ಚಿಕ್ಕೋಡಿ: ನಕಲಿ ಆಭರಣಕ್ಕೆ ಅಸಲಿ ಆಭರಣದ ಹಾಲ್ ಮಾರ್ಕ್ ಹಾಕಿ ವಂಚಕರು ಬ್ಯಾಂಕ್‌ನಲ್ಲಿ ಲೋನ್ ಪಡೆದಿರುವ ಘಟನೆ ನಡೆದಿದೆ. ಚಿಕ್ಕೋಡಿಯ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ನ ಸುಮಾರು 10 ಬ್ಯಾಂಕ್‌ಗಳಲ್ಲಿ ನಕಲಿ ಬಂಗಾರವನ್ನು (Fraud Case) ಅಡವಿಟ್ಟು ಸಾಲ ಪಡೆದಿದ್ದಾರೆ.
ಇಲ್ಲಿನ ನಿಪ್ಪಾಣಿ ತಾಲೂಕಿನ ಭೋಜ್ ಗ್ರಾಮದ ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸೈಟಿ ಬ್ಯಾಂಕ್‌ನಲ್ಲಿ ಅಸಲಿ ಚಿನ್ನ ಎಂದು ನಂಬಿಸಿ, 2 ಲಕ್ಷದ 75 ಸಾವಿರ ರೂ. ಗೋಲ್ಡ್ ಲೋನ್ ಪಡೆದಿದ್ದಾರೆ. ಕಿರಾತಕರ ಕರಾಮತ್ತು ತಿಳಿದು ಸದಲಗಾ ಪೊಲೀಸರಿಗೆ ಬ್ಯಾಂಕ್ ಸಿಬ್ಬಂದಿ ದೂರು ನೀಡಿದ್ದರು.
ಬ್ಯಾಂಕ್ ಸಿಬ್ಬಂದಿಯ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರು, ಏಳು ಆರೋಪಿಗಳನ್ನು ಬಂಧಿಸಿದ್ದಾರೆ. ಪಪ್ಪು ಜಾಂಗಿದ್, ಗೌಸ್ಪಾಕ್ ಜಮಾದಾರ, ಸುಹಾಸ್ ಮೊಹಿತೆ, ಅಮೂಲ್ ಪೋತದಾರ ಮತ್ತು ಗಣೇಶ ಘೋಡ್ಕೆ, ಓಂಕಾರ್ ಡಬಾಡೆ, ಚಂದೂ ಚೋರ್ಜ್ ಬಂಧಿತ ಆರೋಪಿಗಳು. ಬಂಧಿತರಿಂದ ಮತ್ತಷ್ಟು ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ | Voter data | ಡಿಲೀಟ್ ಆಗಿದ್ದು 24 ಲಕ್ಷ ಹೆಸರಲ್ಲ, 6 ಲಕ್ಷ ಮಾತ್ರ: ಕಾಂಗ್ರೆಸ್ ಹೇಳೋದೆಲ್ಲ ಸುಳ್ಳು ಎಂದ ಬಿಜೆಪಿ