Site icon Vistara News

Gruha Jyothi Scheme : 1.43 ಕೋಟಿ ಜನರಿಗೆ ಮಾತ್ರ ಈ ಬಾರಿ ಫ್ರೀ ವಿದ್ಯುತ್;‌ ಉಳಿದವರಿಗಿಲ್ಲ!

KJ George and gruha jyothi

ಬೆಂಗಳೂರು: ಗೃಹ ಜ್ಯೋತಿಯು (Gruha Jyothi Scheme) ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಸರ್ಕಾರ ಬರುವ ಮೊದಲೇ ಗ್ಯಾರಂಟಿ (Congress Guarantee) ಕೊಡಲಾಗಿತ್ತು. ಅದರಂತೆ ಇದೀಗ ನಾವು ಇವುಗಳನ್ನು ಜಾರಿ ಮಾಡುತ್ತಿದ್ದೇವೆ. ಈಗ 1.43 ಕೋಟಿ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಹರಿಗೆ ಉಚಿತ ವಿದ್ಯುತ್‌ (Free electricity) ಸಿಗಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ (Power Minister KJ George) ಹೇಳಿದ್ದಾರೆ.

ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi) ಬರೀ ಭಾರತ್ ಜೋಡೋ ಯಾತ್ರೆ ಮಾಡಲಿಲ್ಲ.‌ ಅದರ ಜೊತೆಗೆ ಜನರ ಸಂಕಷ್ಟ ಕೇಳಿದರು. ಜನ ಜಿಎಸ್‌ಟಿ, ಡಿಮಾನಿಟೈಸೇಶನ್, ಬೆಲೆ ಏರಿಕೆಯಿಂದ ಬೇಸತ್ತು ಹೋಗಿದ್ದಾರೆ. ಬೆಲೆ ಏರಿಕೆ ಆದರೂ ಸಂಬಳ ಹೆಚ್ಚಾಗಲಿಲ್ಲ. ಇದರಿಂದ ಮಹಿಳೆಯರಿಗೆ ಹೆಚ್ಚು ಹೊರೆಯಾಗಿತ್ತು. ಅದಕ್ಕಾಗಿಯೇ ಗ್ಯಾರಂಟಿ ಯೋಜನೆ ಜಾರಿ ತರಲಾಗಿದೆ. ಹೀಗಾಗಿ ಮನೆಯ ಹೊರೆ ತಗ್ಗಿಸಲು ಉಚಿತ ವಿದ್ಯುತ್‌ ನೀಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Weather Report : ಗಳಿಗೆಗೊಂದು ವಾತಾವರಣ; ಮಳೆ ಜತೆಗೆ ಗುಡುಗು, ಸಿಡಿಲು, ಬೀಸಲಿದೆ ಬಿರುಗಾಳಿ

ಆಗಸ್ಟ್ 05 ರಂದು ಸಿಎಂ ಚಾಲನೆ

ಈಗ ಜುಲೈ ತಿಂಗಳಿನಿಂದ ಯೋಜನೆ ಜಾರಿಗೆ ಬರುತ್ತಲಿದ್ದು, ಆಗಸ್ಟ್ 05 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರಗಿ ಜಿಲ್ಲೆಯಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ ಕೊಡಲಿದ್ದಾರೆ. ಅರ್ಹತೆ ಹೊಂದಿದ್ದ ಪ್ರತಿಯೊಬ್ಬರೂ ಫಲಾನುಭವಿಯಾಗಲಿದ್ದಾರೆ. ಒಟ್ಟಾರೆ ಈ ಜುಲೈ 27ರೊಳಗೆ ಅರ್ಜಿ ಸಲ್ಲಿಸಿದವರಿಗೆ ಈ ಬಾರಿಯ ವಿದ್ಯುತ್‌ ಉಚಿತವಾಗಲಿದೆ ಎಂದು ತಿಳಿಸಿದರು.

ಜ್ಯೋತಿ ಯೋಜನೆಗಳು ವಿಲೀನ

ಈಗಾಗಲೇ ಜಾರಿಯಲ್ಲಿದ್ದ ಭಾಗ್ಯ ಜ್ಯೋತಿ , ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಗಳನ್ನು ಗೃಹ ಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಲಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

ಯಾರ ಅಪ್ಲಿಕೇಶನ್‌ ರಿಜೆಕ್ಟ್?

‌200 ಯುನಿಟ್‌ಗಿಂತ ಹೆಚ್ಚು ಬಳಕೆ ಮಾಡಿದ್ದವರು ಗೃಹಜ್ಯೋತಿಗೆ ಅರ್ಜಿ ಸಲ್ಲಿಸಿದರೆ ಅಂಥವರ ಅರ್ಜಿಯು ತಿರಸ್ಕೃತವಾಗಲಿದೆ. 200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಸುತ್ತಿರುವ ಅರ್ಹತೆಯ ಮಿತಿಯಲ್ಲಿರುವ ಎಲ್ಲ ಫಲಾನುಭವಿಗಳಿಗೂ ಉಚಿತ ವಿದ್ಯುತ್ ಸಿಗಲಿದೆ. ಜುಲೈ 27ರೊಳಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿಗಳಿಗೆ ಆಗಸ್ಟ್‌ನಲ್ಲಿ ಶೂನ್ಯ ಬಿಲ್ ಬರಲಿದೆ. ನಂತರ ಯೋಜನೆ ಅರ್ಜಿಗಳನ್ನು ಸಲ್ಲಿಸಿದವರು ಮುಂದಿನ ತಿಂಗಳಲ್ಲಿ ಯೋಜನೆಯ ಲಾಭವನ್ನು ಪಡೆಯಲಿದ್ದಾರೆ. ಗೃಹ ಜ್ಯೋತಿ ಯೋಜನೆಯಲ್ಲಿ ಒಂದು ವರ್ಷದ ಬಳಕೆಯ ತಿಂಗಳ ಸರಾಸರಿಯನ್ನು ತೆಗೆದುಕೊಳ್ಳಲಾಗುತ್ತದೆ. ಜತೆಗೆ ಶೇ. 10ರಷ್ಟು ಹೆಚ್ಚುವರಿ ಯುನಿಟ್‌ಗಳು ಉಚಿತ ಸಿಗಲಿದೆ. ಇದೂ ಸಹ 200 ಯುನಿಟ್‌ ಒಳಗೆ ಬರಬೇಕು ಎಂದು ಸಚಿವ ಜಾರ್ಜ್‌ ಹೇಳಿದರು.

ಇದನ್ನೂ ಓದಿ: Karnataka Politics : ಬೊಮ್ಮಾಯಿಗಿಲ್ಲ ವಿಪಕ್ಷ ನಾಯಕ ಸ್ಥಾನ? ಒಂಟಿ ಮಾಡಿದ ಜಂಟಿ ಪ್ರೆಸ್‌ಮೀಟ್‌!

2.14 ಕೋಟಿ ಮನೆಗಳಲ್ಲಿ ‌200 ಯುನಿಟ್ ಬಳಕೆ

ರಾಜ್ಯದಲ್ಲಿ ಒಟ್ಟಾರೆಯಾಗಿ 2.16 ಕೋಟಿ ಆರ್‌ಆರ್ ನೋಂದಣಿ ಇದೆ. ಇವರಲ್ಲಿ 2.14 ಕೋಟಿ ಮನೆಗಳಲ್ಲಿ ‌200 ಯುನಿಟ್ ಕೆಳಗೆ ಬಳಸುತ್ತಿದ್ದಾರೆ. ಕೆಲವೊಬ್ಬರು ಸ್ವಯಂ ಪ್ರೇರಿತರಾಗಿ ಯೋಜನೆಯನ್ನು ಬಳಸುತ್ತಿಲ್ಲ. ಇನ್ನು ಕೆಲವೊಬ್ಬರಿಗೆ ಹಲವು ಮನೆಗಳು ಇರುವುದರಿಂದ ಪಡೆಯುತ್ತಿಲ್ಲ. ಜತೆಗೆ ಡೆಡ್‌ಲೈನ್ ಇಲ್ಲದಿರುವುದರಿಂದ ನಿಧಾನಕ್ಕೆ ನೋಂದಣಿ ಆಗುತ್ತಿದ್ದಾರೆ ಎಂದು ಕೆ.ಜೆ. ಜಾರ್ಜ್‌ ತಿಳಿಸಿದರು.

Exit mobile version