Site icon Vistara News

Fraud Case : ‌ಸಿಸಿಬಿ ಬಲೆಗೆ ಬಿದ್ದ ಖತರ್ನಾಕ್‌ ನಯ ವಂಚಕ; ಡಿಸಿ, ಜಡ್ಜ್‌ ಹೆಸರು ಬಳಸಿ ಲಕ್ಷ ಲಕ್ಷ ಲೂಟಿ

Fraud Case CCB police arrest fraudster

ಬೆಂಗಳೂರು: ಖತರ್ನಾಕ್‌ ವಂಚಕನೊಬ್ಬ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸಿಎಂ ಜಂಟಿ ಕಾರ್ಯದರ್ಶಿ, ಜಿಲ್ಲಾಧಿಕಾರಿ, ನ್ಯಾಯಾಧೀಶರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಸುರೇಶ್ ಎಂಬಾತನನ್ನು (Fraud Case) ಬಂಧಿಸಿದ್ದಾರೆ.

ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ರಾಮಯ್ಯ ಅವರ ಹೆಸರಿನಲ್ಲಿ ಮಹಿಳಾ ಅಧಿಕಾರಿಯಿಂದ 7 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದ. ಬಾಗಲಕೋಟೆ ಡಿಎಚ್‌ಓ ಡಾ. ಜಯಶ್ರೀ ಅವರಿಗೆ ವರ್ಗಾವಣೆ ಮಾಡಿಸುವುದಾಗಿ ಹೇಳಿ ಹಂತ ಹಂತವಾಗಿ ಹಣ ಪಡೆದಿದ್ದ. ಅಂದಹಾಗೇ ಡಾ.‌ಜಯಶ್ರೀ ಜಾಗಕ್ಕೆ ಮಾಜಿ ಸಚಿವ ಮೇಟಿ ಅಳಿಯ ರಾಜಕುಮಾರ್ ವರ್ಗಾವಣೆಯಾಗಿದ್ದರು. ಇದನ್ನು ತೆರವುಗೊಳಿಸಲು ಜಯಶ್ರೀ ವಿಧಾನಸೌಧಕ್ಕೆ ಅಲೆದಾಡಿ ಮುಖ್ಯಮಂತ್ರಿ ಮತ್ತು ಸಚಿವರಿಗೆ ಮನವಿ ಸಲ್ಲಿಸಿದ್ದರು.

ಇದನ್ನು ಗಮನಿಸಿದ ನಯ ವಂಚಕ ಸುರೇಶ, ಜಯಶ್ರೀ ಲೆಟರ್ ನೋಡಿ ಅದರಲ್ಲಿದ್ದ ಫೋನ್ ನಂಬರ್ ಗಮನಿಸಿದ್ದಾನೆ. ಬಳಿಕ ಜಯಶ್ರೀಗೆ ಕರೆ ಮಾಡಿ ನಾನು ಸಿಎಂ ಜಂಟಿ ಕಾರ್ಯದರ್ಶಿ ರಾಮಯ್ಯ ಮಾತನಾಡೋದು. ನಿಮ್ಮ ಲೆಟರ್ ನೋಡಿದ್ದೇನೆ, ನಾನು ಮಿನಿಸ್ಟರ್ ಬಳಿ ಮಾತನಾಡುತ್ತೇನೆ. ಆದರೆ ಸ್ವಲ್ಪ ಹಣ ಖರ್ಚಾಗುತ್ತೆ ಎಂದು ಸುಮಾರು 7 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದ.

ಇನ್ನೂ ಈ ಖತರ್ನಾಕ್‌ ಸುರೇಶ್ ತಾನೊಬ್ಬ ಜಡ್ಜ್‌ ಎಂದು ಫೋನ್‌ ಮಾಡಿ ಈ ಹಿಂದೆ ವಿಜಯಸಂಕೇಶ್ವರ್‌ ಅವರಿಗೂ ವಂಚನೆಗೆ ಯತ್ನಿಸಿದ್ದ. ದೇವಸ್ಥಾನ ಕಟ್ಟೋದಿದೆ ನಾನು ಹಣ ಹಾಕಿದ್ದೇನೆ, ನೀವು ಸ್ವಲ್ಪ ಸಹಾಯ ಮಾಡಿ ಎಂದು ಹೇಳಿದ್ದ. ಇದಕ್ಕೆ ಸಮ್ಮತಿಸಿದ್ದ ಸಂಕೇಶ್ವರ್ ಹಣ ಕೊಡಲು ಮುಂದಾದಾಗ ಬೇರೆ ಅಕೌಂಟ್ ನಂಬರ್ ನೋಡಿ ನಕಲಿ ಎಂದು ಗೊತ್ತಾಗಿತ್ತು. ಬಳಿಕ ಹುಬ್ಬಳ್ಳಿಯ ಕೇಶವಪುರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿತ್ತು. ಇಷ್ಟೇ ಅಲ್ಲದೆ ಮದ್ದೂರು, ಮಂಡ್ಯದಲ್ಲಿ ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡಿ ತಾನು ಡಿಸಿ ಎಂದೇಳಿ ಹೇಳಿ ಬಿಲ್ ಕೊಡದೆಯೂ ಹೋಗಿದ್ದಾನೆ. ಕೆಲ ತಹಶೀಲ್ದಾರ್‌ಗಳಿಗೆ ಕರೆ ಮಾಡಿ ಕೆಲಸ ಮಾಡಿಸಿಕೊಂಡಿರುವ ಆರೋಪ ಕೂಡ ಇದೆ.

ಇದನ್ನೂ ಓದಿ:Drowned In Water : ಭೀಮಾ ನದಿಯಲ್ಲಿ ಪುಣ್ಯಸ್ನಾನಕ್ಕೆ ಇಳಿದಾಗ ಕೊಚ್ಚಿ ಹೋದ ಯುವತಿ

ಯಾದಗಿರಿಯಲ್ಲೊಂದು ʼಆಡುಜೀವಿತಂʼ ವ್ಯಥೆ; ಕೆಲಸದ ಆಮಿಷ ನೀಡಿ ದುಬೈಗೆ ಕರೆದೊಯ್ದು ಕುರಿ ಕಾಯಲು ಹಚ್ಚಿದರು!

ಯಾದಗಿರಿ: ಹೊರದೇಶದಲ್ಲಿ ಹೆಚ್ಚಿನ ಹಣ ಸಿಗುತ್ತೆ ಅಂತ ಗಲ್ಫ್‌ ದೇಶಗಳಿಗೆ (Gulf Nations) ಕೆಲಸಕ್ಕೆ ಹೋಗಬಯಸುವವರು ಈ ಸ್ಟೋರಿ ಓದಬೇಕು. ಇದು ಇತ್ತೀಚೆಗೆ ಬಂದ ʼಆಡುಜೀವಿತಂʼ ಸಿನಿಮಾ (Adujeevitam Movie) ಕತೆಯಂತೆಯೇ ಇದೆ. ಒಳ್ಳೆಯ ಉದ್ಯೋಗ (Job) ಕೊಡಿಸುತ್ತೇವೆ ಎಂದು ನಂಬಿಸಿ ದುಬೈಗೆ ಕರೆದೊಯ್ದ ಏಜೆಂಟರಿಂದಾಗಿ ಯಾದಗಿರಿಯ (Yadgiri news) ವ್ಯಕ್ತಿಯೊಬ್ಬರು ಮೋಸ (Fraud Case) ಹೋಗಿದ್ದು, ಇದೀಗ ಜೀತದಾಳಿನಂತೆ ದುಬೈಯಲ್ಲಿ (Dubai) ಕುರಿ, ಒಂಟೆ ಕಾಯುವ ಕೆಲಸ ಮಾಡುತ್ತಿದ್ದಾರೆ. ತಮ್ಮನ್ನು ಈ ಸ್ಥಿತಿಯಿಂದ ಪಾರು ಮಾಡಿ ಎಂದು ಸಂಬಂಧಿಸಿದವರಿಗೆ ಅಂಗಲಾಚಿದ್ದಾರೆ.

ಏಜೆಂಟರ ಬಣ್ಣ ಬಣ್ಣದ ಮಾತುಗಳಿಗೆ ಮೋಸ ಹೋಗಿ ಈಗ ಕಣ್ಣೀರು ಹಾಕುತ್ತಿರುವ ವ್ಯಕ್ತಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ರಾಜಾಪುರ ಗ್ರಾಮದ ರಾಜಾಪುರ ಗ್ರಾಮದ ದ್ಯಾಮರಾಯ ಎಂಬವರು. ಒಳ್ಳೆ ಕೆಲಸ ಕೊಡಿಸ್ತೀವಿ ಎಂದು ವೀಸಾ ಮಾಡಿಸಿ ದುಬೈಗೆ ಕಳಿಸಿರುವ ಕಿರಾತಕರು ಅಲ್ಲಿ ಕೊಡಿಸಿದ್ದು ಕುರಿ ಕಾಯುವ, ಒಂಟೆ ಮೇಯಿಸುವ ಕೆಲಸ. ಜೊತೆಗೆ, ಇವರ ಪ್ರಯಾಣ ದಾಖಲೆಗಳನ್ನೂ ಏಜೆಂಟರು ಕಿತ್ತಿಟ್ಟುಕೊಂಡಿದ್ದಾರೆ.

ಏಜೆಂಟ್ ಲಾಲಸಾಬ ಎಂಬಾತ ಇವರನ್ನು ಬಹಳ ಸಂಬಳ ಕೊಡಿಸುತ್ತೇನೆ ಎಂದು ನಂಬಿಸಿ ಕೆಲಸಕ್ಕಾಗಿ ದುಬೈಗೆ ಕರೆದುಕೊಂಡು ಹೋಗಿದ್ದ. ದುಬೈನ ಕಪೀಲ್ ಎಂಬವರ ಬಳಿ ಕೆಲಸಕ್ಕಾಗಿ ಬಿಟ್ಟಿದ್ದಾನೆ. ಕಪೀಲ್‌, ದ್ಯಾಮರಾಯನಿಂದ ಕುರಿ ಮೇಯಿಸಿ, ಒಂಟೆ ಕಾಯಿಸಿದ್ದಾನೆ. ಇಬ್ಬರೂ ದ್ಯಾಮರಾಯನಿಗೆ ದುಡ್ಡು ನೀಡಿಲ್ಲ. ದ್ಯಾಮರಾಯನ ಪಾಸ್‌ಪೋರ್ಟ್‌ ವೀಸಾ ಇತ್ಯಾದಿಗಳನ್ನು ಲಾಲಸಾಬ ಕಿತ್ತಿಟ್ಟುಕೊಂಡಿದ್ದು, ಇದೀಗ ಭಾರತಕ್ಕೆ ಮರಳುತ್ತೇನೆ ಎಂದರೆ ಅವುಗಳನ್ನು ಕೊಡದೆ ಸತಾಯಿಸುತ್ತಿದ್ದಾನೆ.

ಅನಾರೋಗ್ಯದಿಂದ ಬಳಲುತ್ತಿದ್ದೇನೆ ಭಾರತಕ್ಕೆ ತೆರಳ್ತೀನಿ ಅಂದರೂ ವೀಸಾ, ಪಾಸ್‌ಪೋರ್ಟ್ ಕೊಡುತ್ತಿಲ್ಲ ಎಂದು ದ್ಯಾಮರಾಯ ಅಲವತ್ತುಕೊಂಡಿದ್ದಾರೆ. ಸದ್ಯ ದ್ಯಾಮರಾಯ ದುಬೈನ ತಮಾಮ ನಗರದಲ್ಲಿದ್ದಾರೆ. ಕಳೆದ 3 ತಿಂಗಳಿನಿಂದ ದುಬೈನಲ್ಲಿ ದುಡಿಸಿಕೊಂಡು ದುಡ್ಡು ನೀಡದೇ ನಡುನೀರಿನಲ್ಲಿ ಏಜೆಂಟ್ ಲಾಲಸಾಬ ಕೈಬಿಟ್ಟಿದ್ದಾನೆ. ನನ್ನ ಹೆಂಡತಿ-ಮಕ್ಕಳು ಊರಲ್ಲಿದ್ದಾರೆ. ನನಗೆ ಊಟ ಸಹ ದೊರೆಯುತ್ತಿಲ್ಲ ಎಂದು ದ್ಯಾಮರಾಯ ಅತ್ತಿದ್ದಾರೆ.

ದುಬೈನಲ್ಲಿ ಬಹಳ ತೊಂದರೆಯಲ್ಲಿದ್ದೇನೆ. ದಯವಿಟ್ಟು ನನ್ನನ್ನು ಭಾರತಕ್ಕೆ ಕರೆಯಿಸಿಕೊಳ್ಳಿ. 2-3 ಬಾರಿ ಇಂಡಿಯನ್ ಎಂಬೆಸ್ಸಿ ಬಳಿ ಹೋದರೂ ಅಧಿಕಾರಿಗಳು ಕೇರ್ ಮಾಡುತ್ತಿಲ್ಲ. ಭಾರತ ಸರ್ಕಾರ ಸಹಾಯ ಮಾಡಿ ನನ್ನನ್ನು ಕರೆಸಿಕೊಳ್ಳಬೇಕು. ಇಲ್ಲದಿದ್ದರೆ ನಾನು ಏನಾದರೂ ಮಾಡಿಕೊಂಡು ಸಾಯಬೇಕಾಗುತ್ತದೆ ಎಂದು ದ್ಯಾಮರಾಯ ಅಂಗಲಾಚಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version