Site icon Vistara News

ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ನಾಲ್ವರು ನೀರುಪಾಲು: ಇಬ್ಬರು ಮಹಿಳೆಯರು, ಅವರ ಇಬ್ಬರು ಮಕ್ಕಳು ಜಲ ಸಮಾಧಿ

neerupalu

ಬೀದರ್‌: ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ನಾಲ್ವರು ನೀರುಪಾಲಾದ ದುರಂತ ಘಟನೆ ಬೀದರ್‌ ತಾಲೂಕಿನ ಕಂಗಟಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಬಟ್ಟೆ ತೊಳೆಯಲು ಹೋದ ಇಬ್ಬರು ಮಹಿಳೆಯರು ಮತ್ತು ಅವರ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಸುನೀತಾ (೩೨) ಮತ್ತು ಅವರ ಮಗ ನಾಗಶೆಟ್ಟಿ (೧೨) ಹಾಗೂ ಆನಂದಾ (೩೩) ಮತ್ತು ಅವರ ಮಗ (೧೪) ಮೃತ ದುರ್ದೈವಿಗಳು.

ಇಬ್ಬರು ಮಹಿಳೆಯರು ಸಂಜೆಯ ಹೊತ್ತಿಗೆ ಕೆರೆ ಕಡೆಗೆ ಬಟ್ಟೆ ತೊಳೆಯಲು ಹೋಗಿದ್ದರು. ಈ ವೇಳೆಗೆ ಅವರ ಆಸುಪಾಸು ಒಂದೇ ವಯಸ್ಸಿನ ಮಕ್ಕಳು ಕೂಡಾ ಜತೆಗೆ ಹೋಗಿದ್ದರು. ಅಮ್ಮಂದಿರು ಬಟ್ಟೆ ತೊಳೆಯುತ್ತಿದ್ದರೆ ಮಕ್ಕಳು ನೀರಿನಲ್ಲಿ ಆಟವಾಡುತ್ತಿದ್ದರು. ಈ ವೇಳೆ ಹುಡುಗರು ನೀರಿನಲ್ಲಿ ಮುಳುಗಿದ್ದರಿಂದ ಅವರನ್ನು ರಕ್ಷಿಸಲೆಂದು ತಾಯಂದಿರು ನೀರಿಗೆ ಧುಮುಕಿರುವ ಸಾಧ್ಯತೆಗಳಿವೆ. ಅಂತಿಮವಾಗಿ ನಾಲ್ವರೂ ನೀರುಪಾಲಾಗಿದ್ದಾರೆ.

ಕೆರೆಯಲ್ಲಿ ಬಿದ್ದು ನೀರುಪಾಲಾದವರಿಗಾಗಿ ಹುಡುಕಾಟ

ಒಂದೇ ಕುಟುಂಬದವರು
ಈ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಕೂಡಲೇ ನೂರಾರು ಮಂದಿ ಸ್ಥಳಕ್ಕೆ ಧಾವಿಸಿದರು. ನೀರುಪಾಲಾದವರನ್ನು ಮೇಲಕ್ಕೆತ್ತಿದ್ದಾಗ ಅವರೆಲ್ಲರೂ ಪ್ರಾಣ ಕಳೆದುಕೊಂಡಿದ್ದರು. ಕುಟುಂಬಿಕರ ಆಕ್ರಂದನ ಮುಗಿಲುಮುಟ್ಟಿದೆ. ಜನವಾಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಕಾಲುವೆಗೆ ಆಟೋ ಪಲ್ಟಿ, 9 ಜನ ನೀರುಪಾಲು, ಮೂವರ ಶವ ಪತ್ತೆ

Exit mobile version