ಬೆಂಗಳೂರು: ನವದೆಹಲಿಯಲ್ಲಿ ನಿರ್ಮಾಣವಾಗಿರುವ ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮವನ್ನು 20ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಬಹಿಷ್ಕರಿಸಿರುವ ಬೆನ್ನಿಗೇ, ಕಾರ್ಯಕ್ರಮದಲ್ಲಿ ಉಪಸ್ಥಿತರಿರಲು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನಿರ್ಧರಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಎಚ್.ಡಿ. ದೇವೇಗೌಡರು ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಈಗಾಗಲೆ ಅನೇಕ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಅನೇಕ ಪಕ್ಷಗಳು ಕಾರ್ಯಕ್ರಮಕ್ಕೆ ತೆರಳುತ್ತಿವೆ. ಈ ಕುರಿತು ಯಾವ ನಿರ್ಧಾರ ಕೈಗೊಳ್ಳಬೇಕೆಂದು ಚರ್ಚೆ ನಡೆಯಿತು.
ಮೇ 28ರಂದು ನಡೆಯುವ ಕಾರ್ಯಕ್ರಮಕ್ಕೆ ಎಚ್.ಡಿ. ದೇವೇಗೌಡರು ತೆರಳುವುದೇ ಉತ್ತಮ ಎಂದು ಸಭೆಯಲ್ಲಿದ್ದ ಜಿಲ್ಲಾಧ್ಯಕ್ಷರು, ಶಾಸಕರು, ಇನ್ನಿತರೆ ನಾಯಕರು ಅಭಿಪ್ರಾಯಪಟ್ಟರು. ಎಲ್ಲರ ಅಭಿಪ್ರಾಯ ಪಡೆದ ದೇವೇಗಗೌಡರು, ಯಾವ ಪಕ್ಷ ಬೇಕಾದರೂ ಕಾರ್ಯಕ್ರಮ ಬಹಿಷ್ಕರಿಸಲಿ, ತಾವು ತೆರಳುವುದಾಗಿ ನಿರ್ಧರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸುವ ಪಕ್ಷಗಳು: ಬಿಜು ಜನತಾ ದಳ(BJD), ಜನತಾದಳ ಜಾತ್ಯತೀತ(ಜೆಡಿಎಸ್), ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ(YSRCP), ಶಿರೋಮಣಿ ಅಕಾಲಿ ದಳ(SAD), ತೆಲುಗು ದೇಶಮ್ ಪಾರ್ಟಿ (TDP), ಶಿವಸೇನೆ(ಶಿಂಧೆ ಬಣ), ಆಲ್ ಇಂಡಿಯಾ ಅಣ್ಣಾ ದ್ರಾವಿಡ್ ಮುನ್ನೇತ್ರ ಕಳಗಂ (AIADMK), ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP), ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (NDPP), ಸಿಕ್ಕಿಮ್ ಕ್ರಾಂತಿಕಾರಿ ಮೋರ್ಚಾ (SKM), ಮಿಜೋ ನ್ಯಾಷನಲ್ ಫ್ರಂಟ್ (MNF), ಜನನಾಯಕ ಜನತಾ ಪಾರ್ಟಿ (JJP), ಆಲ್ ಜಾರ್ಖಂಡ್ ಸ್ಟುಡೆಂಟ್ಸ್ ಯುನಿಯನ್(AJSU), ರಾಷ್ಟ್ರೀಯ ಲೋಕ ಜನಶಕ್ತಿ ಪಾರ್ಟಿ (RLJP), ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI), ಅಪ್ನಾದಳ (ಎಸ್), ಇಂಡಿಯಾ ಮಕ್ಕಳ್ ಕಲ್ವಿ ಮುನ್ನೇತ್ರ ಕಳಗಂ (IMKMK), ತಮಿಳು ಮಾನಿಲಾ ಕಾಂಗ್ರೆಸ್, ಲೋಕ ಜನಶಕ್ತಿ ಪಾರ್ಟಿ (LJP-ರಾಮ್ ವಿಲಾಸ್), ಬಹುಜನ ಸಮಾಜ್ ಪಾರ್ಟಿ (BSP).
ಕಾರ್ಯಕ್ರಮ ಬಹಿಷ್ಕರಿಸಿದ ಪಾರ್ಟಿಗಳು: ಕಾಂಗ್ರೆಸ್ (Congress), ಡಿಎಂಕೆ (DMK), ಆಮ್ ಆದ್ಮಿ ಪಾರ್ಟಿ (AAP), ತೃಣಮೂಲ ಕಾಂಗ್ರೆಸ್(TMC), ಶಿವಸೇನಾ (ಉದ್ಧವ್ ಠಾಕ್ರೆ ಬಣ), ಸಂಯುಕ್ತ ಜನತಾ ದಳ (JDU), ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ (NCP), ಕಮ್ಯುನಿಸ್ಟ್ ಪಾರ್ಟಿ ಆಪ್ ಇಂಡಿಯಾ-ಮಾರ್ಕ್ಸ್‌ವಾದಿ (CPI-M), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI), ರಾಷ್ಟ್ರೀಯ ಜನತಾ ದಳ (RJD), ಜಾರ್ಖಂಡ್ ಮುಕ್ತಿ ಮೋರ್ಚಾ (JMM), ವಿಸಿಕೆ (VCK), ರಾಷ್ಟ್ರೀಯ ಲೋಕ ದಳ (RLD), ಆರ್‌ಎಸ್‌ಪಿ (RSP), ಎಂಡಿಎಂಕೆ ಮುಸ್ಲೀಮ್ ಲೀಗ್, ನ್ಯಾಷನಲ್ ಕಾನ್ಫರೆನ್ಸ್, ಕೇರಳ ಕಾಂಗ್ರೆಸ್ ಪಕ್ಷಗಳು ಹೊಸ ಸಂಸತ್ ಭವನ ಉದ್ಘಾಟನೆಯನ್ನು ಬಹಿಷ್ಕರಿಸಿವೆ.
ಇದನ್ನೂ ಓದಿ: ವಿಸ್ತಾರ Explainer: New Parliament Building: ಹೇಗಿದೆ ಹೊಸ ಸಂಸತ್ ಭವನ? ಇಲ್ಲಿದೆ ನೋಡಿ ವಿಡಿಯೊ