Site icon Vistara News

Umesh Katti | ಬುಧವಾರ ಸಚಿವ ಉಮೇಶ್‌ ಕತ್ತಿ ಅವರ ಅಂತ್ಯಕ್ರಿಯೆ

ಬೆಂಗಳೂರು: ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನ ಹೊಂದಿರುವ ಆಹಾರ ಸಚಿವ ಉಮೇಶ್‌ ಕತ್ತಿ ಅವರ ಅಂತ್ಯಕ್ರಿಯೆ ಬುಧವಾರ ಅವರ ಸ್ವಗ್ರಾಮ ಹುಕ್ಕೇರಿಯಲ್ಲಿ ನಡೆಯಲಿದೆ ಎನ್ನಲಾಗಿದೆ. ಆದರೆ, ಕುಟುಂಬದ ಸದಸ್ಯರು ಬೆಂಗಳೂರು ತಲುಪಿದ ಬಳಿಕ ಸ್ಪಷ್ಟ ತೀರ್ಮಾನ ಪ್ರಕಟವಾಗಲಿದೆ.

ನಿಧನದ ಸುದ್ದಿ ತಿಳಿದ ಅವರು ಕುಟಂಬದ ಸದಸ್ಯರು ಬೆಂಗಳೂರಿಗೆ ರಸ್ತೆ ಮಾರ್ಗವಾಗಿ ಆಗಮಿಸುತ್ತಿದ್ದಾರೆ. ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ, ಪುತ್ರ ನಿಖಿಲ್ ಕತ್ತಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಿಂದ ಹೊರಟಿದ್ದು, ಬುಧವಾರ ನಸುಕಿನಲ್ಲಿ ಬೆಂಗಳೂರು ತಲುಪುವ ಸಾಧ್ಯತೆಗಳಿವೆ.

ಬುಧವಾರ ಬೆಳಗ್ಗೆ ಬೆಂಗಳೂರಿನಲ್ಲಿ ಉಮೇಶ್ ಕತ್ತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅಂತಿಮ ದರ್ಶನ ಮುಗಿದ ಬಳಿಕ ‌ವಿಶ್ವರಾಜ್ ಶುಗರ್ಸ್ ಅಥವಾ ಉಮೇಶ ಕತ್ತಿ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಗಳಿವೆ.

ಇದನ್ನೂ ಓದಿ | Umesh Katti | 8 ಬಾರಿ ಶಾಸಕರಾಗಿದ್ದ ಉಮೇಶ್‌ ಕತ್ತಿ ಅಪರೂಪದ ರಾಜಕಾರಣಿ

Exit mobile version