ಮಂಡ್ಯ: ಜೆಡಿಎಸ್‌ನಿಂದ ಉಚ್ಚಾಟನೆಗೊಂಡಿದ್ದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ (L.R. Shivarame Gowda) ಅವರಿಗೆ ಪಕ್ಷದಿಂದ ಮತ್ತೆ ಬುಲಾವ್ ಬಂದಿದೆಯೇ? ಹೌದು ಎಂದು ಸ್ವತಃ ಶಿವರಾಮೇಗೌಡ ಅವರೇ ಹೇಳಿಕೊಂಡಿದ್ದಾರೆ.
ಮದ್ದೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಪಕ್ಷ ಸೇರ್ಪಡೆಗೆ ಜೆಡಿಎಸ್‌ನಿಂದ ಆಹ್ವಾನ ಬಂದಿದೆ. ಬಿಜೆಪಿ, ಕಾಂಗ್ರೆಸ್‌ನಿಂದಲೂ ಆಹ್ವಾನ ಬಂದಿದೆ. ಆದರೆ, ನಾನು ಯಾವ ಪಕ್ಷಕ್ಕೆ ಸೇರ್ಪಡೆಗೊಳ್ಳಬೇಕು ಎಂಬುದು ನಿರ್ಧಾರವಾಗಿಲ್ಲ. ಕ್ಷೇತ್ರದ ಜನರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ತಿಳಿಸಿದರು.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ನಾನು ಯಾವುದೇ ಪಕ್ಷಕ್ಕೆ ಸೇರುವ ತೀರ್ಮಾನವನ್ನು ಇನ್ನೂ ತೆಗೆದುಕೊಂಡಿಲ್ಲ. ನಮ್ಮ ಜನಕ್ಕೆ ಒಳ್ಳೆಯದು ಮಾಡುವ, ನನ್ನನ್ನು ಸರಿಯಾಗಿ ನಡೆಸಿಕೊಳ್ಳುವ ಭರವಸೆ ನೀಡುವ ಪಕ್ಷಕ್ಕೆ ಜನಾಭಿಪ್ರಾಯ ಪಡೆದು ಹೋಗುವೆ. ಈಗಾಗಲೇ ಕೆಲ ಪಕ್ಷಗಳಿಂದ ಆಹ್ವಾನ ಬಂದಿದೆ. ಟಿಕೆಟ್‌ಗಾಗಿ ಯಾರಾದರೂ ಲಾಬಿ ಮಾಡಲಿ, ಅರ್ಜಿ ಹಾಕಿದವರಿಗೆಲ್ಲ ಟಿಕೆಟ್ ಕೊಡುತ್ತಾರಾ? ನಾನು ಎಲ್ಲವನ್ನೂ ನೋಡಿದ್ದೇನೆ, ಎಲ್ಲರೂ ಪ್ರಯತ್ನ ಮಾಡಲಿ ಎಂದರು.
ದಿವಂಗತ ಜಿ.ಮಾದೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು.
ಇದನ್ನೂ ಓದಿ | ಮಂಡ್ಯದಲ್ಲಿ BJP ಅರಳಿಸಲು ಅನ್ಯ ಪಕ್ಷಗಳ ಮುಖಂಡರಿಗೆ ಗಾಳ