Site icon Vistara News

ಆಸ್ತಿ ಬರೆದುಕೊಡುವಂತೆ ದಂಪತಿಗೆ ಬೆದರಿಕೆ ಹಾಕಿದ್ರಾ ಶಾಸಕ ಚರಂತಿಮಠ?

ದಂಪತಿಗೆ ಬೆದರಿಕೆ

ಗದಗ : ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ದಂಪತಿ ಮೇಲೆ ಆಸ್ತಿ ವಿಚಾರವಾಗಿ ದರ್ಪ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಆಸ್ತಿ ಬರೆದುಕೊಡುವಂತೆ ದಂಪತಿಗೆ ಹಿಗ್ಗಾಮುಗ್ಗ ಥಳಿಸಿ ಶಾಸಕರು ಜೀವ ಬೆದರಿಕೆ ಒಡ್ಡಿರುವುದಾಗಿ ದಂಪತಿ ಆರೋಪಿಸಿದ್ದಾರೆ. ಆದರೆ ಇದಕ್ಕೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಚರಂತಿಮಠ, ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ದಂಪತಿ ಯಾರೆಂದು ತಾವು ನೋಡಿಯೂ ಇಲ್ಲ ಎಂದಿದ್ದಾರೆ.

ತಾಲೂಕಿನ ಅಡವಿ ಸೋಮಾಪುರ ನಿವಾಸಿ ಮಲ್ಲಯ್ಯ ಹಿರೇಮಠ ಮತ್ತು ಲಕ್ಷ್ಮೀ ಹಿರೇಮಠ ಎಂಬುವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. ಕುಮಾರೇಶ್ವರ ಗೆಸ್ಟ್‌ ಹೌಸ್‌ಗೆ ಕರೆಸಿ ಶಾಸಕ ವೀರಣ್ಣ ಚರಂತಿಮಠ ಬೆಲ್ಟ್ ನಿಂದ ಹಿಗ್ಗಾಮುಗ್ಗಾ ಥಳಿಸಿರುವುದಾಗಿ ದಂಪತಿ ಆರೋಪಿಸಿದ್ದಾರೆ.

ನೂರಾರು ಬೆಂಬಲಿಗರ ಸಮ್ಮುಖದಲ್ಲೇ ಮಹಿಳೆ ಮೇಲೆ ಖುರ್ಚಿ ಎತ್ತಿ ಹಾಕಿ ಹಲ್ಲೆ ಮಾಡಿದ್ದಾರೆ. ಕಿವಿ, ಕೈ, ತೊಡೆಗೆ ಬಾಸುಂಡೆ ಬರುವಂತೆ ಮನಸ್ಸೋ ಇಚ್ಛೆ ಥಳಿಸಿ ನಿಂದನೆ ಮಾಡಿ, ಮಹಿಳೆ ಎಂದೂ ನೋಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಆಸ್ತಿ ಬರೆದುಕೊಡದಿದ್ದರೆ ಉಳಿಸುವುದಿಲ್ಲ ಎಂದು ಶಾಸಕ ಬೆದರಿಕೆ ಹಾಕಿದ್ದಾರೆ. ನವನಗರದಲ್ಲಿರುವ 20 ಗುಂಟೆ ಜಾಗ ಬರೆದುಕೊಡುವಂತೆ ಧಮ್ಕಿ ಹಾಕಿದ್ದಾರೆ ಎಂದು ದಂಪತಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | ಸಾಲದ ವಿವಾದ: 75ರ ವೃದ್ಧನಿಂದ 35ರ ಮಹಿಳೆಯ ಅತ್ಯಾಚಾರ, ಗ್ಯಾಂಗ್‌ಸ್ಟರ್‌ಗಳಿಂದ ಬೆದರಿಕೆ

ಬಾಗಲಕೋಟೆಯ ಗುರುಬಸವ ಪತ್ತಿನ ಸಹಕಾರಿ ಬ್ಯಾಂಕ್‌ನಲ್ಲಿ ಹಿರೇಮಠ ದಂಪತಿ 60 ಲಕ್ಷ ರೂ. ಸಾಲ ಮಾಡಿದ್ದರು. ಆದರೆ ಸಾಲ ಮರುಪಾವತಿ ಮಾಡುವುದು ತಡವಾಗಿತ್ತು. ಸಾಲ ತುಂಬಲು ಹೋಗಿದ್ದ ದಂಪತಿಗೆ ಶಾಸಕ ಕರೆಯಿಸಿ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂಬುವುದು ಚಿರಂತಿಮಠ ಮೇಲಿರುವ ಆರೋಪ.

ಪ್ರಕರಣ ಕುರಿತಂತೆ ಬಾಗಲಕೋಟೆ ಎಸ್ಪಿ ಮಾತನಾಡಿ, ಆರೋಪ ಮಾಡಿರುವ ಈ ದಂಪತಿಗಳು ನಮ್ಮನ್ನು ಭೇಟಿ ಮಾಡಿಲ್ಲ. ದಂಪತಿ ಅಡ್ಮಿಟ್ ಆಗಿರುವ ಆಸ್ಪತ್ರೆಗೆ ಹೋಗಿ ಮಾಹಿತಿ ಸಂಗ್ರಹಿಸಲಾಗುತ್ತದೆ. ಕುಟುಂಬಸ್ಥರಿಂದ ದೂರು ಪಡೆದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ದೂರು ಕೊಡಲು ಬಂದಾಗ ಯಾರೇ ಆದರೂ ದೂರು ಪಡೆಯಲೇಬೇಕು. ಠಾಣೆಗೆ ಬಂದಿದ್ದರೆ ರೆಕಾರ್ಡ್‌ ಇರುತ್ತಿತ್ತು. ಈಗಲೂ ಒಂದು ಅರ್ಜಿ ಅಥವಾ ಕಂಪ್ಲೆಂಟ್‌ ಕೊಟ್ಟರೂ ಸಹ ಪರಿಶೀಲನೆ ಮಾಡುತ್ತೇವೆ. ಸದ್ಯಕ್ಕೆ ಪರಿಶೀಲನೆ ಮಾಡಲಾಗಿದ್ದು, ಅವರು ಠಾಣೆಗೆ ಬಂದಿದ್ದು ನಮಗೆ ಕಂಡು ಬಂದಿಲ್ಲ. ಎಂದು ಬಾಗಲಕೋಟೆಯಲ್ಲಿ ಎಸ್ಪಿ ಲೋಕೇಶ್ ಜಗಲಾಸರ್ ಹೇಳಿದ್ದಾರೆ.

ಇದನ್ನೂ ಓದಿ | ಅಂಗಿಬಿಚ್ಚಿ, ಕೈಯಲ್ಲಿ ಖಡ್ಗ ಹಿಡಿದು ನೂಪುರ್‌ ಶರ್ಮಾಗೆ ಬೆದರಿಕೆ ಹಾಕಿದ್ದ ಯೂಟ್ಯೂಬರ್‌ ಬಳಿಕ ಕೈಮುಗಿದ !

Exit mobile version