ರಾಯಚೂರು: ನರೇಗಾದಲ್ಲಿ ವ್ಯಾಪಕ ಭ್ರಷ್ಟಾಚಾರ ಕಂಡುಬಂದ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ನಾಲ್ವರು ಪಿಡಿಒಗಳನ್ನು ಅಮಾನತು ಮಾಡಲಾಗಿದೆ. 33 ಗ್ರಾಮ ಪಂಚಾಯತಿಗಳಲ್ಲಿ 150 ಕೋಟಿ ರೂ. ಮೊತ್ತದ ಭ್ರಷ್ಟಾಚಾರ ಸಂಬಂಧ ರಾಜ್ಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ದೂರು ನೀಡಿದ್ದರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತಿ ಸಿಇಒ ಆದೇಶ ಹೊರಡಿಸಿದ್ದಾರೆ.
ಜಾಲಹಳ್ಳಿ ಪಿಡಿಒ ಪತ್ತೆಪ್ಪ ರಾಠೋಡ, ಶಾವಂತಗೇರ ಪಿಡಿಒ ಗುರುಸ್ವಾಮಿ, ಕ್ಯಾದಿಗೇರ ಪಿಡಿಒ ಸಿ.ಬಿ.ಪಾಟೀಲ್, ಗಾಣದಾಳ ಪಿಡಿಒ ಮಲ್ಲಪ್ಪ ಅಮಾನತುಗೊಂಡವರು. ಇಲಾಖೆ ವಿಚಾರಣೆ ಕಾಯ್ದಿರಿಸಿ ನಾಲ್ವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಪಾಂಡ್ವೆ ರಾಹುಲ್ ತುಕಾರಾಮ ಅಮಾನತು ಮಾಡಿದ್ದಾರೆ.
ಇದನ್ನೂ ಓದಿ | Accident Case : ಕಿಟಕಿ ಒರೆಸುವಾಗ ಜಾರಿದ ಕಾಲು; 5ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು
ವಾಹನ ಅಪಹರಿಸಿ 50 ಲಕ್ಷ ರೂ. ದರೋಡೆ, ಇಬ್ಬರ ಮೇಲೆ ಹಲ್ಲೆ
ಮಡಿಕೇರಿ: ವಾಹನವನ್ನು ಅಪಹರಿಸಿ 50 ಲಕ್ಷ ರೂ. ದರೋಡೆ (Robbery Case ) ಮಾಡಿದಲ್ಲದೆ ಇಬ್ಬರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಪ್ರಕರಣ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ದೇವರಪುರದಲ್ಲಿ ಶನಿವಾರ ಮುಂಜಾನೆ 3 ಗಂಟೆಗೆ ವೇಳೆಗೆ ಘಟನೆ ನಡೆದಿದ್ದು. ಕೇರಳ ಮೂಲದ ಗುತ್ತಿಗೆದಾರ ಶಂಜ್ಜಾದ್ ಕೆ ಮತ್ತು ಅಫ್ನು ಎಂಬುವುರ ಹಲ್ಲೆಗೊಳಲಾಗಿದ್ದಾರೆ. ಅವರು ಮೈಸೂರಿನಿಂದ ಕೇರಳಕ್ಕೆ ಹೋಗುತ್ತಿದ್ದ ವೇಳೆಯಲ್ಲಿ ದರೋಡೆಗೆ ಒಳಗಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದರೋಡೆಗೆ ಒಳಗಾದವರು ಕೇರಳದಿಂದ ಚಿನ್ನ ತಂದು ಮೈಸೂರಲ್ಲಿ ಮಾರಿ ಹಣದ ಸಮೇತ ಹಿಂತಿರುಗುತ್ತಿದ್ದರು. ಅವರು ಐಷಾರಾಮಿ ಮಿನಿ ಕೂಪರ್ ಕಾರಿನಲ್ಲಿ ವಾಪಸ್ ಹೋಗುತ್ತಿದ್ದರು. ದೇವರಪುರ ಬಳಿ ಅವರ ಕಾರಿಗೆ ಲಾರಿಯನ್ನು ಅಡ್ಡ ಇರಿಸಿ ನಿಲ್ಲಿಸಿದ್ದಾರೆ. ಬಳಿಕ ಅವರನ್ನು ಬೇರೆ ಕಾರಿಗೆ ಹತ್ತಿಸಿಕೊಂಡು ಅಪಹರಣ ಮಾಡಿದ್ದಾರೆ.
ಇದನ್ನೂ ಓದಿ | Car Accident: ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ನಾಲ್ವರ ದುರ್ಮರಣ
ಬೇರೆ ದರೋಡೆಕೋರರು ಅವರ ಮಿನಿ ಕೂಪರ್ ಕಾರನ್ನೂ ಜತೆಗೆ ತೆಗೆದುಕೊಂಡ ಹೋಗಿದ್ದಾರೆ. ಅರ್ಧದಲ್ಲಿ ತೋಟವೊಂದರ ಬಳಿ ಶಂಜ್ಜಾದ್ ಮತ್ತು ಅಫ್ನು ಬಿಟ್ಟು ದರೋಡೆಕೋರರು ಅಲ್ಲಿಂದ ತೆರಳಿದ್ದಾರೆ. ಅವರು ಆ ಬಳಿಕ ಮುಖ್ಯ ರಸ್ತೆ ಸೇರಿ ಪೊಲೀಸ್ ಠಾಣೆ ತಲುಪಿ ದೂರು ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ