಗಿದ್ದು, ಕಾರು ಕೂಡಾ ನಾಪತ್ತೆಯಾಗಿದೆ. ಹೀಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ | Black Magic : ಕರ್ನಾಟಕ ವಿವಿ ಪ್ರಾಧ್ಯಾಪಕಿ ಚೇಂಬರ್‌ನಲ್ಲಿ ವಾಮಾಚಾರ ; ಮಾಟದ ಗೊಂಬೆ, ಲಿಂಬೆ ಪತ್ತೆ!

ರಾಜಕೀಯ ಜಾಸ್ತಿ ಆಯ್ತು, ಕ್ಷೇತ್ರಕ್ಕೂ ಟೈಮ್‌ ಆಗ್ತಿಲ್ಲ, ಮನೆಗೂ ಇಲ್ಲ ಎಂದ ಡಿಕೆಶಿ

ಕನಕಪುರ: ರಾಜಕೀಯ ಜಾಸ್ತಿ ಆಗೋಯ್ತು, ಹೀಗಾಗಿ ನಂಗೆ ಈಗ ಕ್ಷೇತ್ರಕ್ಕೆ ಟೈಮ್‌ ಕೊಡಲು ಆಗ್ತಾ ಇಲ್ಲ, ಕ್ಷೇತ್ರಕ್ಕೂ ಆಗ್ತಿಲ್ಲ, ಮನೆಗೂ ಟೈಮ್‌ ಕೊಡೋಕೆ ಆಗ್ತಿಲ್ಲ: ಹೀಗಂತ ಹೇಳಿಕೊಂಡಿದ್ದಾರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರು.

ಶನಿವಾರ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಕ್ಷೇತ್ರವಾದ ಕನಕಪುರದಲ್ಲಿ (kanakapura Constituency) ಜನಸಂಪರ್ಕ ಸಭೆ (Janasamparka sabhe) ನಡೆಸುತ್ತಿದ್ದಾರೆ. ಬೆಳಗ್ಗೆ ಅಂಬೇಡ್ಕರ್ ಭವನದಲ್ಲಿ ಆರಂಭವಾದ ಸಭೆ ಸಂಜೆವರೆಗೂ ನಡೆಯಲಿದೆ. ಕನಕಪುರ ತಾಲ್ಲೂಕಿನ ಜನರು ತಮ್ಮ ಸಮಸ್ಯೆಗಳ ಬಗ್ಗೆ ಡಿಸಿಎಂ ಅವರಿಗೆ ಅಹವಾಲು ಸಲ್ಲಿಸಬಹುದು, ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಗುರಿಯೊಂದಿಗೆ ಸಭೆ ನಡೆಸಲಾಗಿದೆ. ಕಳೆದ ವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಜನ ಸ್ಪಂದನ ಸಭೆ ನಡೆಸಿದ ಬೆನ್ನಿಗೇ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಸುತ್ತಿದ್ದಾರೆ.

ನಕಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ‌ ಮಾಧ್ಯಮಗಳ ಜತೆ ಮಾತನಾಡಿದ ಅವರು, ʻʻಎರಡು ಟರ್ಮ್‌ಗೆ ಮೊದಲು ನಾನು ಪ್ರತಿ ಹಳ್ಳಿ ಹಳ್ಳಿಗಳಿಗೆ ಬಂದು ಗ್ರಾಮ ಸಭೆ ಮಾಡ್ತಾ ಇದ್ದೆ. ಈಗ ರಾಜಕೀಯ ಜಾಸ್ತಿ ಆಗೋಯ್ತು. ರಾಜ್ಯ ರಾಜಕಾರಣ ಒತ್ತಡದಿಂದ ಆ ಸಭೆ ಮಾಡೊಕ್ಕೆ ಆಗ್ತಾಯಿಲ್ಲ. ನನ್ನ ತಮ್ಮ ಸುರೇಶ್‌ ಅವರು ಮಾಡ್ತಾ ಇದ್ದಾರೆʼʼ ಎಂದರು.

ರಾಜಕೀಯ ಜಾಸ್ತಿ ಆಗಿದ್ದರಿಂದ ಈಗ ಕ್ಷೇತ್ರಕ್ಕೆ ಟೈಮ್‌ ಕೊಡಲು ಆಗ್ತಾ ಇಲ್ಲ, ಮನೆಗೂ ಟೈಮ್‌ ಕೊಡಲು ಆಗ್ತಾ ಇಲ್ಲ ಎಂದು ನಕ್ಕರು ಡಿ.ಕೆ. ಶಿವಕುಮಾರ್‌.

ʻʻನಮ್ಮ ಸರ್ಕಾರ ಜಿಲ್ಲೆಗಳಲ್ಲಿ ಜನ ಸಂಪರ್ಕ ಸಭೆ ಮಾಡಲು ತೀರ್ಮಾನ ಮಾಡಿದೆ. ನನ್ನ ಸಂಪರ್ಕ ಮಾಡೋಕ್ಕೆ ತುಂಬಾ ಜನ ಬರ್ತಾ ಇರ್ತಾರೆ. ಹೀಗಾಗಿ ನಿಮ್ಮನ್ನು ಭೇಟಿ ಮಾಡೋಕ್ಕೆ ಆಗ್ತಾ ಇಲ್ಲ. ಇನ್ನು ಹತ್ತು ದಿನ ಬೆಳಗಾವಿ ಅಧಿವೇಶನಕ್ಕೆ ಹೋಗಬೇಕು. ಮೊನ್ನೆ ಡಿಸಿ ಅವರನ್ನು ಕರೆಸಿ ಇಂದು ಸಭೆ ಮಾಡಬೇಕು ಅಂತ ಹೇಳ್ದೆ. ಹೀಗಾಗಿ ಸಭೆ ಮಾಡ್ತಾ ಇದ್ದೀವಿʼʼ ಎಂದರು.

ಇದನ್ನೂ ಓದಿ | Road Accident : ಅತಿವೇಗ ತಂದ ಆಪತ್ತು; ಇಬ್ಬರ ಪ್ರಾಣ ಕಸಿದ ಅಪಘಾತಗಳು!

ʻಮುಂದಿನ ತಿಂಗಳು ಒಂದು ದಿನಾಂಕ ನಿಗದಿ ಮಾಡುತ್ತೇನೆ. ನಿಮಗೆ ಏನ್ ಸಮಸ್ಯೆ ಇವೆ ಅದನ್ನ ಈಗ ಪಟ್ಟಿ ಮಾಡಿಕೊಳ್ಳಿ. ಸಮಸ್ಯೆ ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸ್ತೀನಿ. ನಾನು, ಸಿದ್ದರಾಮಯ್ಯ ಇಬ್ಬರೂ ಮಾತು ಕೊಟ್ಟ ಹಾಗೇ ನಡೆದುಕೊಳ್ತಾಯಿದ್ದೀವಿʼʼ ಎಂದರು.

Exit mobile version