ಬೆಂಗಳೂರು: ಕಾಂಗ್ರೆಸ್‌ನಲ್ಲಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮತ್ತೆ ಜೆಡಿಎಸ್‌ಗೆ ಸೇರಲು ಕಸರತ್ತು ನಡೆಸಿದರು. ಪಕ್ಷ ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳುವ ಮಾತೇ ಇಲ್ಲ, ಅವರು ಇಂಟರ್ನ್ಯಾಷನಲ್ ಪಕ್ಷ ಸೇರಿದ್ದಾರೆ, ನಮ್ಮದು ಪ್ರಾದೇಶಿಕ ಪಕ್ಷ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಪದ್ಮನಾಭನಗರ ನಿವಾಸದಲ್ಲಿ ದೇವೆಗೌಡರನ್ನು ಭೇಟಿ ಮಾಡಿದ ವೈಎಸ್‌ವಿ ದತ್ತ, ಈ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದರು.
ಕಾಂಗ್ರೆಸ್‌ನಲ್ಲಿ ಕಡೂರು ಕ್ಷೇತ್ರದಿಂದ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಬೇಸರಗೊಂಡಿದ್ದ ದತ್ತ, ಸ್ವಾಭಿಮಾನಿಯಾಗಿ ಚುನಾವಣೆ ನಡೆಸುವುದಾಗಿ ಹೇಳಿದ್ದರು. ಬೆಂಬಲಿಗರ ಸಭೆಯನ್ನು ಕರೆದು ಟವೆಲ್ ಹಿಡಿದು ಭಿಕ್ಷೆ ಬೇಡಿದ್ದರು.
ಜೆಡಿಎಸ್‌ನಿಂದ ಚುನಾವಣೆ ಎದುರಿಸಿದರೆ ಗೆಲ್ಲುವ ಸಾಧ್ಯತೆ ಎಂದು ಅರಿತಿರುವ ದತ್ತ, ಎಚ್.ಡಿ. ದೇವೇಗೌಡರ ಮೂಲಕ ಪ್ರಸ್ತಾವನೆ ಇಟ್ಟಿದ್ದಾರೆ. ಆದರೆ ದೇವೇಗೌಡರು ಯಾವುದೇ ತೀರ್ಮಾನವನ್ನು ತಿಳಿಸಿಲ್ಲ.
ಎಚ್.ಡಿ. ಕುಮಾರಸ್ವಾಮಿಯವರ ಗಮನಕ್ಕೆ ತರುತ್ತೇನೆ. ಅವರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿ ಕಳಿಸಿದ್ದಾರೆ ಎನ್ನಲಾಗಿದೆ. ಇದೀಗ ಕುಮಾರಸ್ವಾಮಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದರ ಆಧಾರದಲ್ಲಿ ವೈಎಸ್‌ವಿ ದತ್ತ ಜೆಡಿಎಸ್ ಸೇರ್ಪಡೆ ಅವಲಂಬಿತವಾಗಿದೆ.
ಇದನ್ನೂ ಓದಿ: Karnataka Elections 2023: ಪಕ್ಷೇತರ ಅಭ್ಯರ್ಥಿ ಎಂದು ಘೋಷಿಸಿದ ವೈಎಸ್‌ವಿ ದತ್ತ; ಟವೆಲ್ ಒಡ್ಡಿ ಭಿಕ್ಷೆ ಬೇಡಿದ ಮೇಷ್ಟ್ರು