ಬೆಂಗಳೂರು: ಈಗಾಗಲೆ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತ, ಬಿಜೆಪಿ ನಾಯಕರ ವಿರುದ್ಧ ಹರಿಹಾಯುತ್ತಿರುವ ಮಾಜಿ ಸಚಿವ ಎ. ಎಚ್. ವಿಶ್ವನಾಥ್ ಬಿಜೆಪಿ ಬಿಡುವುದು ಖಚಿತವಾಗಿದೆ. ಆದರೆ ತಾಂತ್ರಿಕವಾಗಿ ಮಾತ್ರವೇ ಪಕ್ಷದಲ್ಲಿ ಉಳಿದಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ವಿಶ್ವನಾಥ್, ಇಂದು ಡಿಕೆಶಿವಕುಮಾರ್ ಭೇಟಿ ಮಾಡಿದ್ದೇನೆ. ಎಐಸಿಸಿ ಅಧ್ಯಕ್ಷ, ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ಮಾಡಿದ್ದೇನೆ. ನಾನು ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತೇನೆ. ಪಕ್ಷ ಸೇರ್ಪಡೆಗೆ ಕೆಲ ತಾಂತ್ರಿಕ ದೋಷವಿದೆ. ಇದು ಕಾಂಗ್ರೆಸ್ ಪಕ್ಷ ಸೇರ್ಪಡೆಯಲ್ಲ.
ನಾನು ಸ್ವತಂತ್ರ, ನಾನು ಯಾವುದೇ ಪಕ್ಷಕ್ಕೆ ಸೇರಿದವನಲ್ಲ. ನಾನು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇನೆ. ನನ್ನ ಮನೆಗೆ ವಾಪಸ್ ಹೋಗೊಕೆ ಏನಿದೆ? ಯಾವುದೇ ಷರತ್ತುಗಳಿಲ್ಲ. ನಾನು ಪಕ್ಷ ಬಿಡುವಾಗ ತಿಳಿಸಿಯೇ ಹೋಗುತ್ತೇನೆ. ದೇವೇಗೌಡರಿಗೂ ತಿಳಿಸಿದ್ದೆ. ಕಾಂಗ್ರೆಸ್ ಬಿಡುವಾಗ ಪರಮೇಶ್ವರ್ ಅವರಿಗೆ ಕಚೇರಿಯಲ್ಲೇ ತಿಳಿಸಿದ್ದೆ. ರಾಜಕೀಯದಲ್ಲಿ ವಿಶ್ವಾಸ ಮುಖ್ಯ ಎಂದರು.
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕೋಲಾರದಲ್ಲಿ ಗೆಲ್ಲುತ್ತಾರೆ. ನಾವು ಕೂಡ ಸಿದ್ದರಾಮಯ್ಯರ ಪರ ಪ್ರಚಾರ ಮಾಡುತ್ತೇವೆ. ಕೋಲಾರದಲ್ಲಿ ಸಿದ್ದರಾಮಯ್ಯಗೆ, ಸಿದ್ದರಾಮಯ್ಯರೆ ಪ್ಲಸ್ ಪಾಯಿಂಟ್ ಎಂದರು. ಸಿದ್ದರಾಮಯ್ಯ ಮುಂದಿನ ಸಿಎಂ ಆಗುತ್ತಾರೆಯೇ? ಎಂಬ ಪ್ರಶ್ನೆಗೆ, ಇನ್ನೂ ಚುನಾವಣಾ ಆಗಿಲ್ಲ. ಚುನಾವಣೆ ಆದಮೇಲೆ ಗೊತ್ತಾಗುತ್ತದೆ ಎಂದರು.
ಇದನ್ನೂ ಓದಿ | Karnataka Election | ಬಾಂಬೇಗೆ ಸಪ್ಲೈ ಮಾಡಲಾದ ಆ ಹುಡುಗಿಯರ ಡಿಟೇಲ್ಸ್ ಕೊಡಿ: ಎಚ್‌ಡಿಕೆ ಮುಂದೆ ವಿಶ್ವನಾಥ್ ಡಿಮ್ಯಾಂಡ್