ಮಂಗಳವಾರ ರಾತ್ರಿ ನಿಧನರಾದ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿದೆ. ಈ ನಡುವೆ ಅವರ ತಮ್ಮ ರಮೇಶ್ ಕತ್ತಿ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದೆ.
ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಲು ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಗೆ ಆಗಮಿಸಿದ್ದು, ಪಕ್ಷಭೇದ ಮರೆದು ಕಾಂಗ್ರೆಸ್ ನಾಯಕರೂ ಭಾಗವಹಿಸುತ್ತಿದ್ದಾರೆ.
Umesh katti ಅವರ ನಿಧನದ ಹಿನ್ನೆಲೆಯಲ್ಲಿ ಘೋಷಿಸಲಾದ ಶೋಕಾಚರಣೆಯನ್ನು ಒಂದು ದಿನದಿಂದ ಮೂರು ದಿನಕ್ಕೆ ವಿಸ್ತರಿಸಲಾಗಿದೆ.
ರಾಜ್ಯ ಬಿಜೆಪಿ ಸರಕಾರದ ಸಾಧನಾ ಸಮಾವೇಶವೆಂದೇ ಪರಿಗಣಿತವಾದ ಜನೋತ್ಸವ ಮೂರನೇ ಬಾರಿಗೆ ಮುಂದೂಡಲ್ಪಟ್ಟಿದೆ. ನಾಳೆ ನಡೆಯಬೇಕಿದ್ದ ಕಾರ್ಯಕ್ರಮ ಭಾನುವಾರಕ್ಕೆ ಮರು ನಿಗದಿಯಾಗಿದೆ.
Umesh Katti ಅವರಿಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇತ್ತು. ಇದನ್ನು ಆವರು ತಮಾಷೆ ಎಂಬಂತೆ ಆಗಾಗ ಹೇಳುತ್ತಲೇ ಇದ್ದರು. ಹಾಗೆ ಹೇಳಿಕೊಂಡ ಒಂದು ತಮಾಷೆಯ ವಿಡಿಯೊ ಈಗ ವೈರಲ್ ಆಗುತ್ತಿದೆ.
ರಾಜ್ಯದ ಇತರೆಡೆಗಳಲ್ಲಿ ಉಮೇಶ್ ಕತ್ತಿ ಅವರ ಮಾತುಗಳು ವ್ಯಂಗ್ಯ, ವಿರೋಧದ ಅಲೆಗಳನ್ನು ಎಬ್ಬಿಸುತ್ತಿದ್ದವಾದರೂ ಸ್ವಕ್ಷೇತ್ರ ಹುಕ್ಕೇರಿ ಹಾಗೂ ಬೆಳಗಾವಿ ಜಿಲ್ಲೆಯ ಜನರು ಮಾತ್ರ ಕತ್ತಿ ಅವರನ್ನು ಗಟ್ಟಿಯಾಗಿ ಅಪ್ಪಿಕೊಂಡಿದ್ದರು.
ಪತ್ನಿ, ಮಗ, ಮಗಳು ಹಾಗೂ ಸಹೋದರ ರಮೇಶ್ ಕತ್ತಿ ಜತೆಗೂಡಿ ವಿಮಾನ ಹಾರಾಟ ಆರಂಭಿಸಿತು. ಮದ್ಯಾಹ್ನ 1.30ರ ವೇಳೆಗೆ ವಿಮಾನ ಬೆಳಗಾವಿ ತಲುಪಲಿದೆ.