ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ (Free Bus service) ಅವಕಾಶ ಕಲ್ಪಿಸುವ ಶಕ್ತಿ ಯೋಜನೆಗೆ (Shakthi scheme) ಸಿಕ್ಕಿದ ಭರ್ಜರಿ ರೆಸ್ಪಾನ್ಸ್ ನೋಡಿ ಜನರೇ ಕಂಗಾಲಾಗಿದ್ದಾರೆ. ಯಾಕೆಂದರೆ, ಮಹಿಳೆಯರ ಓಡಾಟ, ಟೆಂಪಲ್ ರನ್ (Temple run) ಧಾವಂತದಿಂದಾಗಿ ಪುರುಷ ಪ್ರಯಾಣಿಕರು, ದೈನಂದಿನ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ಬಸ್ಸಿನಲ್ಲಿ ಜಾಗವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ವ್ಯವಸ್ಥೆಯೇ ಅಸ್ತವ್ಯಸ್ತಗೊಂಡಿದೆ. ಅದರಲ್ಲೂ ಜೂನ್ 18ರ ಭಾನುವಾರವರಂತೂ ರಾಜ್ಯಾದ್ಯಂತ ಅಧ್ವಾನವೇ ನಡೆದಿತ್ತು. ಎಲ್ಲ ಬಸ್ ನಿಲ್ದಾಣಗಳಲ್ಲಿ ಜನ ಸಾಗರ, ಅಯೋಮಯ ಪರಿಸ್ಥಿತಿ, ದೇವಸ್ಥಾನಗಳಲ್ಲಿ ಜನಜಂಗುಳಿ, ಸರ್ಕಾರಿ ಬಸ್‌ನಲ್ಲಿ ದೇವಸ್ಥಾನಗಳಿಗೆ ಹೋದವರು ಮರಳಿ ಬಸ್ ಸಿಗದೆ ಕಂಗಾಲಾಗಿದ್ದು ಎಲ್ಲೆಡೆ ಕಂಡುಬಂತು. ಹಾಗಿದ್ದರೆ, ಜೂನ್ 18ರ ಭಾನುವಾರ ರಾಜ್ಯಾದ್ಯಂತ ಓಡಾಟ ನಡೆಸಿದ ಮಹಿಳೆಯರೆಷ್ಟು? ಇಲ್ಲಿದೆ ಪೂರ್ಣ ಮಾಹಿತಿ.
51,48,938 ಮಹಿಳೆಯರಿಂದ ಫ್ರೀ ಬಸ್ ಸೌಲಭ್ಯ ಬಳಕೆ
(ಜೂನ್ 17ರ ಮಧ್ಯರಾತ್ರಿಯಿಂದ ಜೂನ್ 18ರ ಮಧ್ಯರಾತ್ರಿ 12 ಗಂಟೆಯವರೆಗೆ)
-ಉಚಿತ ಬಸ್ ಸೇವೆಯನ್ನು ಬಳಸಿಕೊಂಡ ಮಹಿಳೆಯರ ಒಟ್ಟು ಸಂಖ್ಯೆ 51,48,938
– ಸರ್ಕಾರಕ್ಕೆ ತಗುಲಿದ ಒಟ್ಟು ಖರ್ಚು- 13,99,98,299 ರೂ.
ಕೆಎಸ್ಸಾರ್ಟಿಸಿ: 15,43,967 ಪ್ರಯಾಣಿಕರು, 5,63,82,497 ರೂ. ಖರ್ಚು
ಬಿಎಂಟಿಸಿ: 14,91,787 ಪ್ರಯಾಣಿಕರು, 2,01,07,365 ರೂ. ಖರ್ಚು
ವಾಯುವ್ಯ ಸಾರಿಗೆ: 13,88,585 ಪ್ರಯಾಣಿಕರು, 4,00,88,480 ರೂ. ಖರ್ಚು
ಕಲ್ಯಾಣ ಕರ್ನಾಟಕ ಸಾರಿಗೆ: 7,24,599 ಪ್ರಯಾಣಿಕರು, 2,34,19,957 ರೂ. ಖರ್ಚು
ಹಾಗಿದ್ದರೆ ಇದು ದಾಖಲೆ ಓಡಾಟವಾ?
ನಿಜವೆಂದರೆ, ಜೂನ್ 18ರಂದು ಭಾರಿ ದೊಡ್ಡ ಪ್ರಮಾಣದ ಓಡಾಟ ಎಂಬಂತೆ ಕಂಡುಬಂದ ಮಹಿಳೆಯರ ಓಡಾಟ ದಾಖಲೆಯೇನೂ ಅಲ್ಲ. ಭಾನುವಾರ ಓಡಾಡಿದ ಮಹಿಳೆಯರ ಒಟ್ಟು ಸಂಖ್ಯೆ 51,48,938! ನಿಜವೆಂದರೆ, ಕಳೆದ ಶುಕ್ರವಾರ (ಜೂನ್ 16)ದಂದು 55,09,770 ಮಹಿಳೆಯರು ಓಡಾಡಿದ್ದರು. ಸರ್ಕಾರಕ್ಕೆ ತಗುಲಿದ ವೆಚ್ಚಕ್ಕೆ ಹೋಲಿಸಿದರೆ ಇದೊಂದು ದಾಖಲೆಯಾಗಿದೆ.
ಹಾಗಿದ್ದರೆ ಕಳೆದ ಜೂನ್ 11ರಿಂದ ಇಲ್ಲಿವರೆಗೆ ಹೇಗಿತ್ತು?
ಶಕ್ತಿ ಯೋಜನೆ ಆರಂಭಗೊಂಡಿದ್ದು ಜೂನ್ 11ರಂದು. ಅಂದು ಮಧ್ಯಾಹ್ನ 1 ಗಂಟೆಯಿಂದಲೇ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಓಡಾಡಲು ಅವಕಾಶ ಕಲ್ಪಿಸಲಾಗಿತ್ತು. ಅಂದಿನಿಂದಲೇ ಭರ್ಜರಿ ರೆಸ್ಪಾನ್ಸ್ ಇದ್ದು, ಅದು ಮುಂದುವರಿದಿದೆ.
ಜೂನ್ 11ರಿಂದ 19ರವರೆಗೆ ಸಂಚಾರ ನಡೆಸಿದ ಒಟ್ಟು ಮಹಿಳೆಯರು: 3,63,58,634
ಇವರ ಓಡಾಟಕ್ಕಾಗಿ ಸರ್ಕಾರಕ್ಕೆ ತಗುಲಿದ ಒಟ್ಟು ವೆಚ್ಚ: 83,77,67,720 ಕೋಟಿ ರೂ.
ಜೂನ್ 11, ಭಾನುವಾರ
ಪ್ರಯಾಣಿಕರ ಸಂಖ್ಯೆ: 5,71,023, ಪ್ರಯಾಣ ವೆಚ್ಚ: 1,40,22,878 ರೂ
ಜೂನ್ 12, ಸೋಮವಾರ
ಪ್ರಯಾಣಿಕರ ಸಂಖ್ಯೆ: 41,34,726, ಪ್ರಯಾಣ ವೆಚ್ಚ: 8,83,53,434 ರೂ.
ಜೂನ್ 13, ಮಂಗಳವಾರ
ಪ್ರಯಾಣಿಕರ ಸಂಖ್ಯೆ: 51,52,769, ಪ್ರಯಾಣ ವೆಚ್ಚ: 10,82,02,191 ರೂ
ಜೂನ್ 14, ಬುಧವಾರ
ಪ್ರಯಾಣಿಕರ ಸಂಖ್ಯೆ: 50,17,174, ಪ್ರಯಾಣ ವೆಚ್ಚ: 11,51,08,324 ರೂ
ಜೂನ್ 15, ಗುರುವಾರ
ಪ್ರಯಾಣಿಕರ ಸಂಖ್ಯೆ: 54,05,629, ಪ್ರಯಾಣ ವೆಚ್ಚ: 12,37,89,585 ರೂ.
ಜೂನ್ 16, ಶುಕ್ರವಾರ
ಪ್ರಯಾಣಿಕರ ಸಂಖ್ಯೆ: 55,09,770, ಪ್ರಯಾಣ ವೆಚ್ಚ: 12,45,19,265 ರೂ
ಜೂನ್ 17, ಶನಿವಾರ
ಪ್ರಯಾಣಿಕರ ಸಂಖ್ಯೆ: 54,30,150, ಪ್ರಯಾಣ ವೆಚ್ಚ: 12,88,81,618 ರೂ
ಜೂನ್ 18, ಭಾನುವಾರ
ಪ್ರಯಾಣಿಕರ ಸಂಖ್ಯೆ; 51,48,938, ಪ್ರಯಾಣ ವೆಚ್ಚ: 13,99,98,299 ರೂ.
ಜೂನ್ 11ರಿಂದ ಇದುವರೆಗೆ
ಪ್ರಯಾಣಿಕರ ಸಂಖ್ಯೆ: 3,63,58,634, ಪ್ರಯಾಣ ವೆಚ್ಚ: 83,77,67,720
ಇದನ್ನೂ ಓದಿ: Free Bus service : ನಮ್ ಹೆಂಡ್ರಿಗೆ ನಾವಿಲ್ವಾ? ಸಿದ್ದರಾಮಯ್ಯ ಏನ್ ಫ್ರೀ ಕೊಡೋದು? ನೋಡಲೇಬೇಕಾದ ವಿಡಿಯೊಗಳಿವು!