Site icon Vistara News

Lovers Death : ನೇಣಿಗೆ ಕೊರಳೊಡ್ಡಿ ಪ್ರೇಮಿ ಜತೆ ಸಾವಿನಲ್ಲಿ ಒಂದಾದಳು ನವವಿವಾಹಿತೆ

Lovers Death

ಗದಗ: ಒಂದೇ ಮರಕ್ಕೆ ನೇಣು ಹಾಕಿಕೊಂಡು ಪ್ರೇಮಿಗಳು (Lovers Death) ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ನರೇಗಲ್ ಪಟ್ಟಣದ ಅಪ್ಪಣ್ಣ ಗೊರಕಿ(28), ಲಲಿತಾ ಹಲಗೇರಿ (21) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಘಟನೆ ನಡೆದಿದೆ.

ಒಂದೇ ಊರಿನವರಾದ ಅಪ್ಪಣ್ಣ ಗೊರಕಿ ಹಾಗೂ ಲಲಿತಾ ನಡುವೆ ಪ್ರೀತಿ ಚಿಗುರೊಡೆದಿತ್ತು. ಗಾಢವಾಗಿದ್ದ ಅವರ ಪ್ರೀತಿಗೆ ಮನೆಯವರ ಒಪ್ಪಿಗೆ ಇರಲಿಲ್ಲ ಎಂದು ತಿಳಿದು ಬಂದಿದೆ. ಈ ಮಧ್ಯೆ ಮನೆಯವರ ಬಲವಂತಕ್ಕೆ ಲಲಿತಾ ಇದೇ ಏಪ್ರಿಲ್ 4 ರಂದು ಬೇರೆ ಯುವಕನೊಂದಿಗೆ ಮದುವೆಯಾಗಿದ್ದಳು.

ಇದರಿಂದ ಅಪ್ಪಣ್ಣ-ಲಲಿತಾ ಇಬ್ಬರು ಮನ ನೊಂದಿದ್ದರು. ಅಪ್ಪಣ್ಣ‌ನೊಂದಿಗೆ ನೂರಾರು ಕನಸು ಕಂಡಿದ್ದ ಲಲಿತಾ ಆತನನ್ನು ಮರೆಯಲು ಆಗಿರಲಿಲ್ಲ. ಬೇರೊಬ್ಬನ ಜತೆಗೆ ಮದುವೆ ಆಗಿದ್ದರೂ, ಮನಸ್ಸೆಲ್ಲವೂ ಅಪ್ಪಣ್ಣನೊಂದಿಗೆ ಬೆರೆತು ಹೋಗಿತ್ತು. ಅಪ್ಪಣ್ಣ ಹಾಗೂ ಲಲಿತಾ ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗದೆ ಊರಿನ ಹೊರವಲಯದ ಖಾಲಿ ಜಾಗದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡಿದ್ದಾರೆ.

ನೇಣಿಗೆ ಶರಣಾಗುವ ಮುನ್ನ ಇಬ್ಬರು ಒಂದೇ ಬಣ್ಣದ ಹಾಗೂ ಐ ಲವ್‌ ಯು ಎಂದು ಬರೆದಿರುವ ಒಂದೇ ತೆರನಾದ ಟೀ ಶರ್ಟ್‌ ಧರಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಜಾನೆ ಗ್ರಾಮದ ಜನರು ಗದ್ದೆ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ನರೇಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Dolly Dhananjay: ಡಾಲಿ ಧನಂಜಯ್‌ ಜತೆ ಕೊಡಗಿನ ಕನ್ನಡತಿ ರೊಮ್ಯಾನ್ಸ್‌!

ಫ್ಯಾನಿಗೆ ನೇಣು ಬಿಗಿದುಕೊಂಡು ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌ ಸಾವು; ಡೆತ್‌ನೋಟ್‌ನಲ್ಲಿ ಏನಿದೆ

ಚಿಕ್ಕಬಳ್ಳಾಪುರ: ನೇಣು ಬಿಗಿದುಕೊಂಡು ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌ (Police Head Constable) ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ (Chikkbalapura News) ನಗರದ ಪೊಲೀಸ್ ಕ್ವಾಟ್ರಸ್‌ನಲ್ಲಿ (Police Quarters) ಘಟನೆ ನಡೆದಿದೆ. ನಾಗರಾಜ್ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್‌ ಹೆಡ್‌ ಕಾನ್ಸ್‌ಟೇಬಲ್‌ ಆಗಿದ್ದಾರೆ.

ಡಿ.ಎ.ಆರ್‌ನಲ್ಲಿ ಪೊಲೀಸ್ ಹೆಡ್ ಕಾನ್ಸ್‌ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜ್‌, ಅವರು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ.

ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಇನ್ನೂ ನಾಗರಾಜ್‌ ಬರೆದಿದ್ದ ಡೆತ್‌ ನೋಟ್ ಸಿಕ್ಕಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Drowned in River : ಕಾವೇರಿ ನದಿಯಲ್ಲಿ ಈಜಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು

ನಾಯಂಡಹಳ್ಳಿ ಫ್ಲೈಓವರ್‌ನಿಂದ ಜಿಗಿದು ನವವಿವಾಹಿತ ಆತ್ಮಹತ್ಯೆ

ಬೆಂಗಳೂರು: ನವವಿವಾಹಿತನೊಬ್ಬ ನಾಯಂಡಹಳ್ಳಿ ಫ್ಲೈ ಓವರ್ (Nayandahalli Flyover) ಮೇಲಿಂದ ಜಿಗಿದು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾನೆ. ಈತ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಮೃತನನ್ನು ಯಲಹಂಕ ಮೂಲದ ನವೀನ್ ಎಂದು ಗುರುತಿಸಲಾಗಿದೆ. ನವೀನ್‌ ಸ್ಕೂಟರ್‌ ಅನ್ನು ಫ್ಲೈಓವರ್ ಮೇಲೆ ಪಾರ್ಕಿಂಗ್ ಮಾಡಿ ಏಕಾಏಕಿ ಕೆಳಗೆ ಜಿಗಿದಿದ್ದಾನೆ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ದೌಡಾಯಿಸಿದ್ದು, ಹೆಚ್ಚಿನ ವಿವರ ಕಲೆಹಾಕುತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತಿದೆ.

ನವೀನ್‌ ಕರ್ನಾಕ ವಿದ್ಯುತ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆಯಷ್ಟೆ ಈತ ಮದುವೆಯಾಗಿದ್ದ. ಎರಡು ತಿಂಗಳಿನಿಂದ ಕಾಂಟ್ರಾಕ್ಟ್ ಬೇಸ್ ಮೇಲೆ ಕವಿಕದಲ್ಲಿ ಡಿ ಗ್ರೂಪ್ ಕೆಲಸ ಮಾಡುತ್ತಿದ್ದ. ಶುಕ್ರವಾರ ಬೆಳಗ್ಗೆ ಡ್ಯೂಟಿಗೆ ಹೋಗುತ್ತೇನೆ ಎಂದು ಮನೆಯಿಂದ ಹೊರಟಿದ್ದ ನವೀನ್‌ ನಾಯಂಡಹಳ್ಳಿ ಫ್ಲೈಓವರ್‌ ಮೇಲಿಂದ ಕೆಳಗೆ ಜಿಗಿದಿದ್ದಾನೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version