ಗದಗ : ವೇಗವಾಗಿ ಸಾಗುತ್ತಿದ್ದ ಕ್ಯಾಂಟರ್ ಒಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿ (Canter Overturns) ಗುಂಡಿಗೆ ಬಿದ್ದ ಹಿನ್ನೆಲೆಯಲ್ಲಿ ಮೂವರು ಯುವಕರು ಪ್ರಾಣ ಬಿಟ್ಟಿದ್ದಾರೆ (Three youths dead). ಮೂವರಿಗೆ ಗಾಯಗಳಾಗಿವೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ಘಟನೆ (Road Accident) ನಡೆದಿದ್ದು, ಒಬ್ಬರು ಸ್ಥಳದಲ್ಲೇ ಸಾವು ಕಂಡರೆ ಇನ್ನಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಘಟನೆ ನಡೆಯುತ್ತಿದ್ದಂತೆಯೇ ಚಾಲಕ ಪರಾರಿಯಾಗಿದ್ದಾನೆ.
ನವೀನ್ ಕುಂಬಾರ್ (23) ಸ್ಥಳದಲ್ಲೇ ಮೃತಪಟ್ಟರೆ, ನಾಗಪ್ಪ ಕಾಳಿ (23), ಗಂಗಪ್ಪ ಅಕ್ಕಿ (22) ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟರು. ಮೂವರು ಗಾಯಾಳುಗಳಿಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದವರಾಗಿದ್ದು, ಕುಂದಗೋಳ ದಿಂದ ಕೊಪ್ಪಳ ಜಿಲ್ಲೆಯ ಕನಕಗಿರಿ ಹೋಗುತ್ತಿದ್ದಾಗ ಘಟನೆ ನಡೆದಿದೆ. ಅವರು ಯಾವ ಕಾರಣಕ್ಕಾಗಿ ಈ ವಾಹನದಲ್ಲಿ ಹೋಗುತ್ತಿದ್ದರು. ಯಾವುದಾದರೂ ಕೆಲಸದ ಹಿನ್ನೆಲೆಯಲ್ಲಿ ಪ್ರಯಾಣ ಬೆಳೆಸುತ್ತಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ. ಮೂವರು ಯುವಕರ ದಾರುಣ ಸಾವು ಜನ ಮನಸು ಕಲಕಿದೆ.
ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Murder Case : ಬಾಲಕಿಯ ಪ್ರೇಮಪಾಶದಲ್ಲಿ ಬಿದ್ದಿದ್ದ 19ರ ಹುಡುಗನ ಮರ್ಡರ್; ಬರ್ತ್ ಡೇ ಹೆಸರಲ್ಲಿ ಕರೆಸಿ ಕೊಲೆ!
Child Death : ಟಿಪ್ಪರ್ ಅಟ್ಟಹಾಸ; 4 ವರ್ಷದ ಪುಟ್ಟ ಮಗು ಚಕ್ರದಡಿ ಸಿಲುಕಿ ಸಾವು
ಚಿಕ್ಕೋಡಿ: ನಾಲ್ಕು ವರ್ಷದ ಪುಟ್ಟ ಮಗುವೊಂದು (Four year old Child) ಟಿಪ್ಪರ್ ವಾಹನದಡಿ (Tipper accident) ಸಿಲುಕಿ ದಾರುಣವಾಗಿ ಪ್ರಾಣ ಕಳೆದುಕೊಂಡ (Child death) ಘಟನೆ ಬೆಳಗಾವಿ ಜಿಲ್ಲೆಯ (Belagavi news) ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ.
ಅದ್ವೈತ್ ಅಕ್ಷಯ್ ನಾಶಿಪುಡಿ (4) ಚಕ್ರದಡಿ ಸಿಲುಕಿ ಮೃತಪಟ್ಟ ಪುಟ್ಟ ಮಗು. ರಸ್ತೆ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಒಮ್ಮೆಗೇ ವಾಹನದ ಹಿಂಬದಿ ಚಕ್ರಕ್ಕೆ ಸಿಲುಕಿ ಮಗು ಮೃತಪಟ್ಟಿದೆ. ಇಸ್ಲಾಂಪುರ ಗ್ರಾಮದ ಶಾಬಂದರ್ ವಂಟಮೂರಿ ರಸ್ತೆಯಲ್ಲಿ ವೇಗವಾಗಿ ಬಂದ ಟಿಪ್ಪರ್ ಮಗುವನ್ನು ಬಲಿ ಪಡೆದುಕೊಂಡಿದೆ.
ಸ್ಥಳಕ್ಕೆ ಯಮಕನಮರಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಸಾವಿರಾರು ಜನರು ನೆರೆದಿದ್ದು, ಮಗುವಿನ ಹೆತ್ತವರು ಮತ್ತು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಆಟವಾಡುತ್ತಿದ್ದ ಪುಟ್ಟ ಮಗುವನ್ನು ತಂದು ಕೊಡಿ ಎಂದು ಹೆತ್ತವರು ಮತ್ತು ಅಜ್ಜಿ ಕಣ್ಣೀರು ಹಾಕುತ್ತಿರುವುದು ಎಂಥವರನ್ನಾದರೂ ಕರಗಿಸುತ್ತದೆ.