Site icon Vistara News

KS Eshwarappa : ಈ ದೇಶದಲ್ಲಿ ಒಂದೇ ಒಂದು ಮಸೀದಿಯನ್ನೂ ಉಳಿಸಲ್ಲ; ಈಶ್ವರಪ್ಪ ಶಪಥ

KS Eshwarappa

#image_title

ಗದಗ : ದೇಶದಲ್ಲಿ ಅದೆಷ್ಟೋ ದೇವಸ್ಥಾನಗಳನ್ನು (Temples in India) ಕೆಡವಿ ಮಸೀದಿ ಕಟ್ಟಿದ್ದಾರೆ (Temples demolished). ಈ ರೀತಿ ನಿರ್ಮಿಸಿದ ಯಾವುದೇ ಒಂದು ಮಸೀದಿಯನ್ನೂ ಈ ದೇಶದಲ್ಲಿ (Will not leave any mosques in India) ಉಳಿಸುವುದಿಲ್ಲ.: ಹೀಗೆಂದು ಶಪಥ ಮಾಡಿದ್ದಾರೆ ಬಿಜೆಪಿ ನಾಯಕ, ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ (KS EShwarappa).

ಗದಗದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕಟ್ಟಲಾದ ಹೊಸ ಮಸೀದಿಗಳ ಬಗ್ಗೆ ನಾನು ವಿರೋಧ ಮಾಡುವುದಿಲ್ಲ. ಆದರೆ, ನಮ್ಮ ದೇವಸ್ಥಾನಗಳನ್ನು ಒಡೆದು ಮಸೀದಿ ಕಟ್ಟಿದ್ದಾರಲ್ಲ ಆ ಮಸೀದಿಗಳನ್ನು ಉಳಿಸುವುದಿಲ್ಲ. ಈ ದೇಶದಲ್ಲಿ ಒಂದೇ ಒಂದು ಮಸೀದಿಯನ್ನು ಉಳಿಸುವುದಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದರು.

ಹಿಂದು ರಾಷ್ಟ್ರ ಹಿಂದುಗಳ ಅಜೆಂಡಾ

ಬಿಜೆಪಿಯಿಂದ ಈ ದೇಶವನ್ನು ಹಿಂದು ರಾಷ್ಟ್ರ ಮಾಡಲು ಸಾಧ್ಯವಿಲ್ಲ. ಇದು ಜಾತ್ಯತೀತ ರಾಷ್ಟ್ರ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಿಂದೂ ರಾಷ್ಟ್ರ ಮಾಡೋದು ಬಿಜೆಪಿ ಅಜೆಂಡಾ ಅಲ್ಲ. ಹಿಂದೂ ರಾಷ್ಟ್ರ ಮಾಡೋದು ದೇಶದ ಹಿಂದೂಗಳ ಅಜೆಂಡಾ ಎಂದರು. ʻʻಈಗಲೂ ನಾನು ಹೇಳ್ತೇನೆ. ಭಾರತ ಹಿಂದೂ ರಾಷ್ಟ್ರ ಆಗಿಯೇ ಆಗುತ್ತದೆʼʼ ಎಂದರು.

ʻʻಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಬೇಕು ಎನ್ನುವುದು ಇವತ್ತಿನ ತೀರ್ಮಾನ ಅಲ್ಲ. ಇದರ ಬಗ್ಗೆ ಸ್ವಾತಂತ್ರ್ಯ ಪೂರ್ವದಿಂದಲೇ ಹೋರಾಟ ನಡೆದುಕೊಂಡು ಬಂದಿದೆ. ಮಥುರಾ, ಕಾಶಿಯಲ್ಲಿ ಎಲ್ಲವನ್ನೂ ಹೊಡೆದು ಹಾಕಿದ್ರಲ್ವಾ ಮುಸಲ್ಮಾನರು. ಅದನ್ನೆಲ್ಲಾ ಉಳಿಸಬೇಕೆಂಬ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಅದೆಷ್ಟೋ ಮಂದಿ ಸ್ವರ್ಗದಲ್ಲಿದ್ದಾರೆ. ಅವರೆಲ್ಲ ಆತ್ಮಕ್ಕೆ ಈಗ ಶಾಂತಿ ಸಿಗುತ್ತಿದೆʼʼ ಎಂದು ಈಶ್ವರಪ್ಪ ನುಡಿದರು.

ಜನವರಿ 22ಕ್ಕೆ ಅಯೋಧ್ಯೆಯಲ್ಲಿ ಇಡೀ ಪ್ರಪಂಚ ನೋಡುವ ಕೆಲಸ ಆಗಲಿದೆ. ಕಾಶಿ ವಿಶ್ವನಾಥ ದೇವಸ್ಥಾನದ ವಿಚಾರದಲ್ಲಿ ನಡೆಯುತ್ತಿರುವ ಕೋರ್ಟ್‌ ವಿಚಾರಣೆ ಹಿಂದುಗಳ ಪರವಾಗಿ ನಡೆಯುತ್ತಿದೆ. ಮಥುರೆಯ ಕೃಷ್ಣ ದೇವಸ್ಥಾನದ ವಿಚಾರದಲ್ಲಿ ಸರ್ವೇಗೆ ಆದೇಶ ಕೊಟ್ಟಿದ್ದಾರೆ. ಎಲ್ಲವೂ ಒಂದೊಂದಾಗಿ ನಡೆಯಲಿದೆ ಎಂದು ಅವರು ಹೇಳಿದರು.

ನಾವು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರ ರಕ್ತವನ್ನು ಹಂಚಿಕೊಂಡವರು. ನಮ್ಮಲ್ಲಿ ಟಿಪ್ಪು ರಕ್ತ ಇಲ್ಲಾ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದರ ರಕ್ತ ಇರುವುದು. ಅಯೋಧ್ಯೆ, ಕಾಶಿ, ಮಥುರಾದಂಥ ವಿಶೇಷ ದೇವಸ್ಥಾನಗಳನ್ನು ನಾವು ಉಳಿಸುತ್ತೇವೆ ಎಂದು ಹೇಳಿದರು ಈಶ್ವರಪ್ಪ.

ಬಿಜೆಪಿ ಸುಳ್ಳಿನ ಕಾರ್ಖಾನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಸುಳ್ಳಿನ ಕಾರ್ಖಾನೆ ಅಂತಾ ಹೇಳ್ತಾರೆ, ಅದನ್ನು ಜನ ನಂಬಿದ್ರಾ? ಮೂರು ರಾಜ್ಯದಲ್ಲಿ ಜನರು ಬಿಜೆಪಿಯನ್ನು ಅಧಿಕಾರಕ್ಕೆ ತರಲಿಲ್ವಾ? ಆ ಮೂರು ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಈಗ ಹೇಗಿದೆ ಎಂ‌ದು ಈಶ್ವರಪ್ಪ ಪ್ರಶ್ನಿಸಿದರು.

ಇದನ್ನೂ ಓದಿ: Hindu Rashtra : ನಮ್ಮದು ಹಿಂದು ರಾಷ್ಟ್ರ, ತಪ್ಪೇನು?; ಚರ್ಚೆ ಹುಟ್ಟುಹಾಕಿದ ಪೇಜಾವರ ಶ್ರೀ

ಜಮೀರ್‌ಗೆ ಸಿದ್ದರಾಮಯ್ಯ ಬೆಂಬಲ ಎಂಬ ಈಶ್ವರಪ್ಪ

ಜಿನ್ನಾ ಸಂತತಿಯ ಸಚಿವ ಜಮೀರ್ ಅಹ್ಮದ್ ಖಾನ್‌ ಅವರು, ತೆಲಂಗಾಣದಲ್ಲಿ ಏನೂ ಹೇಳಿದರು? ರಾಜ್ಯದಲ್ಲಿ ಮುಸಲ್ಮಾನರೊಬ್ಬರನ್ನು ಸ್ಪೀಕರ್ ಸ್ಥಾನದಲ್ಲಿ ಕೂಡಿಸಿದ್ದೇವೆ. ಬಿಜೆಪಿಯವರೂ ಸೇರಿದಂತೆ ಎಲ್ಲಾ 224 ಶಾಸಕರು ಅವರಿಗೆ ನಮಸ್ಕಾರ ಮಾಡಬೇಕು ಅಂತ. ನಾವು ಸ್ಪೀಕರ್‌ ಮುಸ್ಲಿಂ ಎಂಬ ಕಾರಣಕ್ಕಾಗಿ ನಮಸ್ಕಾರ ಮಾಡಿಕೊಂಡು ಹೋಗುತ್ತೇವಾ? ಆ ಸಭಾಧ್ಯಕ್ಷ ಸ್ಥಾನಕ್ಕೆ ಗೌರವ ಕೊಡ್ತಿದ್ದೇವೆ. ಜಮೀರ್‌ ಅವರ ಇಂಥ ಹೇಳಿಕೆಗಳನ್ನು ಸಿಎಂ ಸಿದ್ದರಾಮಯ್ಯ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ದಲಿತರಿಗೆ ಅಪಮಾನ ಮಾಡಲು ಖರ್ಗೆ ಹೆಸರು ಪ್ರಸ್ತಾಪ

ಇಂಡಿಯಾ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಅಭ್ಯರ್ಥಿ ಪ್ರಸ್ತಾಪ ಮಾಡಿದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ಇದು ದಲಿತರಿಗೆ ಅವಮಾನ ಮಾಡಲು ಪ್ರಸ್ತಾಪ ಮಾಡಿರುವುದು. ಖರ್ಗೆ ಹೆಸರು ಪ್ರಸ್ತಾಪ ಮಾಡ್ತಿದ್ದಂತೆ ಲಾಲೂ ಪ್ರಸಾದ್ ಹಾಗೂ ನಿತೀಶ್ ಕುಮಾರ್ ಎದ್ದು ಹೋದರು. ಇದಕ್ಕೆ ಇಂಡಿಯಾ ಒಕ್ಕೂಟ ಅಂತ ಕರೆಯುತ್ತೀರಾ? ಇದು ದಲಿತರ ಮೂಗಿಗೆ ತುಪ್ಪ ಒರೆಸುವ ಕೆಲಸ. ಕಾಂಗ್ರೆಸ್ ಇದೇ ರೀತಿ ದಲಿತರಿಗೆ ದ್ರೋಹ ಮಾಡುತ್ತಲೇ ಬಂದಿದೆ. ದಲಿತರನ್ನು ನಂಬಿಸಿ ಮೋಸ ಮಾಡಿ ಇಷ್ಟು ವರ್ಷ ದೇಶ ಆಳಿದ್ದಾರೆ ಎಂದರು ಈಶ್ವರಪ್ಪ. ಪ್ರಿಯಾಂಕ ಖರ್ಗೆ ಅವರು ಧರ್ಮದ್ರೋಹಿ ಎಂದು ಹೇಳಿದ ಈಶ್ವರಪ್ಪ ವರು, ಆದರೆ, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಗೌರವ ಇದೆ ಎಂದರು.

ಮೋದಿ ಅವರು ಡಿ.ಕೆ. ಶಿವಕುಮಾರ್‌ನ ಕೇಳಿದ್ರಂತೆ…

ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿದ್ದರಾಮಯ್ಯ ಭೇಟಿ ವೇಳೆ ಡಿಕೆಶಿ ಹೆಸರು ಪ್ರಸ್ತಾಪ ವಿಚಾರವಾಗಿದೆ ಎಂಬ ಹೇಳಿಕೆಯನ್ನು ವ್ಯಂಗ್ಯ ಮಾಡಿದ ಕೆಎಎಸ್ ಈಶ್ವರಪ್ಪ ಅವರು, ʻʻಯಾಕೆ ಕೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಎರಡು ಥರ ಪ್ರಖ್ಯಾತಿ ಇರಬೇಕು. ಒಂದೋ ಶಿವಾಜಿ ಆಗಿರಬೇಕು.. ಇಲ್ಲವೇ ಅಫ್ಜಲ್ ಖಾನ್ ಆಗಿರಬೇಕು.. ಇಬ್ಬರೂ ಪ್ರಖ್ಯಾತಿ ಪಡೆದಿರುವವರೇ.. ಆದ್ರೆ, ಒಬ್ಬ ರಾಷ್ಟ್ರ ಭಕ್ತ. ಇನ್ನೊಬ್ಬ ಏನು ಅಂತ ಕಾಮೆಂಟ್ ಮಾಡಲ್ಲ ಎಂದು ಎದ್ದು ಹೋದರು ಈಶ್ವರಪ್ಪ.

Exit mobile version