ಬೆಂಗಳೂರು: ಅಕ್ಟೋಬರ್ ೨ರ ಗಾಂಧಿ ಜಯಂತಿ ಪ್ರಯುಕ್ತ ಇಲ್ಲಿನ ಅಬಲಾಶ್ರಮದಲ್ಲಿ ಕ್ಯಾನ್ಸರ್ ತಪಾಸಣೆ, ಗ್ಯಾಸ್ಟ್ರಿಕ್ ಸಮಸ್ಯೆ, ಚರ್ಮರೋಗ ಸೇರಿದಂತೆ ಇನ್ನಿತರ ಆರೋಗ್ಯ ಸಂಬಂಧಿ ಕಾಯಿಲೆಗಳಿಗೆ (Free Health Checkup) ಉಚಿತ ಪರೀಕ್ಷಾ ಶಿಬಿರವನ್ನು ಆಯೋಜಿಸಲಾಗಿದೆ.
ಅ.೨ರ ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ಶಿಬಿರ ನಡೆಯಲಿದೆ. ಶಿಬಿರದಲ್ಲಿ ಖ್ಯಾತ ಶಸ್ತ್ರಚಿಕಿತ್ಸಾ ತಜ್ಞ, ಗ್ಯಾಸ್ಟ್ರೋಎಂಟರಾಲಜಿಸ್ಟ್, ಪೈಲ್ಸ್ ಫಿಸ್ಟುಲಾ ತಜ್ಞರೂ ಆಗಿರುವ ಡಾಕ್ಟರ್ ಆಂಜನಪ್ಪ ಪಾಲ್ಗೊಳ್ಳಲಿದ್ದು, ಅಗತ್ಯ ಸಲಹೆ ಹಾಗೂ ಚಿಕಿತ್ಸೆ ನೀಡಲಿದ್ದಾರೆ. ಭಾರತೀಯ ಆಯುರ್ವೆದ ಪ್ರತಿಷ್ಠಾನದ ವತಿಯಿಂದ ಡಾಕ್ಟರ್ ಸಿ.ಎ. ಕಿಶೋರ್ ಮತ್ತು ತಂಡದವರಿಂದ ಆಯುರ್ವೇದ ಉಚಿತ ಪರೀಕ್ಷೆ ಮತ್ತು ಸಲಹೆ ಸಹ ಇದೇ ವೇಳೆ ಇದೆ.
ಮಹಿಳಾ ಚರ್ಮರೋಗ ತಜ್ಞರು ಸಹ ಶಿಬಿರದಲ್ಲಿ ಭಾಗವಹಿಸಿ ಚರ್ಮದ ತೊಂದರೆಗಳಿಗೆ ಪರೀಕ್ಷೆ ಮತ್ತು ಸಲಹೆ ನೀಡುವವರಿದ್ದಾರೆ. ಆಸಕ್ತರು ಭಾಗವಹಿಸಲು ಕೋರಲಾಗಿದೆ.
ಇದನ್ನೂ ಓದಿ | Tea Lovers | ಬಾ ಗುರು ಒಂದ್ ಕಪ್ ಟೀ ಕುಡಿ, ಹೀಗೆ ಹೇಳುತ್ತಿದೆ ಒಂದು ಹೊಸ ಸ್ಟಡಿ