Site icon Vistara News

Knife Attack | ಪ್ರೀತಿಸಿದ ಯುವತಿಯ ಮನೆ ಮುಂದೆ ಗಲಾಟೆ; ಯುವಕನಿಗೆ ಚಾಕು ಇರಿತ

knife attack

ಗದಗ: ಸಿದ್ಧಲಿಂಗ ನಗರದಲ್ಲಿ ಪ್ರೀತಿಸಿದ ಯುವತಿ ಮನೆ ಮುಂದೆ ಹೋಗಿ ಬುಧವಾರ ಗಲಾಟೆ ಮಾಡಿದ ಯುವಕನಿಗೆ, ಹುಡುಗಿ ಮನೆಯವರು ಚಾಕು ಇರಿದಿದ್ದು, ಗಂಭೀರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಭಿಷೇಕ್‌ ಹನುಮಂತಪ್ಪ ನಾಯ್ಕರ (28) ಚಾಕು ಇರಿತಕ್ಕೊಳಗಾದ ಯುವಕ. ಪ್ರೇಮಾ ಉಮೇಶ ಪವಾರ ಎಂಬ ಯುವತಿಯನ್ನು ಯುವಕ ಪ್ರೀತಿಸುತ್ತಿದ್ದ. ಆದರೆ, ಯುವತಿ ಮನೆಯವರು ಮತ್ತೊಬ್ಬ ಯುವಕನೊಂದಿಗೆ ಮದುವೆ ಮಾಡಲು ನಿರ್ಧರಿಸಿ, ನಿಶ್ಚಿತಾರ್ಥ ಕೂಡ ಮಾಡಿದ್ದರು. ಇದರಿಂದ ಕೋಪಗೊಂಡ ಯುವಕ, ಯುವತಿಯ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾನೆ.

ಮೊದಲಿಗೆ ಯುವತಿ ಮನೆ ಮುಂದೆ ಚಾಕು ಹಿಡಿದು ಅಭಿಷೇಕ್ ಗಲಾಟೆ ಮಾಡಿದ್ದಾನೆ. ಆಗ ಯುವತಿ ಕುಟುಂಬಸ್ಥರು ಹಾಗೂ ಯುವಕನ ನಡುವೆ ಜಗಳ ನಡೆದಿದ್ದು, ಆತನ ಕೈಯಲ್ಲಿದ್ದ ಚಾಕುವಿನಿಂದಲೇ ಯುವತಿ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ. ಇದರಿಂದ ಯುವಕನ ಎದೆ, ಕೈ ಭಾಗದಲ್ಲಿ ಗಂಭೀರ‌ ಗಾಯಗಳಾಗಿವೆ. ಗಾಯಾಳುವನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾಡ್ಜ್‌ನಲ್ಲಿ ಪ್ರೇಮಿಗಳು ನೇಣಿಗೆ ಶರಣು
ಧಾರವಾಡ: ಜಿಲ್ಲೆಯ ನವಲಗುಂದದ ಬಸ್ ನಿಲ್ದಾಣದ ಪಕ್ಕದ ಲಾಡ್ಜ್‌ನಲ್ಲಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿಗೆ ಮನೆಯಲ್ಲಿ ಅಡ್ಡಿಪಡಿಸಿರುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Crime news | ಮಗನಿಂದಲೇ ತಾಯಿಯ ಹತ್ಯೆ: ಕುಡಿತಕ್ಕೆ ಹಣ ಕೊಡಲಿಲ್ಲ ಎಂಬ ಸಿಟ್ಟಿನಲ್ಲಿ ಹೊಡೆದೇ ಕೊಂದ!

Exit mobile version