Site icon Vistara News

Physical abuse: ನಾಲ್ವರು ಅಪ್ರಾಪ್ತ ಬಾಲಕರಿಂದ 9 ವರ್ಷದ ಬಾಲಕಿ ಮೇಲೆ ದೌರ್ಜನ್ಯ, ಟೆರೇಸ್‌ನಲ್ಲಿ ದುಷ್ಕೃತ್ಯ

Physical abuse

4 year-old raped at tuition centre in Delhi; Accused Arrested

ಕಲಬುರಗಿ: ಮಕ್ಕಳಲ್ಲಿ ತ್ವರಿತವಾಗಿ ಆಗುತ್ತಿರುವ ದೈಹಿಕ ಬದಲಾವಣೆಗಳು (Physical changes), ಮಾನಸಿಕ ಬೆಳವಣಿಗೆಗಳು (Mental developments), ಮೊಬೈಲ್‌ ಮತ್ತು ಇತರ ಮಾಧ್ಯಮಗಳ ಮೂಲಕ ದೊರೆಯುವ ಪ್ರಚೋದನೆಗಳ ಒಟ್ಟಾರೆ ಪರಿಣಾಮ ಆಘಾತಕಾರಿಯಾಗಿರುತ್ತದೆ ಎನ್ನುವುದಕ್ಕೆ ಒಂದು ಅಪ್ಪಟ ಉದಾಹರಣೆ ಇಲ್ಲಿದೆ. ಇನ್ನೂ ಪುಟ್ಟ ಮಕ್ಕಳಂತೆ ಇರುವ ನಾಲ್ವರು ಬಾಲಕರು ತಮ್ಮದೇ ಓರಗೆಯ ಪುಟ್ಟ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ (Physical abuse) ನಡೆಸಿದ ಭೀಕರ ಘಟನೆಯೊಂದು ಎಲ್ಲ ಕಡೆ ಆತಂಕ ಮೂಡಿಸುವಷ್ಟು ಭಯಾನಕವಾಗಿದೆ.

ಈ ಘಟನೆ ನಡೆದಿರುವುದು ಕಲಬುರಗಿ ನಗರದಲ್ಲೇ. ನಾಲ್ವರು ಅಪ್ರಾಪ್ತ ಬಾಲಕರು ತಮ್ಮ ಜತೆಗೆ ಆಡುತ್ತಿದ್ದ 9 ವರ್ಷದ ಬಾಲಕಿಯೊಬ್ಬಳನ್ನು‌ ಕರೆದುಕೊಂಡು ಹೋಗಿ ಸರದಿ ಪ್ರಕಾರ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.

ಬುಧವಾರ ಮಧ್ಯಾಹ್ನದ ಹೊತ್ತು ಈ ಘಟನೆ ನಡೆದಿದೆ. ಎಲ್ಲ ಮಕ್ಕಳು ಜತೆಗೆ ಆಟವಾಡುತ್ತಿದ್ದರು. ಆಗ ನಾಲ್ಕು ಹುಡುಗರು ಬಾಲಕಿಯನ್ನು ಟೆರೇಸ್‌ಗೆ ಕರೆದುಕೊಂಡು ಹೋಗಿದ್ದಾರೆ. ಬಾಲಕರು ಮೊಬೈಲ್‌ ಮತ್ತಿತರ ಸಾಧನಗಳ ಮೂಲಕ ನೋಡಿದ ದೃಶ್ಯಗಳ ಪ್ರಭಾವವೋ ಗೊತ್ತಿಲ್ಲ. ಒಂಟಿ ಹುಡುಗಿಯನ್ನು ನೋಡಿ ಆಕೆಯನ್ನು ಇದೇ ರೀತಿ ಬಳಸಿಕೊಳ್ಳಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಅಲ್ಲೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಘಟನೆಯ ಬಳಿಕ ಆ ಬಾಲಕರು ಏನೂ ಆಗಿಲ್ಲವೆಂಬಂತೆ ತಮ್ಮ ಪಾಡಿಗೆ ಇದ್ದರು. ಆದರೆ, ಬಾಲಕಿ ಮಾತ್ರ ನೋವಿನ ಯಾತನೆಯಲ್ಲಿ ಮುಳುಗಿದ್ದಳು. ಆಕೆ ನೋವಿನಿಂದ ನರಳುತ್ತಿರುವುದನ್ನು ಗಮನಿಸಿದ ತಾಯಿ ವಿಚಾರಿಸಿದ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ.

ಕೂಡಲೇ ಮನೆಯವರು ಕಲಬುರಗಿ ನಗರದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮಧ್ಯ ಪ್ರವೇಶಿಸಿ ಅಸ್ವಸ್ಥಳಾಗಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪೊಲೀಸರು ಕೂಡಾ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅವರನ್ನು ಮಕ್ಕಳ ಕಾರಾಗೃಹಕ್ಕೆ ಕಳುಹಿಸುವ ಸಾಧ್ಯತೆಗಳು ಇವೆ.

ಹಾಡಹಗಲೇ ನಡೆದಿರುವ ಈ ಘಟನೆ ಪರಿಸರದಲ್ಲಿ ಆತಂಕವನ್ನು ಸೃಷ್ಟಿಸಿದೆ. ಅದರಲ್ಲೂ ಮುಖ್ಯವಾಗಿ ಪುಟ್ಟ ಪುಟ್ಟ ಹೆಣ್ಣು ಮಕ್ಕಳಿರುವ ಹೆತ್ತವರು ತಮ್ಮ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅದೂ ಕೂಡಾ ಜತೆಯಾಗಿ ಆಡುತ್ತಿದ್ದ ಮಕ್ಕಳೇ ಈ ರೀತಿಯಾಗಿ ಪ್ರಚೋದಿತರಾಗಿ ದುಷ್ಕೃತ್ಯ ನಡೆಸುತ್ತಾರೆ ಎಂದರೆ ಯಾರನ್ನು ನಂಬುವುದು ಯಾರನ್ನು ಬಿಡುವುದು, ಮಕ್ಕಳನ್ನು ಒಂಟಿಯಾಗಿ ಬಿಟ್ಟು ಹೋಗುವುದು ಹೇಗೆ ಎಂಬ ಪ್ರಶ್ನೆಯೊಂದಿಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Suicide Case: ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಮನ ನೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ

ಗಂಡು ಮಕ್ಕಳಿಗೆ ದುಷ್ಟ ಯೋಚನೆಗಳು ತುಂಬಲು ಬಿಡಬಾರದು, ಅವರು ಮೊಬೈಲ್‌ಗಳಲ್ಲಿ ಏನು ನೋಡುತ್ತಾರೆ, ಹೆಣ್ಣು ಮಕ್ಕಳ ಬಗ್ಗೆ ಅವರಿಗೆ ಕೆಟ್ಟ ಯೋಚನೆಗಳು ಇವೆಯಾ? ಅವರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ಗಮನಿಸಿಕೊಂಡಿರಬೇಕು ಎನ್ನುವುದು ಮನಶಾಸ್ತ್ರಜ್ಞರು ನೀಡುವ ಸಲಹೆ.

Exit mobile version