ಶಿವಮೊಗ್ಗ: ಯುವಕ ಪ್ರೇಮ್ ಸಿಂಗ್‌ಗೆ ಚಾಕು ಇರಿದವರ ಕಾಲಿಗೆ ಪೊಲೀಸರು ಗುಂಡಿಟ್ಟು ಜೈಲಿನೊಳಗೆ ಕೂರಿಸಿದ್ದಾರೆ. ಇಂತಹ ಕೃತ್ಯ ಎಸಗಿದವರಿಗೆ ಇದು ಕೇವಲ ಸ್ಯಾಂಪಲ್ ಫೈರಿಂಗ್ ಮಾತ್ರ, ಮುಂದೆ ಇನ್ನೂ ಇದೆ. ದುಷ್ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರೊಂದಿಗೆ ನಗರದ ಮೆಗ್ಗಾನ್ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ, ಚಾಕು ಇರಿತಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್‌ನ ಆರೋಗ್ಯ ವಿಚಾರಿಸಿ ಮಾತನಾಡಿ, ಮುಸ್ಲಿಂ ಗೂಂಡಾಗಳು ಚಾಕುವಿನಿಂದ ಹಲ್ಲೆ ಮಾಡಿದ್ದು, ಪ್ರೇಮ್ ಸಿಂಗ್ ಚೇತರಿಕೆ ಕಾಣುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮೇಯರ್, ಉಪ ಮೇಯರ್ ಶಂಕರ್ ಗನ್ನಿ, ಮುಖಂಡ ಕೆ.ವಿ.ಅಣ್ಣಪ್ಪ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಪ್ರೇಮ್ ಸಿಂಗ್ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖವಾಗಲೆಂದು ಹಾರೈಸಿದ್ದಾರೆ.
ಇದನ್ನೂ ಓದಿ | ಮುಸ್ಲಿಂ ಏರಿಯಾ ಅಂದ್ರೇನು ಅದು ಪಾಕಿಸ್ತಾನವಾ? ಅಲ್ಲಿ ಜಿನ್ನಾ ಫೋಟೊ ಹಾಕ್ಬೇಕಾ?: ಸಿದ್ದುಗೆ ಸಿ.ಟಿ ರವಿ ತರಾಟೆ