ಬೆಂಗಳೂರು: ಕಾಂಗ್ರೆಸ್ ಸರ್ಕಾರದ (Congress Government) ಮಹತ್ವಾಕಾಂಕ್ಷಿ, ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (Free Bus service) ಅವಕಾಶ ನೀಡುವ ಶಕ್ತಿ ಯೋಜನೆ (Shakti scheme) ಬಗ್ಗೆ ಪಾಸಿಟಿವ್ ಆದ ಅಭಿಪ್ರಾಯ ಎಷ್ಟಿದೆಯೋ, ನೆಗೆಟಿವ್ ಕೂಡಾ ಅಷ್ಟೇ ಇದೆ. ಈ ಯೋಜನೆಯಿಂದಾಗಿ ಮಹಿಳೆಯರು ಆಟೋ ಹತ್ತುವುದಿಲ್ಲ ಎಂದು ಆಟೋದವರು, ಮಹಿಳೆಯರ ದಟ್ಟಣೆಯಿಂದ ನಮಗೆ ಬಸ್ ಹತ್ತಲು ಆಗುತ್ತಿಲ್ಲ ಎಂದು ಮಕ್ಕಳು ಮತ್ತು ಪುರುಷರು ಸಿಟ್ಟಾಗಿದ್ದಾರೆ. ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದ್ದ ಈ ವಿಷಯ ಈಗ ಹೈಕೋರ್ಟ್ (Karnataka Highcourt) ಕಟಕಟೆ ಏರಿದೆ.
‘ಶಕ್ತಿ ಯೋಜನೆ’ಯು ಅವ್ಯವಸ್ಥೆಯಿಂದ ಕೂಡಿದ್ದು, ಮಕ್ಕಳು-ಹಿರಿಯ ನಾಗರಿಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಹಾಗೂ ರಾಜ್ಯದ ಆರ್ಥಿಕತೆಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ ಎಂದು ಆಕ್ಷೇಪಿಸಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.
ಕಾನೂನು ವಿದ್ಯಾರ್ಥಿಗಳೇ ಅರ್ಜಿದಾರರು
ರಾಜ್ಯದ ವಿವಿಧ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಶ್ವಿನಿ ಶಂಕರ್ ಭಟ್, ನೇಹಾ ವೆಂಕಟೇಶ್ ಮತ್ತು ಯಶಿಕಾ ಸರವಣನ್ ಮತ್ತಿತರರು ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ), ವಾಯುವ್ಯ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯುಕೆಆರ್‌ಟಿಸಿ), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವನ್ನು (ಕೆಕೆಆರ್‌ಟಿಸಿ) ಪ್ರತಿವಾದಿ ಮಾಡಲಾಗಿದೆ. ಹೈಕೋರ್ಟ್‌ನಲ್ಲಿ ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಾಗಿದೆ.
ವಿದ್ಯಾರ್ಥಿಗಳು ಪಟ್ಟಿ ಮಾಡಿದ ಸಮಸ್ಯೆಗಳೇನು?
- ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಿದ ಶಕ್ತಿ ಯೋಜನೆಯಿಂದ ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗಿದೆ. ಇದರಿಂದ ಅವ್ಯವಸ್ಥೆ ಹಾಗೂ ಗದ್ದಲದ ಪರಿಸ್ಥಿತಿ ನಿರ್ಮಾಣವಾಗಿದೆ.
- ಪ್ರಯಾಣಿಕರು ಸಹ ಅಶಿಸ್ತಿನ ನಡವಳಿಕೆ ತೋರುತ್ತಿದ್ದಾರೆ. ಬಸ್‌ಗಳಲ್ಲಿ ಸೀಟಿಗಾಗಿ ಗಲಾಟೆ, ಹೊಡೆದಾಟ ನಡೆದು ಅಹಿತಕರ ಘಟನೆಗಳು ವರದಿಯಾಗಿವೆ.
- ಹಿರಿಯ ನಾಗರಿಕರು, ಮಕ್ಕಳು ಬಸ್‌ಗಳಲ್ಲಿ ಹತ್ತಲು ಆಗುತ್ತಿಲ್ಲ. ಇದರಿಂದ ನಿಗದಿತ ಸಮಯಕ್ಕೆ ವಿದ್ಯಾರ್ಥಿಗಳು ಶಾಲಾ-ಕಾಲೇಜು ತಲುಪಲು ಆಗುತ್ತಿಲ್ಲ.
- ಬಸ್ ನಿಲ್ದಾಣ ಮತ್ತು ಸರ್ಕಾರಿ ಬಸ್‌ಗಳು ಯುದ್ಧ ಭೂಮಿ, ಮೀನು ಮಾರುಕಟ್ಟೆ ಆಗಿವೆ.
- ಉಚಿತ ಪ್ರಯಾಣವು ಮಹಿಳೆಯರಿಗೆ ಪ್ರಯೋಜನಕ್ಕಿಂತ ಹೆಚ್ಚಿನ ಹಾನಿ ಉಂಟು ಮಾಡುತ್ತಿದೆ.
- ಶಕ್ತಿ ಯೋಜನೆ ಜಾರಿಯಾದ ದಿನದಿಂದ ಸರ್ಕಾರಿ ಬಸ್‌ಗಳಲ್ಲಿ ಮೂರು ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದರಿಂದ ವಾರಕ್ಕೆ 100 ಕೋಟಿ ರೂಪಾಯಿ ತೆರಿಗೆದಾರರ ಹಣ ಸರ್ಕಾರಕ್ಕೆ ನಷ್ಟವಾಗುತ್ತಿದೆ. ಈ ಯೋಜನೆಗೆ ವಾರ್ಷಿಕ 3,200ರಿಂದ 3,400 ಕೋಟಿ ರೂಪಾಯಿ ವೆಚ್ಚವಾಗಬಹುದು.
ಇದನ್ನೂ ಓದಿ : Shakti Scheme : ಸಾರಿಗೆಗೆ ಶಕ್ತಿ ಬರೆ! ಸಂಬಳ ಕೊಡೋಕೂ ದುಡ್ಡಿಲ್ಲ, ಜೂನ್ ಬಾಕಿ ಕೊಟ್ಟಿಲ್ಲ!
ವಿದ್ಯಾರ್ಥಿಗಳು ಸೂಚಿಸಿದ ಬದಲಾವಣೆಗಳೇನು?
- ಮಹಿಳೆಯರ ದಟ್ಟಣೆ ಮತ್ತು ಅತ್ಯುತ್ಸಾಹದಿಂದ ಬೇರೆಯವರಿಗೆ ಬಸ್ ಹತ್ತಲು ಆಗುತ್ತಿಲ್ಲ. ಆದ್ದರಿಂದ, ಬಸ್ ಹತ್ತುವಾಗ ಸರತಿ ಸಾಲು ವ್ಯವಸ್ಥೆ ಮಾಡಬೇಕು.
- ಕಿಟಕಿ ಮತ್ತು ಚಾಲಕ ಸೀಟುಗಳ ಮೂಲಕ ಬಸ್‌ಗಳನ್ನು ಹತ್ತುವುದನ್ನು ತಡೆಯಬೇಕು.
- ಶಾಲಾ ಮಕ್ಕಳು ಹಿರಿಯ ನಾಗರಿಕರಿಗೆ ಬಸ್ ಹತ್ತಿ-ಇಳಿಯಲು ಸೂಕ್ತ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು.
- ಟಿಕೆಟ್ ಖರೀದಿಸಿ ಪ್ರಯಾಣ ಮಾಡುವವರಿಗೆ ಶೇ.50ರಷ್ಟು ಸೀಟುಗಳಿಗೆ ಮೀಸಲಿಡಬೇಕು.
- ಶಾಲಾ ಮಕ್ಕಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಬೇಕು.
- ದೂರದ ಊರಿಗಳಿಗೆ ತೆರಳುವ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಬಸ್‌ಗಳಲ್ಲಿ ಹತ್ತಲು ಮೊದಲು ಅವಕಾಶ ಮಾಡಿಕೊಡಬೇಕು.
- ದೂರದ ಊರುಗಳಿಗೆ ನಿಂತು ಪ್ರಯಾಣಿಸುವುದನ್ನು ನಿಷೇಧಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು.
ಬೆಂಗಳೂರು: ಕಾಂಗ್ರೆಸ್ ಸರ್ಕಾರದ (Congress Government) ಮಹತ್ವಾಕಾಂಕ್ಷಿ, ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ (Free Bus service) ಅವಕಾಶ ನೀಡುವ ಶಕ್ತಿ ಯೋಜನೆ (Shakti scheme) ಬಗ್ಗೆ ಪಾಸಿಟಿವ್ ಆದ ಅಭಿಪ್ರಾಯ ಎಷ್ಟಿದೆಯೋ, ನೆಗೆಟಿವ್ ಕೂಡಾ ಅಷ್ಟೇ ಇದೆ. ಈ ಯೋಜನೆಯಿಂದಾಗಿ ಮಹಿಳೆಯರು ಆಟೋ ಹತ್ತುವುದಿಲ್ಲ ಎಂದು ಆಟೋದವರು, ಮಹಿಳೆಯರ ದಟ್ಟಣೆಯಿಂದ ನಮಗೆ ಬಸ್ ಹತ್ತಲು ಆಗುತ್ತಿಲ್ಲ ಎಂದು ಮಕ್ಕಳು ಮತ್ತು ಪುರುಷರು ಸಿಟ್ಟಾಗಿದ್ದಾರೆ. ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದ್ದ ಈ ವಿಷಯ ಈಗ ಹೈಕೋರ್ಟ್ (Karnataka Highcourt) ಕಟಕಟೆ ಏರಿದೆ.