Site icon Vistara News

G20 Summit 2023: ಒಂದೇ ಫ್ರೇಮಿನಲ್ಲಿ ಇಬ್ಬರು ಪವರ್‌ಫುಲ್ ಮಹಿಳೆಯರು! ವೈರಲ್ ಆಯ್ತು ನಿರ್ಮಲಾ-ಗೀತಾ ಫೋಟೋ

G20 Summit 2023, Photo of Nirmala Sitharaman and Gita Gopinath goes viral

ಬೆಂಗಳೂರು: ಐಟಿ ಸಿಟಿ ಬೆಂಗಳೂರಲ್ಲಿ ಜಿ20 ರಾಷ್ಟ್ರಗಳ ಹಣಕಾಸು ಸಚಿವರ ಸಭೆ ನಡೆಯುತ್ತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯ ಫಸ್ಟ್ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಗೀತಾ ಗೋಪಿನಾಥ್ (Gita Gopinath) ಅವರ ಫೋಟೋ ವೈರಲ್ ಆಗಿದೆ. ಇಬ್ಬರು ಶಕ್ತಿಶಾಲಿ ಮಹಿಳೆಯರು ಒಂದೇ ಫ್ರೇಮ್‌ನಲ್ಲಿರುವುದು ಸಖತ್ ಕುತೂಹಲ ಕೆರಳಿಸಿದೆ. ಈ ಫೋಟೋವನ್ನು ಗೀತಾ ಗೋಪಿನಾಥ್ ಅವರು ಷೇರ್ ಮಾಡಿದ್ದಾರೆ. ಗೀತಾ ಗೋಪಿನಾಥ್ ಕರ್ನಾಟಕದ ಮೈಸೂರಿನಲ್ಲಿ ಓದಿದ್ದಾರೆ(G20 Summit 2023).

ಬೆಂಗಳೂರಿನಲ್ಲಿ ನಡೆಯತ್ತಿರುವ ಜಿ20 ಎಫ್‌ಎಂಸಿಬಿಜಿ(FMCBG) ಸಭೆಗಳಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿದ್ದು ನಿಜವಾಗಿಯೂ ಸಂತೋಷವಾಯಿತು. ಸಾಕಷ್ಟು ಒಳ್ಳೆಯ ಚರ್ಚೆಗಳು ನಡೆದವು ಎಂದು ಗೀತಾ ಗೋಪಿನಾಥ್ ಅವರು ಟ್ವೀಟ್ ಮಾಡಿದ್ದಾರೆ. ಬಹಳಷ್ಟು ಜನರು ಈ ಫೋಟೋಗೆ ಕಮೆಂಟ್ ಮಾಡಿದ್ದು, ಇಬ್ಬರು ನಾಯಕರನ್ನು ಹೊಗಳಿದ್ದಾರೆ. ವಿಶೇಷ ಎಂದರೆ ಇಬ್ಬರೂ ಕೆಂಪು ಬಣ್ಣದ ಸೀರೆಗಳನ್ನು ಉಟ್ಟಿದ್ದಾರೆ.

ಭಾರ್ಗವ್ ಮಿತ್ರ ಎನ್ನುವವರು ಭವಿಷ್ಯ ಪೂರ್ತಿ ಆಶಾದಾಯಕವಾಗಿದೆ ಎಂದು ಬರೆದುಕೊಂಡಿದ್ದಾರೆ. ಎರಡೂ ಪೀಳಿಗೆಯು ಭಾರತವನ್ನು ಬೆಳವಣಿಗೆಯ ಪಥದತ್ತ ಕೊಂಡೊಯ್ಯುವ ವಿಶ್ವಾಸವನ್ನು ತೋರುತ್ತಿದೆ ಎಂದು ಮತ್ತೊಬ್ಬ ಟ್ವಿಟರ್ ಬಳಕೆದಾರರು ಹೇಳಿದ್ದಾರೆ.

ಗೀತಾ ಗೋಪಿನಾಥ್ ಅವರ ಟ್ವೀಟ್….

ಇದನ್ನೂ ಓದಿ: G20 Meeting : ಬೆಂಗಳೂರಿನಲ್ಲಿ ನಡೆಯಲಿದೆ ಜಿ20 ಎನರ್ಜಿ ಟ್ರಾನ್ಸಿಶನ್‌ ವರ್ಕಿಂಗ್‌ ಗ್ರೂಪ್‌ ಸಭೆ

ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಗುಂಪಾಗಿರುವ ಜಿ20 ರಾಷ್ಟ್ರಗಳ ಹಣಕಾಸು ಸಚಿವರು ಬೆಂಗಳೂರಿನಲ್ಲಿ ಜಿ20 ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ (ಎಫ್‌ಎಂಸಿಬಿಜಿ) ಎರಡು ದಿನಗಳ ಸಭೆಯಲ್ಲಿ ಭಾಗವಹಿಸಿದ್ದಾರೆ.

Exit mobile version