Site icon Vistara News

Fraud Case : ಆಟೋ ಚಾಲಕನ ಕರಾಮತ್ತು; ದುಡ್ಡಿನ ಮೋಸದಾಟ ಬ್ಲಾಗರ್‌ನಿಂದ ಹೊರಬಿತ್ತು!

Fraud By Bengaluru Auto Driver

ಬೆಂಗಳೂರು: ಪ್ರವಾಸೋದ್ಯಮ ಇಲಾಖೆಯು ಅತಿಥಿ ದೇವೋ ಭವ (Atithi Devo Bhava) ಎಂಬ ಟ್ಯಾಗ್‌ ಲೈನ್‌ ಹಾಕಿಕೊಂಡಿದೆ. ಭಾರತವು ಪ್ರಪಂಚದಾದ್ಯಂತ ಜನರಿಗೆ ಸುರಕ್ಷಿತ ಮತ್ತು ಸಾಗತಾರ್ಹ ಸ್ಥಳವಾಗಿದೆ ಎಂಬುದು ಇದರ ಅರ್ಥ. ಆದರೆ ಕೆಲ ಕಿಡಿಗೇಡಿಗಳು ಪ್ರವಾಸಕ್ಕೆ ಬರುವ ವಿದೇಶಿಗರನ್ನು ಯಮಾರಿಸುತ್ತಿರುವ (Fraud Case) ಕೃತ್ಯ ಹೆಚ್ಚಾಗುತ್ತಿದೆ. ಸದ್ಯ ಬಾಂಗ್ಲಾ ದೇಶದಿಂದ ಬಂದಿದ್ದ ವಿದೇಶಿ ಬ್ಲಾಗರ್‌ಗೆ ಆಟೋ ಚಾಲಕನೊಬ್ಬ (Auto Driver) ವಂಚಿಸಿದ್ದಾನೆ.

ಬಾಂಗ್ಲಾದೇಶ ಪ್ರಜೆಗಳು ಬೆಂಗಳೂರು ಅರಮನೆ ನೋಡಲು ಬಂದಿದ್ದರು. ಆಟೋ ಮೂಲಕ ತಮ್ಮ ಪ್ರಯಾಣವನ್ನು ಆರಂಭಿಸಿ ನಿಗದಿತ ಸ್ಥಳಕ್ಕೆ ತಲುಪಿದ್ದರು. ಆಟೋ ಇಳಿದ ವಿದೇಶಿ ಬ್ಲಾಗರ್‌ ಗರಿ ಗರಿ ನೋಟು ಎಣಿಸುವಾಗ ಖತರ್ನಾಕ್‌ ಚಾಲಕನ ಮನಸ್ಸು ಅಡ್ಡದಾರಿ ಹಿಡಿದಿತ್ತು. ಅದಾಗಲೇ ವಿದೇಶಿ ಪ್ರವಾಸಿಗರನ್ನು ವಂಚಿಸಲು ಸಿದ್ದನಾಗಿದ್ದ.

ಪ್ರವಾಸಕ್ಕೆ ಬಂದವರಿಗೆ ಕಣ್ಣುಕಟ್ಟು ಮಾಡಿ ವಂಚನೆ ಮಾಡಿದ್ದಾನೆ. ಮೊದಲಿಗೆ 500 ರೂ. ಪಡೆದ ಚಾಲಕ ಕ್ಷಣಾರ್ಧದಲ್ಲಿ ಅದನ್ನು ಶರ್ಟ್ ತೋಳಿನ ಬಳಿ ಇಟ್ಟುಕೊಂಡಿದ್ದಾನೆ. ಈ ಮೊದಲೇ ಕೈನಲ್ಲಿದ್ದ 100 ಹಣವನ್ನು ಇಟ್ಟುಕೊಂಡು ನೀವೂ ಕೊಟ್ಟಿದ್ದು 100 ರೂ. 500 ರೂ ಅಲ್ಲ ಎಂದು ಹೇಳಿದ್ದಾನೆ. ಇತ್ತ ವಿದೇಶಿಗ 100 ಕೊಟ್ಟಿರಬಹುದು ಎಂದು ತಿಳಿದು ಮತ್ತೆ 500 ರೂ. ನೀಡಿದ್ದಾರೆ.

ಆಟೋ ಚಾಲಕನ ಮೋಸದಾಟ ವಿಡಿಯೊ ಇಲ್ಲಿದೆ ನೋಡಿ

ಬಾಂಗ್ಲ ದೇಶದಿಂದ ಬಂದಿದ್ದ ವ್ಯಕ್ತಿ ಬ್ಲಾಗರ್‌ ಆಗಿದ್ದರಿಂದ ಅವರ ಗಮನ ಬೇರೆಡೆ ಸೆಳೆದು ಹಣ ಸುಲಿಗೆ ಮಾಡಿದ್ದಾನೆ. ಭಾರತದ ಕರೆನ್ಸಿ ಬಗ್ಗೆ ಅಷ್ಟಾಗಿ ಅರಿವಿಲ್ಲದ ವಿದೇಶಿ ಪ್ರಜೆ ಬಳಿ ಸುಲಿಗೆ ಮಾಡಿದ್ದಾನೆ. ಆದರೆ ಈತನ ವಂಚನೆಯಾಟವು ಬ್ಲಾಗರ್‌ನ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಯೂ ಟ್ಯೂಬ್‌ಗೆ ಅಪ್ಲೋಡ್ ಮಾಡಿ ಈ ಆಟೋವನ್ನು ಅವಾಯ್ಡ್ ಮಾಡಿ‌ ಎಂದು ಪೋಸ್ಟ್ ಮಾಡಿದ್ದಾರೆ. ಮೊಹಮ್ಮದ್ ಫಿಜ್ ಎಂಬ ಯೂ ಟ್ಯೂಬ್ ಅಕೌಂಟ್‌ನಲ್ಲಿ ಈ ವಿಡಿಯೊ ಪೋಸ್ಟ್‌ ಆಗಿದೆ.

ಫ್ಲೈಟ್‌ನಲ್ಲಿ ಬಿಡಿ ಸೇದಿದ ಪ್ರಯಾಣಿಕ

ವಿಮಾನದ ವಾಶ್ ರೂಂನಲ್ಲಿ ಪ್ರಯಾಣಿಕನೊಬ್ಬ ಬಿಡಿ ಸೇದಿದ್ದಾನೆ. ಸದ್ಯ ಪ್ರಯಾಣಿಕನ ವಿರುದ್ದ ಬಿಐಎಐ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿ ಆರೋಪಿ ಕರುಣಾಕರನನ್ನು ಬಂಧಿಸಲಾಗಿದೆ. ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕಲ್ಕತ್ತಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version