Site icon Vistara News

ಸಹಸ್ರಲಿಂಗದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನಾಪತ್ತೆ

Aghanashini River in Sahasralinga

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗ ಪ್ರವಾಸಿ ತಾಣ (Sahasralinga Tourist Spot) ಸಮೀಪದ ಶಾಲ್ಮಲಾ ನದಿಯಲ್ಲಿ (Bedti River) ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನಾಪತ್ತೆಯಾಗಿದ್ದಾರೆ. ಸದ್ಯ ನಾಲ್ವರ ಹುಡುಕಾಟ ಆರಂಭವಾಗಿದೆ.

ವೀಕೆಂಡ್ ಟ್ರಿಪ್‌ಗೆ ಸಹಸ್ರಲಿಂಗಕ್ಕೆ ಬಂದಿದ್ದ ಒಂದೇ ಕುಟುಂಬದ ಐವರು ಯುವಕರು ಶಾಲ್ಮಲಾ ನದಿಯಲ್ಲಿ ಈಜಲು ತೆರಳಿದ್ದರು. ಆದರೆ, ಎಷ್ಟು ಸಮಯವಾದರೂ ಬಾರದೇ ಇದ್ದಾಗ ಅನುಮಾನ ಬಂದಿದೆ. ಎಲ್ಲಿ ನೋಡಿದರೂ ಯುವಕರು ಕಾಣಿಸುತ್ತಿಲ್ಲ. ಹೀಗಾಗಿ ಅವರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.

ಶಿರಸಿಯ ಕಸ್ತೂರಬಾ ನಗರ, ರಾಮನಬೈಲಿನ ಯುವಕರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44) ನಾದಿಯಾ ನೂರ್ ಅಹಮದ್ ಶೇಖ್ (20) ಹಾಗೂ ಕಸ್ತೂರಬಾ ನಗರದ ಮಿಸ್ಬಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್ (22) ರಾಮನಬೈಲಿನ ಯುವಕ ಉಮರ್ ಸಿದ್ದಿಕ್ (23) ನಾಪತ್ತೆಯಾದವರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದಾರೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Murder Case : ಮಗುವಿನ ಕಿರಿಕಿರಿಗೆ ಹಸಿ ಬಾಣಂತಿಯನ್ನೇ ಕೊಂದ ದುಷ್ಟ ಪತಿ

ರಾಯಚೂರು: ಮಗುವಿನ ಕಿರಿಕಿರಿಗೆ ಹಸಿ ಬಾಣಂತಿಯನ್ನೇ ಪಾಪಿ ಪತಿಯೊಬ್ಬ ಹತ್ಯೆ (Murder case) ಮಾಡಿರುವ ದಾರುಣ ಘಟನೆ ನಡೆದಿದೆ. ರಾಯಚೂರಲ್ಲಿ ಲಾಡ್ಜ್‌ವೊಂದರಲ್ಲಿ (raichur News) ಮಹಿಳೆಯೊಬ್ಬರು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಪೊಲೀಸರ ತನಿಖೆ ವೇಳೆ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ತಿಳಿದು ಬಂದಿದೆ.

ಉತ್ತರ ಪ್ರದೇಶ ಮೂಲದ ಸೋನಿ ಮೃತ ದುರ್ದೈವಿ. ಪತಿ ಅವಿನಾಶ್‌ನಿಂದಲೇ ಸೋನಿ ಹತ್ಯೆ ಆಗಿದ್ದಳು. 20 ದಿನದ ಹಸಿ ಬಾಣಂತಿ ಕೊಂದು ಅವಿನಾಶ್‌ ಸಿಜೇರಿಯನ್ ಕಥೆ ಕಟ್ಟಿದ್ದ. ಸಿಜೇರಿಯನ್ ನೋವು ತಾಳಲಾರದೆ ಸೋನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದ.

ಖಾಸಗಿ ಲಾಡ್ಜ್‌ವೊಂದರ ರೂಮ್ ನಂಬರ್ 113ರಲ್ಲಿ ಪತ್ನಿಯನ್ನು ಕೊಂದು, ಬಳಿಕ ಫ್ಯಾನ್ಸ್‌ಗೆ ನೇಣು ಬಿಗಿದಿದ್ದ. ಕಳೆದ ಡಿ. 13 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ಪ್ರೀತಿಸಿ ಮದುವೆಯಾಗಿದ್ದ‌ ಅವಿನಾಶ್‌ ಹಾಗೂ ಸೋನಿ ಕುಟುಂಬ ತೊರೆದು ರಾಯಚೂರಿಗೆ ಬಂದಿದ್ದರು. ಖಾಸಗಿ ಲಾಡ್ಜ್‌ನಲ್ಲಿ ಸ್ವೀಟ್ ತಯಾರಿಸುತ್ತಿದ್ದರು. ಕೆಲಸದ ಬಳಿಕ‌ ಲಾಡ್ಜ್‌ವೊಂದರ ರೂಮ್‌ನಲ್ಲಿ ವಾಸವಿದ್ದರು. 20 ದಿನದ ಹಿಂದೆಯಷ್ಟೆ ಸೋನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಈ ಅವಿನಾಶ್‌ ಹಸಗೂಸು ಕಿರಿಕಿರಿ ಮಾಡುವುದರಿಂದ ಸಿಡುಕುತ್ತಿದ್ದ.

ಕೊಂದು ಟಿ20 ಮ್ಯಾಚ್‌ ನೋಡುತ್ತಿದ್ದ ದುಷ್ಟ

ಇಷ್ಟಲ್ಲದೆ ಮಗು ಹುಟ್ಟಿದ ಬಳಿಕ ಆರ್ಥಿಕ ಪರಿಸ್ಥಿತಿ ಬಿಗಾಡಿಯಿಸಿತ್ತು. ಇದರಿಂದ ತಲೆಕೆಡಿಸಿಕೊಂಡಿದ್ದ ಅವಿನಾಶ್‌ ಪತ್ನಿಯನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದ. ಪತ್ನಿ ಸೋನಿಯಾಳ ಕತ್ತು ಹಿಸುಕಿ ಕೊಲೆಗೈದು, ಫ್ಯಾನ್‌ಗೆ ನೇಣು ಬಿಗಿದಿದ್ದ. ಬಳಿಕ ಟಿ 20 ಮ್ಯಾಚ್ ನೋಡಿದ್ದ.

ಇದನ್ನೂ ಓದಿ: ಅಯ್ಯಪ್ಪ ಮಾಲಾಧಾರಿಗಳಿಗೆ ಕೋವಿಡ್‌ ಟೆಸ್ಟ್‌; ಸೋಂಕಿತರ ಸಂಖ್ಯೆ ಡಬಲ್‌ ಆದ್ರೆ ನ್ಯೂಇಯರ್‌ಗೆ ಟಫ್‌ ರೂಲ್ಸ್‌!

ಸದ್ಯ ರಾಯಚೂರು ಪಶ್ಚಿಮ ಠಾಣೆಯಲ್ಲಿ UDR ಆಗಿದ್ದ ಪ್ರಕರಣವು ಮಹಿಳಾ ಪೊಲೀಸ್ ಠಾಣೆಗೆ ಕೊಲೆ ಕೇಸ್ ಆಗಿ ವರ್ಗಾವಣೆಗೊಂಡಿದೆ. ಆರೋಪಿ ಅವಿನಾಶ್‌ನನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version