Site icon Vistara News

Selfie tragedy | ಜಲಪಾತದಲ್ಲಿ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರ ಸಾವು, ಸೆಲ್ಫಿ ವೇಳೆ ದುರಂತ

Lady Death in Kitawada Falls

ಬೆಳಗಾವಿ: ಕರ್ನಾಟಕ -ಮಹಾರಾಷ್ಟ್ರ ಗಡಿಭಾಗದಲ್ಲಿ ಇರುವ ಕಿತವಾಡ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು (drowned in falls) ನಾಲ್ವರು ಯುವತಿಯರು ಮೃತಪಟ್ಟಿದ್ದಾರೆ. ಸೆಲ್ಫಿ ( Selfie tragedy ) ತೆಗೆದುಕೊಳ್ಳುವಾಗ ಈ ದುರಂತ ಸಂಭವಿಸಿದೆ.

ಕಿತವಾಡ ಫಾಲ್ಸ್‌ಗೆ ಬೆಳಗಾವಿಯಿಂದ 40 ಯುವತಿಯರು ಟ್ರಿಪ್‌ಗೆ ತೆರಳಿದ್ದರು. ಅಲ್ಲಿ ಸೆಲ್ಫಿ ತಗೆದುಕೊಳ್ಳುವ ವೇಳೆ ಐವರು ಯುವತಿಯರು ಕಾಲು ಜಾರಿ ಬಿದ್ದಿದ್ದಾರೆ. ಈ ವೇಳೆ ಐವರು ಯುವತಿಯರ ಪೈಕಿ ನಾಲ್ವರು ಮೃತಪಟ್ಟರೆ, ಓರ್ವಳ ಸ್ಥಿತಿ ಗಂಭೀರವಾಗಿದೆ.

ಬೆಳಗಾವಿಯ ಉಜ್ವಲ್ ನಗರ ಆಸೀಯಾ ಮುಜಾವರ್(17), ಅನಗೋಳದ ಕುದ್‌ಶೀಯಾ ಹಾಸ್‌ಂ ಪಟೇಲ್(20), ಝಟ್‌ಪಟ್ ಕಾಲೋನಿಯ ರುಕ್ಕಶಾರ್ ಭಿಸ್ತಿ(20), ತಸ್ಮಿಯಾ(20) ಮೃತಪಟ್ಟ ದುರ್ದೈವಿಗಳು.

ಇದನ್ನೂ ಓದಿ | Youths drowned | ಅಮಾವಾಸ್ಯೆ ಹಿನ್ನೆಲೆಯಲ್ಲಿ ಕಾರು ತೊಳೆಯಲು ಹೋದ ಇಬ್ಬರು ಯುವಕರು ನೀರುಪಾಲು

Exit mobile version