ಬೆಂಗಳೂರು: ನಿರಂತರ ದೂರುಗಳು ಬರುತ್ತಿದ್ದ ಹಿನ್ನೆಲೆ ಕಾರ್ಯಾಚರಣೆಗಿಳಿದ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರು ಅಪ್ರಾಪ್ತ ವಯಸ್ಸಿನ ಹುಡುಗರನ್ನು ಪೊಲೀಸರು ನಗರದಲ್ಲಿ ವಶಕ್ಕೆ ಪಡೆದಿದ್ದಾರೆ. ಹುಡುಗಿಯರನ್ನು ಇಂಪ್ರೆಸ್ ಮಾಡುವ ಸಲುವಾಗಿ ವ್ಹೀಲಿಂಗ್ (Wheeling Stunt) ವಿಡಿಯೊಗಳನ್ನು ಹುಡುಗರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ವ್ಹೀಲಿಂಗ್ ಸಂಬಂಧ ಒಟ್ಟು 10 ಪ್ರಕರಣಗಳು ದಾಖಲಾಗಿದ್ದು, 14 ಬೈಕ್‌ಗಳನ್ನು ಪೊಲೀರು ವಶಕ್ಕೆ ಪಡೆದಿದ್ದಾರೆ. ಇನ್ನು ಜಪ್ತಿ ಮಾಡಿದ ಅಷ್ಟೂ ವಾಹನಗಳಿಗೆ ಇನ್ಶೂರೆನ್ಸ್, ಆರ್‌ಸಿ ಸೇರಿ ಯಾವ ದಾಖಲೆಗಳೂ ಇಲ್ಲ, ಕೆಲವೊಂದು ವಾಹನಗಳಿಗೆ ನಂಬರ್ ಪ್ಲೇಟ್ ಕೂಡ ಇಲ್ಲ. ಹೀಗಾಗಿ ಅವು ಯಾರಿಗೆ ಸೇರಿದ ಬೈಕುಗಳು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಮೀಸೆ ಚಿಗುರದ ಯುವಕರ ಹುಚ್ಚಾಟಕ್ಕೆ ವಾಹನ ಸವಾರರು ಕಿರಿಕರಿ ಅನುಭವಿಸುತ್ತಿದ್ದರು. ಆದರೆ, ಈ ಗ್ಯಾಂಗ್ ಹುಡುಗಿಯರನ್ನು ಇಂಪ್ರೆಸ್ ಮಾಡಲೆಂದೇ ರಸ್ತೆಗಿಳಿಯುತ್ತಿತ್ತು. ವ್ಹೀಲಿಂಗ್ ಮಾಡಿ ಡೆವಿಲ್ಸ್ ಆನ್ ರೋಡ್, ನೇಕೆಡ್ ಎಂದು ವಿಡಿಯೊಗಳೊಂದಿಗೆ ಪೋಸ್ಟ್ ಮಾಡುತ್ತಿದ್ದರು. ಮಾಳಗಾಳ, ಲಗ್ಗೆರೆ ಟೀಂ ಎಂದು ಕಟ್ಟಿಕೊಂಡು ಹುಡುಗರು ವ್ಹೀಲಿಂಗ್ ಮಾಡ್ತಿದ್ದರು. ಇವರೆಲ್ಲರೂ ಬ್ಯಾಟರಾಯನಪುರ ಬಳಿ ಜಮಾಯಿಸಿ ನಂತರ ಅಲ್ಲಿಂದ ವ್ಹೀಲಿಂಗ್‌ಗೆ ಹೋಗುತ್ತಿದ್ದರು. ಇಂಪ್ರೆಸ್ ಮಾಡುವ ಸಲುವಾಗಿ ವಿಡಿಯೊಗಳನ್ನು ಅವರ ಶಾಲೆ ಅಥವಾ ಕಾಲೇಜಿನ ಹುಡುಗಿಯರಿಗೆ ಕಳುಹಿಸುತ್ತಿದ್ದರು.
ಇದನ್ನೂ ಓದಿ | Cracker Danger : ಕುರ್ಚಿಯ ಕೆಳಗಿಟ್ಟಿದ್ದ ಆಟಂ ಬಾಂಬ್ ಸ್ಫೋಟ, ಯುವಕ ದಾರುಣ ಸಾವು
ನಿರಂತರ ಒಂದು ತಿಂಗಳವರೆಗೂ ರೀಲ್ಸ್‌ಗಳನ್ನು ನೋಡುತ್ತಿದ್ದ ಪೊಲೀಸರು, ನಂತರ ಅವರು ಎಲ್ಲೆಲ್ಲಿ ಕೃತ್ಯ ಎಸಗುತ್ತಿದ್ದರೋ ಆ ಸ್ಥಳದಲ್ಲಿ ಮಫ್ತಿಯಲ್ಲಿ ನಿಂತು ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು ನಾಲ್ವರು ಅಪ್ರಾಪ್ತರನ್ನು ವಶಕ್ಕೆ ಪಡೆದು ನಂತರ ಅವರ ಬಳಿ ವ್ಹೀಲಿಂಗ್‌ಗೆಂದೇ ಮಾಡಿಫೈ ಮಾಡಿದ್ದ ಒಟ್ಟು 14 ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಹಿಟ್ ಆ್ಯಂಡ್ ರನ್ ಮಾಡಿ ಎಸ್ಕೇಪ್ ಆಗಿದ್ದ ಅಪ್ರಾಪ್ತನ ಮೇಲೆ ಕೂಡ ಕೇಸ್ ದಾಖಲಾಗಿದ್ದ ಹಿನ್ನೆಲೆಯಲ್ಲಿ ಆತನ ಪೋಷಕರಿಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ.
ವ್ಹೀಲಿಂಗ್ ಮಾಡುವ ಸಂದರ್ಭದಲ್ಲಿ ಆರೋಪಿಗಳನ್ನು ಹಿಡಿಯುವುದು ಕೂಡ ಕಷ್ಟದ ಕೆಲಸ. ಅಕಸ್ಮಾತ್ ಬಿದ್ದು ಅನಾಹುತವಾದರೂ ಅದು ಪೊಲೀಸರ ಮೇಲೆಯೇ ಆರೋಪ ಬರುತ್ತದೆ. ಹೀಗಾಗಿ ರೀಲ್ಸ್ ಮಾಡಿ ಸಿಕ್ಕಿಬಿದ್ದವರ ಮನೆಗೆ ಹೋಗಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಶೇಷ ತಂಡ ರಚನೆ
ಈ ಬಗ್ಗೆ ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಹದಣ್ಣನವರ್ ಪ್ರತಿಕ್ರಿಯಿಸಿ, ಪೊಲೀಸರಿಗೆ ವ್ಹೀಲರ್ಸ್‌ಗಳನ್ನು ಹಿಡಿಯುವುದು ಸವಾಲಾಗಿತ್ತು. ಅಪ್ರಾಪ್ತರು ವ್ಹೀಲಿಂಗ್ ಮಾಡುವ ಬಗ್ಗೆ ಅನೇಕ ದೂರುಗಳು ಬರುತ್ತಿದ್ದವು. ಇದಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿತ್ತು. ಒಂದೂವರೆ ತಿಂಗಳಲ್ಲಿ 10 ಕೇಸ್ ದಾಖಲಿಸಿ, 14 ಬೈಕ್, ನಾಲ್ವರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Cylinder Blast : ಗ್ಯಾಸ್ ಸೋರಿಕೆಯಾಗಿ ಬೆಂಕಿ ಅವಘಡ; ಮನೆ ಧ್ವಂಸ; ಮೂವರ ಸ್ಥಿತಿ ಗಂಭೀರ
ಮಂಗಳವಾರ ನಾಲ್ಕು ಪ್ರಕರಣ ದಾಖಲಾಗಿವೆ. ಲಗ್ಗೆರೆ, ಮಾಳಗಾಳ ಎಂದು ಹುಡುಗರೇ ಟೀಂ ಮಾಡಿಕೊಂಡಿದ್ದರು. ಅವರು ಮೋಜು ಮಸ್ತಿಗಾಗಿ ವ್ಹೀಲಿಂಗ್ ಮಾಡುತ್ತಿದ್ದರು. ಇದಕ್ಕಾಗಿ ವಾಹನಗಳನ್ನು ಆಲ್ಟರ್ ಮಾಡಿಕೊಂಡಿದ್ದರು. ಅವರ ಬಳಿ ಯಾವುದೇ ಡಿಎಲ್, ಇನ್ಶೂರೆನ್ಸ್ ಇರಲಿಲ್ಲ. ರೀಲ್ಸ್‌ಗಳನ್ನು ಮಾಡಿ, ಗರ್ಲ್ ಫ್ರೆಂಡ್ ಮುಂದೆ ಪೋಸ್ ಕೊಡುತ್ತಿದ್ದರು. ರೌಡಿಶೀಟರ್ ರೀತಿ ಇವರ ವಿರುದ್ಧವೂ ಟ್ರಾಫಿಕ್ ವಿಭಾಗದಲ್ಲಿ ಪ್ರತ್ಯೇಕ ಕೇಸ್ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ.