ಬೆಂಗಳೂರು: ಬರೀ ಉಚಿತ ಯೋಜನೆಗಳಿಂದ ಹೆಣ್ಣುಮಕ್ಕಳು (Women Empowerment) ಸ್ವಾವಲಂಬಿಗಳಾಗುವುದಿಲ್ಲ. ಮಹಿಳೆಯರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಉಚಿತ ಯೋಜನೆಗಳನ್ನು ಘೋಷಣೆ ಮಾಡಿದೆ. ಆದರೆ, ಬಿಜೆಪಿಯು (BJP) ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಿತು. ಇಂತಹ ಕ್ರಮಗಳಿಂದ ಮಹಿಳೆಯರ ಸಬಲೀಕರಣ ಸಾಧ್ಯವಾಗುತ್ತದೆಯೇ ಹೊರತು, ಉಚಿತ ಯೋಜನೆಗಳನ್ನು (Guarantee Schemes) ಕೊಟ್ಟು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕಿ, ನಟಿ ಶ್ರುತಿ (Actress Shruti) ಹೇಳಿದರು.
ಬೆಂಗಳೂರು ಕೇಂದ್ರ ಲೋಕಸಭೆ ಅಭ್ಯರ್ಥಿ ಪಿ.ಸಿ.ಮೋಹನ್ ಅವರು ನಾಮಪತ್ರ ಸಲ್ಲಿಕೆಗೂ ಮೊದಲು ಅವರು ಮಾತನಾಡಿದರು. “ನಾನು ಭಾರತೀಯಳು ಎಂಬ ಹೆಮ್ಮೆ ಇದೆ. ಭಾರತೀಯ ಜನತಾ ಪಕ್ಷದ ಸದಸ್ಯೆ ಅನ್ನೋದು ಕೂಡ ಅಷ್ಟೇ ಹೆಮ್ಮೆ ಇದೆ. ನಾನು ಬಿಜೆಪಿ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಬರುತ್ತೇನೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿದೆ. ಆದರೆ, ಪ್ರತಿ ಯಶಸ್ವಿ ಮಹಿಳೆಯ ಹಿಂದೆ ಬಿಜೆಪಿ ಯೋಜನೆ ಇದೆ ಎಂದು ಹೇಳಲು ಹೆಮ್ಮೆಯಾಗುತ್ತದೆ” ಎಂದು ತಿಳಿಸಿದರು.
“ಈ ಬಾರಿ ಕಾಂಗ್ರೆಸ್ ಪಕ್ಷವು ಮಹಿಳೆಯರ ಮತಗಳು ಆಚೀಚೆ ಹೋಗಬಾರದು ಎಂದು ಎಲ್ಲರಿಗೂ ಉಚಿತ ಯೋಜನೆ ಘೋಷಣೆ ಮಾಡಿತು. ಬರೀ ಉಚಿತ ಕೊಟ್ಟ ಮಾತ್ರಕ್ಕೆ ಮಹಿಳೆ ಸ್ವಾವಲಂಬಿ ಆಗಲು ಸಾಧ್ಯವಿಲ್ಲ. ನರೇಂದ್ರ ಮೋದಿ ಅವರು ಮಹಿಳಾ ಮೀಸಲಾತಿ ಜಾರಿಗೆ ತಂದು ರಾಜಕೀಯದಲ್ಲಿ ಕೂಡ ಮುನ್ನುಗ್ಗಿ ಎಂದು ಕರೆ ನೀಡಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಬೇಕು. ಅದಕ್ಕಾಗಿ ನಾನು ಪಿ.ಸಿ. ಮೋಹನ್ ಅವರಿಗೆ ಮತ ನೀಡುತ್ತೇನೆ. ನಾನು ಈ ಕ್ಷೇತ್ರದ ಮತದಾರಳು. ನನ್ನ ಮಗಳು ಕೂಡ ಫಸ್ಟ್ ಟೈಮ್ ವೋಟರ್. ಅವಳೂ ಪಿ.ಸಿ.ಮೋಹನ್ ಅವರಿಗೆ ಮತ ನೀಡಲಿದ್ದಾಳೆ” ಎಂದು ಹೇಳಿದರು.
ಇದನ್ನೂ ಓದಿ: ಸುಧಾಕರ್ ಹೆಸರಲ್ಲಿ ಮತ ಕೇಳಿದ್ರೆ ಪಕ್ಷಕ್ಕೇ ಮೈನಸ್; ಬಿಜೆಪಿ ಶಾಸಕ ವಿಶ್ವನಾಥ್ ಕೆಂಡಾಮಂಡಲ!
“ದೇಶದಲ್ಲಿ ನರೇಂದ್ರ ಮೋದಿ ಅಲೆ ಇದೆ. ಆಡಳಿತ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ಸಹಜವಾಗಿ ಇರುತ್ತದೆ. ಆದರೆ, ಮೋದಿ ಅವರಿಗೆ ಆಡಳಿತ ವಿರೋಧಿ ಅಲೆ ಇಲ್ಲ. ಬಿಜೆಪಿಯು 400 ಸ್ಥಾನ ಗೆದ್ದು, ಅಧಿಕಾರಕ್ಕೆ ಬರುವುದು ಪಕ್ಕಾ. ನಮಗೆ ಮಹಿಳೆಯರಿಗೆ ಹೆಚ್ಚು ಟಿಕೆಟ್ ಕೊಡದಿರಬಹುದು. ಆದರೆ, ದೇಶದಲ್ಲಿ ಶೇ.33ರಷ್ಟು ರಾಜಕೀಯ ಮೀಸಲಾತಿ ಇದೆ. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50ರಷ್ಟು ಮೀಸಲಾತಿ ನೀಡಿದ್ದು ಬಿಜೆಪಿ. ನಮಗೆ ಅನುಕೂಲ ಮಾಡಿಕೊಟ್ಟಿರುವುದು ಬಿಜೆಪಿ. ಮಹಿಳೆಯರು ಎಂದೂ ಬಿಜೆಪಿ ಬಿಡಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಕೊಟ್ಟ ಗ್ಯಾರಂಟಿಗಳು ವರ್ಕೌಟ್ ಆಗಲ್ಲ. ಬಿಜೆಪಿ ಗೆಲ್ಲುವುದು ಗ್ಯಾರಂಟಿ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ