Site icon Vistara News

ಭದ್ರಾವತಿಯಲ್ಲಿ 2 ಕೋಮುಗಳ ನಡುವೆ ಗಲಾಟೆ; ಹರಿತ ಆಯುಧಗಳಿಂದ ಹಲ್ಲೆ, ನಾಲ್ವರಿಗೆ ಗಾಯ

Group clash in Bhadravathi

ಶಿವಮೊಗ್ಗ: ಜಿಲ್ಲೆಯ ಭದ್ರಾವತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಎರಡು ಕೋಮಿನ ಯುವಕರ ನಡುವಿನ ಗಲಾಟೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಭದ್ರಾವತಿಯ ಗಾಂಧಿ ವೃತ್ತದಲ್ಲಿ ಮೊದಲಿಗೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದರಿಂದ ಅರವಿಂದ್, ಗೌತಮ್ ಎಂಬುವವರಿಗೆ ಗಾಯಗಾಗಿದೆ. ಬಳಿಕ ಅವರನ್ನು ದಾಖಲಿಸಿದ್ದ ಆಸ್ಪತ್ರೆ ಬಳಿ ಮತ್ತೊಮ್ಮೆ ಈ ಎರಡೂ ತಂಡಗಳ ಸಹಚರರ ನಡುವೆ ಘರ್ಷಣೆಯಾಗಿ ಹಲ್ಲೆ ನಡೆದಿದ್ದರಿಂದ ಹರೀಶ್ ಎಂಬಾತ ಗಾಯಗೊಂಡಿದ್ದಾನೆ. ಇದೇ ವೇಳೆ ರಿಜ್ವಾನ್ ಎಂಬಾತನಿಗೂ ಗಾಯಗಳಾಗಿವೆ.

ಸ್ಥಳಕ್ಕೆ ಭದ್ರಾವತಿ ಹಳೇನಗರ ಪೊಲೀಸರು ಧಾವಿಸಿ ಗುಂಪು ಚದುರಿಸಿದ್ದಾರೆ. ಗಲಾಟೆಯಲ್ಲಿ ಪಕ್ಕೆಲುಬು, ಕೈ ಭಾಗದಲ್ಲಿ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ರಿಜ್ವಾನ್‌ನನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರವಿಂದ್‌, ಗೌತಮ್‌ ಹಾಗೂ ಹರೀಶ್‌ಗೆ ಭದ್ರಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹರೀಶ್, ಗೌತಮ್ ಮತ್ತು ಜಹೀರ್ ನಡುವೆ ಹಳೇ ದ್ವೇಷವಿತ್ತು. ಗೌತಮ್ ವಿರುದ್ಧ ಕೆಳ ತಿಂಗಳ ಹಿಂದೆ ಜಹೀರ್ ಸ್ಟೇಟಸ್ ಹಾಕಿದ್ದ. ಈ ಸಂಬಂಧ ಜಹೀರ್ ಮೇಲೆ ಹರೀಶ್ ಮತ್ತು ಗೌತಮ್ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಎರಡು ಕೋಮಿನ ಯುವಕರ ನಡುವೆ ನಡುವೆ ಗಲಾಟೆ ನಡೆದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಎಸ್‌ಪಿ ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ | Ksrtc Robbery | ಬಸ್‌ ಕಂಡಕ್ಟರ್‌ ಜಾಣತನಕ್ಕೆ ಬಲೆಗೆ ಬಿದ್ದರು ಬಸ್‌ನಲ್ಲಿ ಕಳ್ಳತನ ಮಾಡುತ್ತಿದ್ದ ಚಾಲಾಕಿಗಳು

Exit mobile version