ಕೊಪ್ಪಳ: ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಹೊರವಲಯದಲ್ಲಿ ಭಾರಿ ಮಳೆಗೆ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ನಾಲ್ವರು ಮಹಿಳೆಯರು ಕೊಚ್ಚಿ ಹೋಗಿದ್ದಾರೆ.
ಗಿರಿಜಾ ಮಾಲಿಪಾಟೀಲ್(32), ಭುವನೇಶ್ವರಿ ಪೊಲೀಸ್ ಪಾಟೀಲ್(40), ಪವಿತ್ರಾ ಪೊಲೀಸ್ ಪಾಟೀಲ್(45), ವೀಣಾ ಮಾಲಿಪಾಟೀಲ್(19) ಹಳ್ಳದಲ್ಲಿ ಕೊಚ್ಚಿಕೊಂಡು ಹೋದವರು. ಶನಿವಾರ ಸಂಜೆ ಕೆಲಸಕ್ಕೆ ಹೋಗಿ ಮರಳಿ ಗ್ರಾಮಕ್ಕೆ ಬರುವಾಗ ನೀರಿನ ರಭಸ ಲೆಕ್ಕಿಸದೆ ಹಳ್ಳಕ್ಕೆ ಇಳಿದ ದಾಟಲು ಮಹಿಳೆಯರು ಪ್ರಯತ್ನಿಸಿದ್ದಾರೆ. ಆದರೆ ನೀರಿನ ರಭಸಕ್ಕೆ ಮಹಿಳೆಯರು ಕೊಚ್ಚಿ ಹೋಗಿದ್ದಾರೆ.
ನಾಲ್ವರಲ್ಲಿ ಗಿರಿಜಾ, ಭುವನೇಶ್ವರಿ ಎಂಬುವವರು ಹಳ್ಳಕ್ಕೆ ಬಿದ್ದ ಮೇಲೆ ಕೆಲಹೊತ್ತು ಗಿಡಗಳನ್ನು ಹಿಡಿದುಕೊಂಡು ಮೇಲೇರಲು ಪ್ರಯತ್ನಿಸಿದ್ದಾರೆ. ಆದರೆ ಗ್ರಾಮಸ್ಥರು ರಕ್ಷಿಸಲು ಮುಂದಾದಾಗ ಅವರೂ ಕೊಚ್ಚಿಹೋಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ನಾಪತ್ತೆಯಾದ ಮಹಿಳೆಯರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಸಿಡಿಲು ಬಡಿದು ಆಕಲು ಸಾವು
ಬೆಳಗಾವಿ: ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳ ಗ್ರಾಮದಲ್ಲಿ ಸಿಡಿಲು ಬಡಿದು ಆಕಲು ಮೃತಪಟ್ಟಿದೆ.
ಸಿದ್ದಪ್ಪ ಅಣ್ಣಪ್ಪ ಸೊಗಲದ ಎಂಬುವವರ ಆಕಲು ಮೃತಪಟ್ಟಿದೆ. ನಿತ್ಯ ತೆಂಗಿನ ಮರಕ್ಕೆ ಆಕಲನ್ನು ರೈತ ಕಟ್ಟುತ್ತಿದ್ದ. ಶನಿವಾರ ಸಂಜೆ ತೆಂಗಿನ ಮರಕ್ಕೆ ಸಿಡಿಲು ಬಡಿದು ಹೊತ್ತಿಹುರಿದಿದ್ದು, ಈ ವೇಳೆ ಸಿಡಿಲಿನ ತೀವ್ರತೆಗೆ ಆಕಲು ಕೂಡ ಮೃತಪಟ್ಟಿದೆ.
ಇದನ್ನೂ ಓದಿ | Rain News | ಬೆಳಗಾವಿಯಲ್ಲಿ ಭಾರಿ ಮಳೆ: ಮನೆ ಗೋಡೆ ಕುಸಿದು ತಾಯಿ, ಮಗು ಸ್ಥಳದಲ್ಲೇ ಮೃತ್ಯುವಶ