Site icon Vistara News

Free Bus Service : ಸರ್ಕಾರಿ ಬಸ್‌ನಲ್ಲಿ ಮಹಿಳೆಯರ ಅಬ್ಬರ, ರಷ್‌: ಸಾರಿಗೆ ಸಚಿವರು ಏನು ಹೇಳ್ತಾರೆ?

Ramalinga reddy minister

#image_title

ಬೆಂಗಳೂರು: ರಾಜ್ಯ ಸರ್ಕಾರದ ಉಚಿತ ಬಸ್‌ ಪ್ರಯಾಣದ (Free bus service) ಶಕ್ತಿ ಯೋಜನೆ (Shakthi scheme) ಭರ್ಜರಿ ಯಶಸ್ಸು ಕಂಡಿದೆ. ಮಹಿಳೆಯರು ಈ ಯೋಜನೆಯನ್ನು ಭಾರಿ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದು, ಸರ್ಕಾರಿ ಬಸ್‌ಗಳೆಲ್ಲ ತುಂಬಿ ತುಳುಕುತ್ತಿವೆ. ಹೀಗೇ ಆದರೆ ಮುಂದೇನು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಪ್ರಶ್ನೆಗೆ ಸಾರಿಗೆ ಸಚಿವರಾಗಿರುವ ರಾಮಲಿಂಗಾ ರೆಡ್ಡಿ (Ramalinga Reddy) ಅವರು ಉತ್ತರ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ನಿಜ. ಇದು ಆರಂಭ ಅಲ್ವಾ? ಜನರು ಪುಣ್ಯ ಕ್ಷೇತ್ರಗಳಿಗೆ ಹೋಗುತ್ತಿರುವುದರಿಂದ ರಷ್‌ ಆಗುತ್ತಿದೆ. ಒಂದು ಸಲ ಹೋಗಿ ಬಂದ ಮೇಲೆ ಜನ ಮತ್ತೆ ಹೋಗುವುದಿಲ್ಲ. ಹೀಗಾಗಿ ಸ್ವಲ್ಪ ದಿನ ಕಳೆದ ಮೇಲೆ ಈ ರೀತಿ ಇರುವುದಿಲ್ಲ. ಒಂದು ತಿಂಗಳು ನೋಡುತ್ತೇವೆ. ಸತತವಾಗಿ ಜನ ಹೆಚ್ಚಾಗಿದ್ದಾರೆ ಅನ್ನಿಸುವ ಕಡೆ ಬಸ್‌ಗಳ ಹೆಚ್ಚಿಸುವ ಕೆಲಸ ಮಾಡುತ್ತೇವೆʼʼ ಎಂದು ಹೇಳಿದರು.

ತಾಳ್ಮೆಯಿಂದ ಓಡಾಡಿದರೆ ಏನೂ ತೊಂದರೆ ಆಗಲ್ಲ

ಮಹಿಳೆಯರ ಸಂಖ್ಯೆಯೇ ಹೆಚ್ಚಿದ್ದರಿಂದ ಕೆಲವು ಕಡೆ ಅವಾಂತರಗಳು ಆಗಿರುವುದು ನಿಜ. ರಷ್‌ನಲ್ಲಿ ತಳ್ಳಾಡಿ, ಎಳೆದಾಡಿದ ಹಿನ್ನೆಲೆಯಲ್ಲಿ ಒಂದು ಕಡೆ ಡೋರೇ ಕಿತ್ತು ಬಂದಿದೆ. ಒಂದೆ ಸಲಕ್ಕೆ ಎಲ್ಲರೂ ಹೋಗಬೇಕು ಅಂದಾಗ ಹೀಗೆ ಆಗುತ್ತದೆ. ಎಲ್ಲರೂ ಒಂದೇ ಸಲ ಹೋಗೊದಕ್ಕಿಂದ ಜನ ತಾಳ್ಮೆಯಿಂದ ಪ್ಲಾನ್ ಮಾಡಿ ಓಡಾಡಬೇಕು ಎಂದು ಹೇಳಿದರು ರಾಮಲಿಂಗಾ ರೆಡ್ಡಿ.

ʻʻಪುರುಷರಿಗೆ ಶೇಕಡಾ 50 ಸೀಟು ಮೀಸಲಿಟ್ಟರೂ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಒತ್ತಡ ಉಂಟಾಗಿದೆ. ಆರಂಭ ಆಗಿರುವ ಹಿನ್ನೆಲೆಯಲ್ಲಿ ಸ್ವಲ್ಪ ಗೊಂದಲವಿದೆ. ಎಲ್ಲವೂ ಕೂಡ ಬಗೆಹರಿಯುತ್ತದೆ. ಈ ಸಂಬಂಧ ನಮ್ಮ ಅಧಿಕಾರಿಗಳ ಜೊತೆ ಮಾತನಾಡುತ್ತೇನೆʼʼ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಅಕ್ಕಿ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜಕೀಯ

ʻʻನಾವು ಕೇಂದ್ರ ಸರ್ಕಾರದಿಂದ ಅಕ್ಕಿ ಕೇಳಿದ್ದು ಪುಗ್ಸಟ್ಟೆ ಕೊಡಿ ಅಂತಲ್ಲ. ಕೇಂದ್ರ ಸರ್ಕಾರಕ್ಕೆ ಹಣ ಕೊಟ್ಟೆ ತೆಗೆದುಕೊಳ್ಳುತ್ತಿದ್ದೆವು. ಆದರೆ, ಕೇಂದ್ರ ಸರ್ಕಾರ ಅಕ್ಕಿ ಕೊಡದೇ ರಾಜಕೀಯ ಮಾಡ್ತಿದೆ. ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿತ್ತು. ಆದರೆ, ಅವು ಬೇಜವಾಬ್ದಾರಿ ಹೇಳಿಕೆಗಳನ್ನ ಕೊಡುತ್ತಿದೆʼʼ ಎಂದು ಹೇಳಿದರು ರಾಮಲಿಂಗಾ ರೆಡ್ಡಿ.

ʻʻಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಏಳು ಕೆಜಿ ಅಕ್ಕಿ ಕೊಡುತ್ತಿದ್ದೆವು. ಬಿಜೆಪಿ ಸರ್ಕಾರ ಬಂದಾಗ 4 ಕೆಜಿಗೆ ಇಳಿಸಿದರು. ಅವರಿಗೆ ಜನರ ಬಗ್ಗೆ ಕಾಳಜಿ ಎಷ್ಟಿದೆ ಅಲ್ಲೇ ಗೊತ್ತಾಗುತ್ತದೆʼʼ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಮಕ್ಕಳಿಗೆ ಒಳ್ಳೆಯ ಪಾಠ ಹೇಳಿಕೊಡಬೇಕು

ʻʻನಮ್ಮ ರಾಜ್ಯದಲ್ಲಿ ನುರಿತ ಶಿಕ್ಷಣ ತಜ್ಞರ ಇದ್ದಾರೆ. ಅಂಥವರು ಸೂಚಿಸುವ ಪಾಠ ಪಠ್ಯದಲ್ಲಿ ಬರಬೇಕು. ಆದರೆ ಬಿಜೆಪಿ ಸರ್ಕಾರ ರೋಹಿತ್ ಚಕ್ರತೀರ್ಥ, ಚಕ್ರವರ್ತಿ ಸೂಲಿಬೆಲೆ ಮೊದಲಾದವರ ಪಾಠಗಳನ್ನು ಸೇರಿಸಿದೆ. ಮಕ್ಕಳಿಗೆ ಅದು ಸರಿಯಾಗಿರಲಿಲ್ಲ. ಆದ್ದರಿಂದ ಅವೆಲ್ಲವನ್ನೂ ತೆಗೆದಿದ್ದು ಸರಿ ಇದೆʼʼ ಎಂದು ರಾಮಲಿಂಗಾ ರೆಡ್ಡಿ ಸಮರ್ಥಿಸಿದರು.

ಇದನ್ನೂ ಓದಿ : Free Electricity: ಗೃಹಜ್ಯೋತಿ ಅರ್ಜಿ ಸಲ್ಲಿಕೆ ಅವಾಂತರ; ಪೋರ್ಟಲ್‌ ಓಪನ್‌ ಆಗದೆ ಪರದಾಟ

Exit mobile version