Site icon Vistara News

Tiger Safari : ಸಫಾರಿಯಲ್ಲಿ ಕಂಡವು ನಾಲ್ಕು ಹುಲಿ; ಪ್ರವಾಸಿಗರಿಗೆ ರೋಮಾಂಚನ ತಂದ ಹುಲಿಗಳ ದರ್ಶನ

Man killed in tiger attack in Mysuru after boy dies in leopard attack

ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆಯ ದಮ್ಮನಕಟ್ಟೆ ಬಳಿಯಲ್ಲಿನ ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ (Tiger Safari) ವೇಳೆ ನಾಲ್ಕು ಹುಲಿಗಳು ಕಾಣಿಸಿಕೊಂಡು ಪ್ರವಾಸಿಗರಿಗೆ, ವನ್ಯಜೀವಿ ಪ್ರಿಯರಿಗೆ ರೋಮಾಂಚನಗೊಳಿಸಿವೆ.

ತಾಯಿಯೊಂದಿಗೆ ನಾಲ್ಕು ಹುಲಿ ಮರಿಗಳನ್ನು ಪ್ರವಾಸಿಗರು ಕಣ್ಣುಂಬಿಕೊಂಡಿದ್ದು, ತಮ್ಮ ಕ್ಯಾಮೆರಾಗಳಲ್ಲಿ, ಮೊಬೈಲ್‌ಗಳಲ್ಲಿ ಸೆರೆಹಿಡಿದು ಖುಷಿಪಟ್ಟರು. ಸಂಜೆ ಸಮಯದಲ್ಲಿ ಮರಿಗಳೊಂದಿಗೆ ಹುಲಿಗಳು ದರ್ಶನ ನೀಡಿವೆ. ಈ ವೇಳೆ ಅಲ್ಲಿಯೇ ಇದ್ದ ಛಾಯಾಗ್ರಾಹಕ ಮನೋಜ್ ಗನ್ನ ಅವರು ಹುಲಿಗಳ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಅಲ್ಲದೆ, ವಿಡಿಯೊವನ್ನೂ ಮಾಡಿಕೊಂಡಿದ್ದಾರೆ. ಇದರಲ್ಲಿ ಹುಲಿಗಳು ಘನ ಗಂಭೀರವಾಗಿ ನಡೆಯುತ್ತಿರುವುದು, ಕ್ಯಾಮರಾಗೆ ಆಗಾಗ ಪೋಸ್‌ ಕೊಡುತ್ತಿರುವ ದೃಶ್ಯಗಳೆಲ್ಲವೂ ಸೆರೆಯಾಗಿವೆ. ಕಬಿನಿ ಹಿನ್ನೀರಿನ ಭಾಗ ಇದಾಗಿದ್ದು, ಆಗಾಗ ಹುಲಿಗಳು ದರ್ಶನ ನೀಡುತ್ತಿವೆ.

ಜಿಂಕೆ ಬೇಟೆ
ಜಿಂಕೆಯೊಂದನ್ನು ಬೇಟೆಯಾಡಿ ಮರಿ ಹುಲಿಗಳಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಹುಲಿಗಳು ಕಣ್ಣಿಗೆ ಕಂಡಿವೆ. ಅರಣ್ಯದ ಮರಗಳ ಮರೆಯಿಂದ ಹೊರ ಬರಲು ಮರಿ ಹುಲಿಗಳು ಪ್ರಯಾಸ ಪಡುತ್ತಿರುವುದೂ ಕಂಡು ಬಂತು. ಈ ಹುಲಿಗಳು ಪ್ರವಾಸಿಗರಿಗೆ ಕಳೆದ 15 ದಿನಗಳಿಂದ ಪ್ರತಿದಿನ ದರ್ಶನ ನೀಡುತ್ತಿವೆ.

ಇದನ್ನೂ ಓದಿ | Economy growth | ಭಾರತ ಇನ್ನು 7 ವರ್ಷಗಳಲ್ಲಿ 7 ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಆಗಲಿದೆ: ಸಿಇಒ ಅನಂತ ನಾಗೇಶ್ವರನ್

Exit mobile version